ಮೇಲು ಮೇಲಕೆ ಮೇಲು ಮೇಲಕೆ
ಮೂಲ ವತನಕೆ ಸಾಗಿದೆ
ಬಡವ ದೂಡುತ ಹಗುರವಾಗುತ
ದಿವ್ಯ ಬೆಳಕನು ಸೇರಿದೆ
ಹಗುರವಾಗಿದೆ ಹರುಷ ತುಂಬಿದೆ
ಅಂತರಂಗವು ಅರಳಿದೆ
ಇಗೋ ಶೀತಲ ಶಾಂತಿ ದಲದಲ
ಯೋಗವಲ್ಲರಿ ಚಿಗುರಿದೆ
ಶಬ್ದ ಇಲ್ಲದ ಸೀಮೆ ಇಲ್ಲದ
ಬೆಳಕು ಬೆಳಕನೆ ಹೊಮ್ಮಿದೆ
ಬೆಳಕು ನೀಡುತ ಬೆಳಕು ಪಡೆಯುತ
ಬೆಳಕಿನಾಟವ ಆಡಿದೆ
ಪ್ರೇಮ ಸಾಗರ ಶಾಂತಿ ಸಾಗರ
ಸುಖದ ಸಾಗರ ಸುಂದರಾ
ನಿತ್ಯ ಪರಮಾನಂದ ಹೊಸತರ
ಶಿವನ ನಿರ್ಮಲ ಮಂದಿರಾ
*****