ಜನ, ಮನಗಳನ್ನು ಕೊಲ್ಲುವ ಜೈವಿಕ ಶಸ್ತ್ರಾಸ್ತ್ರಗಳು

ಜನ, ಮನಗಳನ್ನು ಕೊಲ್ಲುವ ಜೈವಿಕ ಶಸ್ತ್ರಾಸ್ತ್ರಗಳು

‘ಯುದ್ಧ’ವೆಂದರೆ ಭೀಕರವಾದದ್ದು ರಕ್ತಪಾತ, ಹೆಣಗಳ ರಾಶಿ, ರಣರಂಗ, ಗುಂಡುಗಳ ಸಿಡಿಮದ್ದು! ಹೀಗೆ ಹಿಂಸಾತ್ಮಕ ಕ್ರಿಯಾಪರ್ವ ಕೇವಲ ಜನರನ್ನು ಸಾಯಿಸಿ ನೆಲವನ್ನು ಜಯಿಸಿ ಅನುಭೋಗಿಸುವ ವ್ಯವಸ್ಥೆ ಕೆಲವು ಕಾಲವಿತ್ತು. ಈಗಂತೂ ಅಣ್ವಸ್ತ್ರಗಳು, ರಾಸಾಯನಿಕ ಅಸ್ತ್ರಗಳು, ಜೈವಿಕ ಅಸ್ತ್ರಗಳನ್ನು ಯತೇಚ್ಛವಾಗಿ ಗುಪ್ತಗಾಮಿನಿಯಾಗಿ ತಯಾರಿಸುತ್ತ ಶತೃರಾಷ್ಟ್ರಗಳ ನೆಲ, ಜಲವನ್ನು ಜನಮನವನ್ನೂ ಧ್ವಂಸಗೊಳಿಸಲಾಗುತ್ತದೆ. ಮುಂದೆಂದೂ ಸಹ ಈ ನೆಲದಲ್ಲಿ ಜೀವಕೋಶಗಳೇ ಸೃಷ್ಟಿಯಾಗದಂತೆ ಮಾಡಲಾಗುತ್ತದೆ. ಕೇವಲ ಜನವನ್ನು ಆಕ್ರಮಿಸಿ ಉಳಿದ ಜನರನ್ನೂ, ಭೂಮಿಯನ್ನೂ ಅನುಭವಿಸುವುದರ ಬದಲು ನಿರಂತರವಾಗಿ ಜೀವಕಳೆಯೇ ಈ ಸ್ಥಳದಲ್ಲಿ ಅಂಕುರಿಸದಂತೆ ಮಾಡಲಾಗುತ್ತದೆ. ಇವುಗಳಿಗೆ ಸಮೂಹ ನಾಶದ ಅಸ್ತ್ರಗಳೆಂದೇ ಕರೆಯಲಾಗುತ್ತದೆ. ಇವುಗಳಲ್ಲಿ ಪ್ರಮುಖವಾಗಿ ರಾಸಾಯನಿಕ ಅಸ್ತ್ರಗಳು, ನ್ಯೂಕ್ಲಿಯರ್ ಮತ್ತು ಜೈವಿಕ (ಕೆಮಿಕಲ್, ನ್ಯೂಕ್ಲಿಯರ್, ಬಯಲಾಜಿಕಲ್) ಅಸ್ತ್ರಗಳೆಂದು ವಿಭಾಗಿಸಲಾಗಿದೆ.

