ಇದು ಬುರ್ಖಾ.
ಶತಮಾನಗಳಿಂದ
ಹಲವಾರು
ನಾನು ಮರುಮಾತಿಲ್ಲದೆ
ಮೌನವಾಗಿ
ಹೊತ್ತು ಬಂದ ಬುರ್ಖಾ.
ಅಂದು ಹಿಂದೂಮ್ಮೆ
ಇದರ ಒಳಗೆಯೇ ನಾನು
ಸಿಡಿಮಿಡಿಕೊಂಡು
ಮೌನವಾಗಿ ಮಿಡಿಕಿದ್ದೆ.
ಬಿಕ್ಕಳಿಸಿ ಅತ್ತಿದ್ದೆ.
ಬಿಡುಗಡೆಗಾಗಿ ಹಲುಬಿದ್ದ.
ಬಾಲ್ಯದ ಆ ನೆನಪು
ಈಗಲೂ ಮಾಸಿಲ್ಲ
ನನಗಿನ್ನೂ ನೆನಪಿದೆ
ಅಂದು ಗೆಳೆಯರ ಮಧ್ಯ.
ಆನಂದದಿಂದ ನಲಿಯುತ್ತಿದ್ದೆ.
ಹರ್ಷದಿಂದ ನಲಿಯುತ್ತಿದ್ದೆ.
ಹದಿಮೂರರಲ್ಲೊಮ್ಮೆ
ಏನಾಯಿತೋ ಕಾಣೆ.
ನೀನೀಗ ಹೆಂಗುಸಾದೆ
ಎಂದರು ನನ್ನವರು.
ಮೂಲಿಯಲಿ ಕೂಡಿಸಿ
ಮರೆಮಾಡಿ ತಿನ್ನಿಸಿ
ಮುದ್ದೆಯಾಗಿ ಬೆಳೆಸಿದರು ನನ್ನ
ಸೂರ್ಯನನೇ ಕಾಣದ ದೇಹ
ಕ್ಷಯದ ಆಗರವಾಗಿ
ಹಳದಿಯಾಗಲು ಕೊನೆಗೆ
ಸೌಂದರ್ಯ ಹೆಚ್ಚಿದೆಯೆಂದು
ಗೌರವದೀ ಕಂಡರು ನನ್ನ.
ಶಾಸ್ರೋಕ್ತವಾದ ದಾಸ್ಯತ್ವ ವಹಿಸಿ,
ದೊಡ್ಡವಳಾದುದಕ್ಕೆ ಲೈಸನ್ಸ್
ಕೊಡಿಸಿದರು ನನ್ನ.
ಬೆಳೆಯಲಿರುವ ಚಿಗುರಿಗೆ
ಮೂಲದಲ್ಲೇ ಚಿವುಟಿ
ಮುಳ್ಳಿನಾ ಬೇಲಿಯಿಟ್ಟು
ವ್ಯಕ್ತಿತ್ವಕ್ಕೆ ಕೊಳ್ಳಿಯಿಟ್ಟು
ಆಕ್ರಮಣ ಮಾಡಿದರು ಇವರು
ಇವರೇ ನನ್ನವರು.
*****