ಭಾಷೆ ಹಲವು ಭಾವನೆ ಒಂದೇ
ಭಾಷೆಗಾಗಿ ಬಡಿದಾಡುವವರು
ಮನುಜನು ಮಾತ್ರ ಹಿಂದೆ
ಎಲ್ಲಾ ಜೀವಿಗಳಿಹವು ಮುಂದೆ
ಭಾಷೆ ಎಂದರೇನರ್ಥ ತಿಳಿಯಬೇಕು
ಮಾತನಾಡುವ ಮೊದಲು ಓ ಮನುಜ
ಭಾಷೆಯೊಂದು ಭಾವನೆಗಳ
ಇನಿಮಯ ಮಾಧ್ಯಮ ಅಷ್ಟೇ ಅಂತ
ಯಾವ ಭಾಷೆಯಲ್ಲಿ ಮಾತನಾಡಿದರೂ
ಅರ್ಥದಲ್ಲಿ ಬದಲಾಗುವುದೇನು?
ಮೂಕರನ್ನ ನೋಡಿದರೆ ತಿಳಿಯುವುದು
ಎಲ್ಲಾ ಭಾಷೆಗಳ ಒಡೆಯರು ಅವರೆಲ್ಲ
ನಮ್ಮ ಹುಟ್ಟಿಗಾಗಿ ಕಲಿಯಬೇಕು
ಮಾತೃ ಭಾಷೆಯ ಎಲ್ಲರೂ
ನಮ್ಮ ಬದುಕಿಗಾಗಿ ಅನ್ಯ ಭಾಷೆ
ಕಲಿಯುವ ಅನಿವಾರ್ಯತೆಯ ಅರಿವಿರಬೇಕು
ಭಾಷೆಗಳ ಜೊತೆಗೆ ಬೇಡ ಬಡಿದಾಟ
ಇರಲಿ ಭಾವನೆಗಳ ಜೊತೆಗೆ ಒಡನಾಟ
ನಮ್ಮ ಮಾತೃ ಭಾಷೆಯ ಪೋಷಿಸುವ!
ಅನ್ಯ ಭಾಷೆಯ ಗೌರವಿಸುವ!
*****