ರಾಸಾಯನಿಕ ಅಸ್ತ್ರಗಳು: ಈ ಅಸ್ತ್ರಗಳು ದ್ರವರೂಪದಲ್ಲಿರುತ್ತವೆ. ಈ ರಾಸಾಯನಿಕ ದ್ರವವನ್ನು ಶತೃಪ್ರದೇಶದ ಮೇಲೆ ಸಿಂಪಡಿಸುವುದು, ಅಥವಾ ಗಾಳಿ ಬೀಸುವ ದಿಕ್ಕನ್ನು ಆಧರಿಸಿ ದ್ರವವನ್ನು ಶತೃ ಪ್ರದೇಶದ ಮೇಲೆ ಚೆಲ್ಲಲಾಗುತ್ತದೆ. ಈ ದ್ರವವು ನಿಧಾನವಾಗಿ ಆವಿಯಾಗಿ ಪರಿವರ್ತನೆ ಹೊಂದಿ ಗಾಳಿಯಲ್ಲಿ ಮಿಶ್ರವಾಗಿ ಆ ಗಾಳಿಯನ್ನು ಸೇವಿಸಿದ ಜನಗಳಿಗೆ ಅಪಾಯವನ್ನುಂಟುಮಾಡುತ್ತದೆ. ಈ ರೀತಿಯ ರಾಸಾಯನಿಕ ಅಸ್ತ್ರಗಳಿಂದ ರಕ್ಷಣೆ ಪಡೆಯಲು ಜನ ಅನಿಲ ಮುಖವಾಡಗಳನ್ನು ಕಂಡು ಹಿಡಿದರು. ಅನಿಲದ ಮುಖವಾಡವು ಕೇವಲ ಉಸಿರಾಟದಲ್ಲಿ ರಕ್ಷಣೆ ನೀಡಬಲ್ಲದು ಎಂಬುದನ್ನು ಕಂಡುಕೊಂಡ ವಿಜ್ಞಾನಿಗಳು ಚರ್ಮದ ಮೇಲೆ ತೀಕ್ಷ್ಣ ಪರಿಣಾಮ ಉಂಟುಮಾಡಬಲ್ಲ ರಾಸಾಯನಿಕ ಅನಿಲಗಳನ್ನು ಸೃಷ್ಟಿಸಲಾರಂಭಿಸಿದರು. ಅವುಗಳಲ್ಲಿ ಮೊದಲು ಬಂದದ್ದು ಮಸ್ಟರ್ಡ್‌ಗ್ಯಾಸ್ (ಸಾಸುವೆ ಅನಿಲ). ಇದು ಚರ್ಮದ ಒಳಸೇರಿ ಮಾಂಸದಲ್ಲಿ ಇಳಿಯುತ್ತದೆ. ನಂತರ ಹುಣ್ಣುಗಳಾಗಿ ಬೊಕ್ಕೆಗಳು ಏಳುತ್ತವೆ. ಇನ್ನೂ ಈ ಗಾಳಿಯಿಂದ ಕೆಲವೇ ಸೆಕೆಂಡುಗಳಲ್ಲಿ ಸಾವು ತರಬಹುದಾದ ಸರಿನ್, ಟಾಬೂನ್ ಎಂಬ ಅನಿಲಗಳನ್ನು ಕಂಡು ಹಿಡಿಯಲಾಗಿದೆ. ಈ ಅನಿಲಗಳನ್ನು ಫಿರಂಗಿಗಳ ಮೂಲಕ ಅಥವಾ ವಿಮಾನಗಳ ಮೂಲಕ ಶತೃಸೈನ್ಯ ಅಥವಾ ಜನ ಇರುವ ಭೂಮಿಯ ಮೇಲೆ ಹಾಕಬಹುದು. ಇದರಿಂದಾಗುವ ದುಷ್ಪರಿಣಾಮಗಳನ್ನು ಅರಿತು ನಿಷೇಧಿಸಲಾಯಿತು. ಆದಾಗ್ಯೂ ಕೆಲವು ರಾಷ್ಟ್ರಗಳು ರಹಸ್ಯವಾಗಿ ಇಂತಹ ಅಸ್ತ್ರಗಳನ್ನು ಉತ್ಪಾದಿಸುತ್ತಲಿವೆ ಎಂಬ ವರದಿ ಇದೆ. ರಶಿಯಾ, ಅಮೇರಿಕಾ, ಇರಾಕ್ ದೇಶಗಳು ಇಂತಹ ಅನಿಲಗಳನ್ನು ಹೊಂದಿದ್ದ ಬಗ್ಗೆ ಅವೇ ಖಾತ್ರಿ ಪಡಿಸಿವೆ. ಆದಾಗ್ಯೂ ಇಂತಹ ಅಸ್ತ್ರಗಳನ್ನು ಬಳಸುವುದು ಕಠಿಣವಾಗಿದೆ.

