ಆಯಸ್ಸು ಮುಗಿದಿಲ್ಲ ಕಾಲ ಮಿಂಚಿಲ್ಲ
ಇನ್ನು ಈ ಗಳಿಗೆ ನಿನ್ನದು ಪಡೆದುಕೊ
ಒಳಿತು ಕೆಡಕುಗಳೆರಡು ನಿನ್ನೆದುರು ಇರಲು
ಯೋಚಿಸಿ ಆಯ್ಕೆ ಮಾಡಿ ನಿನ್ನ ಸುಧಾರಿಸಿಕೊ
ಕ್ಷಣ ಹೊತ್ತಿನ ಸುಖ ಭ್ರಮೆಯಲ್ಲಿ ತೇಲಿ
ನಿನ್ನ ನೀನು ನಾಶ ಮಾಡಿಕೊಳ್ಳಬೇಡ
ಮನಸ್ಸಿನ ಆಟಗಳೀಗೆ ನೀನು ನಂಬಿ
ಆಸೆಗಳಿಗೆ ದಾಸ ನೀ ನಾಗಬೇಡ
ಆನಂದ ಮಾರ್ಗ ಅರಸಲು ನೀ ಸಾಗಿ
ವಿಷಯ ಲೋಲುಪತೆಯಲಿ ತೇಲದಿರು
ಭೋಗಗಳ ಲಾಲಸೆಗೆ ನೀ ಬಲಿ ಬಿದ್ದು
ವ್ಯರ್ಥ ನಿನ್ನ ಜನುಮ ಕಳೆಯದಿರು
ನಿನ್ನೊಳಗಿನ ಭಾವ ದೇವನಿಗರ್ಪಿಸು
ನಿನ್ನೊಳಗಿನವಗೆ ತನು ನಿತ್ಯ ಭಜಿಸಲು
ಎಲ್ಲರಲ್ಲೂ ನೀನು ದೇವರನ್ನೆ ನೋಡ
ಮಾಣಿಕ್ಯ ವಿಠಲನಲಿ ದೈವತ್ವ ನಲಿಯಲಿ
*****