ಗಗನಚುಂಬಿ ಮಹಡಿಗಳಿಗೆ
ಮುತ್ತಿಡುವ ಆತುರದಿ…
ನಾ… ನೀ… ಎನ್ನುತಲೆ ಮುತ್ತಿಟ್ಟವು
ಮನುಕುಲದ ಬುಡವೇ ಅಲುಗಾಡಿತು
ಬಾಂಧವ್ಯ ಬೆಸೆದು ನಿಂತ ಮಹಡಿಗಳು
ಒಮ್ಮೆಲೆ ಜಾರಗುಂಡಿಯಾಟವಾಡಿದವು
ಬಿದ್ದ ಗತಜೀವನ ಮಹಡಿಗಳು
ಮಣ್ಣು ಧೂಳಿನ ಮುಸುಕಲಿ ಮುಚ್ಚಿದವು
ಕನಸುಗಳ ಬೆನ್ನೇರಿ ಹೊರಟವರು
ಜರಿದ ಮಹಡಿಗಳಡಿ ಶವವಾದರು
ವಿಧಿ-ವಿಲಾಸವು ಗಹಗಹಿಸುತಲಿ..
ಮನುಕುಲಕೆ ಪ್ರಶ್ನೆ ಕೇಳುತಲಿದ್ದವು
ನಾ… ನಾನೇ… ನಾನು
ಎನ್ನುತ ಅಹಂಗಳ ಸೆರೆಯಾಗಿ
ಸುಂದರ ಬದುಕಿಗೆ ಬೆಂಕಿಯಿಡುತ
ಆಸೆ-ಅಸೂಯೆ… ಆತಂಕಗಳ ಗೂಡಾಗಿತ್ತು
ತಾನೇ ತಾನು ಭಯ ಆವೇಶಗಳಡಿ
ಆತೃಪ್ತತೆಯ ಆತಂಕವಾದಿಯಾಗುತ
ಹರಡುತಿಹ ಅಸಮಾನತೆಯಲಿ
ಭಯೋತ್ಪಾದನೆಯ… ಬೆಂಕಿ…
ಮನುಕುಲದ ನಗುವ ಸುಡುತ
ಶಾಂತಿ-ಬದುಕು-ಅಳಿಸಿದವು
*****