ಹಳ್ಳ ಇರುವ ಕಡೆಗೆ
ನೀರು ಹರಿವುದು
ನಾನು ನಿನ್ನ ಕಡೆಗೆ
ಯಾಕೆ ಹರಿವುದು! //ಪ//
ಮುಚ್ಚಿದರೂ ಕಣ್ಣು
ಅಲ್ಲಿ ತೂರುವೆ
ಬಚ್ಚಿಟ್ಟುಕೊಂಡು ಒಳಗೆ
ಆಟವಾಡುವೆ
ಇದು ನನ್ನ ತಪ್ಪೆ
ಹೇಳು ನನ್ನ ನಲ್ಲೆ
ನಾ ಏನಾಗುವೆನು
ಎಲ್ಲ ನೀನು ಬಲ್ಲೆ!
ಇರುವ ಬದುಕು ಒಂದು
ಆಗಬೇಕು ಪೂರ್ಣ
ಅದರದು ಅಪೂರ್ಣ
ಅದಕೆ ನೀ ಕಾರಣ
ಪ್ರೀತಿಗೊಂದೆ ನೀತಿ
ಇಲ್ಲ ಯಾವ ಭೀತಿ
ಎಲ್ಲ ತಿಳಿದು ನೀನು
ಒಳಗೆ ಯಾಕೆ ಕುಳಿತಿ?
*****