ಪರಿಸರಕ್ಕೆ ಕಂಟಕ ಪ್ರಾಯವಾಗಿ ವಾಯುಮಾಲಿನ್ಯವನ್ನು ಹದಗೆಡಿಸುವ, ಮತ್ತು ಭೂಮಿಯಲ್ಲಿ ಕರಗದೇ ರೈತರಿಗೆ ವೈರಿಯಾಗಿ ಪರಿಣಮಿಸಿರುವ ಪ್ಲಾಸ್ಟಿಕ್ ಎಲ್ಲರಿಗೂ ಗೊತ್ತು. ಇದು ಹೇಗೆ ಮಾಡಿದರೂ ನಾಶ ಹೊಂದಲಾರದು, ಕನಿಷ್ಟ ಮೂರು ನಾಲ್ಕು ನೂರು ವರ್ಷಗಳವರೆಗೆ ಭೂಮಿಯಲ್ಲಿ ಕರಗದೇ ಜಲ ಸಂಚಯಕ್ಕೆ ತೊಡಕಾಗುತ್ತಿತ್ತು ಸುಟ್ಟರೂ ಸಹಿತ ಪರಿಸರ ಕಷ್ಮಲಗೊಳ್ಳುವ ಇಂಗಾಲ ಡೈ ಆಕ್ಸೈಡ್ ಉತ್ಪತ್ತಿಯಾಗಿ ಜನರ ಉಸಿರಾಟಕ್ಕೆ ಮಾರಕವಾಗಿತ್ತು. ಇದರ ನಿರ್ನಾಮಕ್ಕೆ ಮದ್ದೇ ಇರಲಿಲ್ಲ ಎಂಬ ಸಂದರ್ಭದಲ್ಲಿ ಭಾರತೀಯ ಯುವ ವಿಜ್ಞಾನಿ ಪಂಕಜ ಅವಧಿಯು ಅವರ ಈ ಪಾಲಥಿನ್ ಅನ್ನು ಭಕ್ಷಿಸುವ ೪-೫ ಕೀಟಗಳನ್ನು ಶೋಧಿಸಿದ್ದಾರೆ.
ಛತ್ತೀಸಗಡದ ಕೃಷಿ ವಿಜ್ಞಾನಿಯಾದ ಇವರು ಸೊಸೈಟಿ ಫಾರ್ ಪಾರ್ಥೇನಿಯಂ ಮ್ಯಾನೇಜ್‌ಮೆಂಟ್ ಸಂಯೋಜಕರಾಗಿ ತಮ್ಮ ಖಾಸಗಿ ಪ್ರಯೋಗಾಲಯದಲ್ಲಿ ೧೩೫ ವಿವಿಧ ಕೀಟಗಳ ಮೇಲೆ ೨ ವರ್ಷ ಪ್ರಯೋಗ ನಡೆಯಿಸಿದರು. ಕೊನೆಗೆ ೫ ವಿವಿಧ ಕೀಟಗಳು ಪಾಲಿಥಿನ್ ತಿನ್ನುವಂತಹವು ಎಂಬುವುದು ಖಚಿತವಾಯಿತು. ಇದಕ್ಕಾಗಿ ‘ಪ್ಲಾಸ್ಟಿಕ್ ಈಟಿಂಗ್ ಆರ್ಗೆನಿಸಂ ಪರಿಯೋಜನಾ’ ಹುಟ್ಟು ಹಾಕಿದರು. ಈ ಪ್ಲಾಸ್ಬಿಕ್ ತಿನ್ನುವ ಕೀಟಗಳಿಗೆ ‘ಪ್ಲಾಸಿಕ್ ಬಗ್’ ಎಂದು ಹೆಸರಿಸಿದ್ದಾರೆ. ಸದ್ಯಕ್ಕೆ ಈ ಕೀಟದ ಇನ್ನಿತರ ವಿವರಗಳು ಮತ್ತು ಅದರ ವೈಜ್ಞಾನಿಕ ಹೆಸರುಗಳನ್ನು ಅವಧಿಯು ರಹಸ್ಯವಾಗಿ ಇರಿಸಿದ್ದಾರೆ.
೧೯೯೯ ರಲ್ಲಿಯೇ ಈ ಬಗ್ಸ್‌ಗಳನ್ನು ಕಂಡು ಹಿಡಿದರೂ ಇವುಗಳ ಜೀವನ ಚಕ್ರ ಇನ್ನು ವಿಸ್ತಾರವಾದ ಅಧ್ಯಯನಕ್ಕಾಗಿ ಹೆಚ್ಚಿನ ಸಮಯ ತೆಗೆದುಕೊಳ್ಳಲಾಯಿತೆಂದು ಹೇಳುತ್ತಾರೆ. ಚಳಿಗಾಲದಲ್ಲಿ ಸಕ್ರಿಯವಾಗಿ ಈ ಕೀಟಗಳು ರೈತನಿಗೆ ಮಿತ್ರನಂತೆ ಇರುತ್ತವೆಂದೂ ಹೇಳುತ್ತಾರೆ. ಈ ಕೀಟಗಳು ೮೦ ವಿವಿಧ ಗಿಡಗಳ ಎಲೆಗಳನ್ನು ತಿನ್ನುವುದರ ಜತೆಗೆ ಅಲ್ಲಿನ ಕೆಲವು ಮುಖ್ಯ ಬೆಳೆಗಳಿಗೆ ವೈರಿಯಾಗಿರುವ ಕಳೆಗಿಡಗಳನ್ನು ತಿಂದು ಹಾಕುತ್ತವೆ. ಇನ್ನೂಂದು ವಿಶೇಷವೆಂದರೆ ಕಪ್ಪು ಬಣ್ಣದ ಪಾಲಿಥಿನ್ ತಿನ್ನುವುದು ಇದರಲ್ಲಿ ಒಂದು ಕೀಟಕ್ಕೆ ಬಹು ಇಷ್ಟವೆಂದು ಹೇಳುತ್ತಾರೆ. ಇವು ಹಣ್ಣಾದ ಮಾವಿನ ಎಲೆಯಂಥಹ ೧೦-೧೨ ಪಾಲಿಥಿನ್ ಎಲೆಗಳನ್ನು ೩-೪ ಗಂಟೆಗಳಲಿ ತುಂಬ ರುಚಿವಹಿಸಿ ತಿನ್ನುತ್ತವೆ ಮತ್ತು ಜೀರ್ಣಿಸಿಕೊಳುತ್ತವೆ.
*****