ಹರಿಯಲಿ ಮುಂದೆ ಹರಿಯಲಿ
ಮಾನವ ಪ್ರೇಮದ ಮನಸುಗಳು
ಒಂದಾಗಿ… ಒಂದೆಡೆಗೆ… ಒಂದು ಪಾತ್ರದಲಿ
ಹಳ್ಳ ತೊರೆಗಳಂತೆ.
ಹುಟ್ಟಿ
ನಾಯಿ ಕೊಡೆಗಳಂತೆ
ಒಂದಕ್ಕೊಂದು ಸೇರದೆ
ಬಿಡಿ, ಬಿಡಿಯಾಗಿ
ತುಸು ಅಲ್ಲಿ ಇಲ್ಲಿ ಸಾಗಿ
ಸ್ವಾರ್ಥ, ಪ್ರತಿಷ್ಠೆ, ಶತೃ ಭಾವಗಳ
ಬೆಟ್ಟಗುಡ್ಡಗಳನೊದೆದು ಕೆಡವಿ
ಕೊರೆದು, ಕೊಚ್ಚಿ ಹಾಕುವಲ್ಲಿ ಸೋತು
ಅಲ್ಲೇ ನಿಂತು
ಹಿಂಗಿ ಹೋಗಿ ವಿಫಲವಾದರೆ
ಹುಟ್ಟುವವೆ ಜೀವ ನದಿಗಳು?
ಎದ್ದು ನಿಲ್ಲುವುದೆ ಹಸಿರು ಸಾಗರ?
ಮೊರೆವುದೆ ನಗು ಧರೆಯಲಿ?
*****