ಬ್ರಾಂಡಿಯಿಂದ, ಪೆಟ್ರೋಲ್‌ನಿಂದ, ಸಾಧ್ಯವಾದರೆ ~ಆಸಿಡ್‌ನಿಂದ
ಅವಳನ್ನು ಸುಟ್ಟು ಹಾಕಬೇಕು;
ಅಲ್ಲಿ, ಆ ಪ್ರೇಮ ಮತ್ತೊಮ್ಮೆ ಭವ್ಯ ಸೌಧಗಳಿಂದ ಇಣುಕುವಂತಿದ್ದರೆ
ನಾನು ಬಹುಕಾಲ ದುಃಖಿಸುತ್ತೇನೆ.
ಅವಳೇ ಒಗೆದು ಇಸ್ತ್ರಿ ಮಾಡಿ, ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು
ಬರೆದುಕೊಟ್ಟಿದ್ದ ನನ್ನ ಗಿಳಿ ಹಸಿರುಬಣ್ಣದ ಲೀ ಶರ್ಟ್ ಅನ್ನು
ಧರಿಸಲು ವಾರ್ಡ್‌ರೋಬ್‌ನ ಕಡೆ ಮುನ್ನುಗ್ಗುತ್ತೇನೆ,
ದೈತ್ಯ ಮರಗಳನ್ನು ಕೆಡವಿಕೊಂಡು.
*****