ಜೈವಿಕ ಅಸ್ತ್ರಗಳು: ಅಣು ವಿಕಿರಣ ಅಸ್ತ್ರಗಳಷ್ಟೇ ಭೀಕರವಾದ ಮತ್ತೊಂದು ಅಸ್ತ್ರವೇ ಜೈವಿಕ ಅಸ್ತ್ರ. ಮಾನವ ದೇಹದ ರಕ್ಷಣಾ ವ್ಯವಸ್ಥೆಯ ಮೇಲೆ ದಾಳಿ ಮಾಡಿ ಅದನ್ನು ನಾಶ ಮಾಡಬಲ್ಲ ಜೈವಿಕ ವೈರಸ್‌ಗಳಿಂದಾದ ಅಸ್ತ್ರ ಇದಾಗಿದೆ. ಈ ರೀತಿಯ ಜೈವಿಕ ಅಸ್ತ್ರಗೆಳಲ್ಲಿ ‘ಅಂತ್ರಾಕ್ಸ್’ ಕಾಯಿಲೆ ತರಬಲ್ಲ ವೈರಸ್ ಅತ್ಯಂತ ಅಪಾಯಕಾರಿಯಾಗಿದೆ. ಉಸಿರಾಟದ ಮೂಲಕ ಮಾನವನ ದೇಹವನ್ನು ಪ್ರವೇಶಿಸುವ ವೈರಸ್ ಕೆಲವು ದಿನಗಳವರೆಗೆ ಯಾವುದೇ ರೀತಿಯ ಅಪಾಯದ ಸೂಚನೆಯನ್ನು ನೀಡಲಾರವು. ಆದರೆ ಕೆಲವು ದಿನಗಳ ನಂತರ, ಇದರ ದುಪ್ಪರಿಣಾಮಗಳು ಗೋಚರಿಸಲಾರಂಭಿಸುತ್ತವೆ. ಮೊದಲ ಹಂತದಲ್ಲಿ ಫ್ಲೂ ನಂತರ ಕೆಮ್ಮು, ಸಣ್ಣದಾಗಿ ಎದೆನೋವು ಕಾಣಿಸಿಕೊಳ್ಳುತ್ತದೆ. ನಂತರ ತೀವ್ರವಾದ ಉಸಿರಾಟದ ಸಮಸ್ಯೆ ಉಂಟಾಗಿ ಕೊನೆಗೆ ೩೦ ದಿನಗಳೊಳಗಾಗಿ ಸಾವು ನಿಶ್ಚಿತವಾಗಿ ಬಿಡುತ್ತದೆ.

ನ್ಯೂಕ್ಲಿಯರ್ ಅಣ್ವಸ್ತ್ರಗಳು : ಈ ಅಣ್ವಸ್ತ್ರದ ಅಪಾಯ ಭೀಕರವಾದುದು ಎಂದು ಹೇಳಬಹುದು. ಈ ಅಸ್ತ್ರಗಳನ್ನು ಸಿಡಿಸಿದಾಗ ಹೊಮ್ಮುವ ಕಿರಣಗಳು ಮಾನವ ದೇಹದ ಅಸ್ತಿಮಜ್ಜೆಯ ನೆಲೆಗಳನ್ನು ನಾಶಗೊಳಿಸುತ್ತದೆ. ಇವುಗಳ ದೊಡ್ಡತೊಂದರೆ ಎಂದರೆ ಈ ಆಸ್ತ್ರಗಳು ವರ್ಷಗಟ್ಟಲೆ ತಮ್ಮ ಭೀಕರ ಪರಿಣಾಮವನ್ನು ಬೀರುತ್ತಲೇ ಇರುತ್ತವೆ. ಅತ್ಯಂತ ಭಯಾನಕಗಳ ಅಸ್ತ್ರಗಳ ಸಾಲಿನಲ್ಲಿ ಬೋಟುಲಿಸಂ ಕಾರಣ, ಕಾಂಗೋ- ಕ್ರಿಮೀನ್ ವೈರಸ್, ಎಬೋಲಾ, ಹಾಂಟಾ ವೈರಸ್, ಲಾಪ್ಪಾ, ರಿಪ್‌ವ್ಯಾಲಿ ವೈರಸ್, ಎಂಬ ವಿನಾಶಕಾರಿ ಅಸ್ತ್ರಗಳು ತುಂಬಿವೆ. ಈ ಎಲ್ಲ ವೈರಸ್‌ಗಳ ವಿಶೇಷವೆಂದರೆ ಇವುಗಳ ಗಾತ್ರ ಇವು ೫ ಮೆಕ್ರಾನ್‌ಗಿಂತಲೂ ಕಡಿಮೆ ಗಾತ್ರ ಹೊಂದಿದ್ದು ಗಾಳಿಯಲ್ಲಿ ಬಹಳಷ್ಟು ಕಾಲ ತೇಲಾಡಿಕೊಂಡಿರಬಲ್ಲವು. ಈ ಪ್ರದೇಶದಲ್ಲಿ ಓಡಾಡುತ್ತಿರುವ ಏನರಿಯದ ವ್ಯಕ್ತಿಗಳು ಈ ಗಾಳಿಯನ್ನು ಸೇವಿಸಿದಲ್ಲಿ ಈ ವೈರಸ್‌ಗಳು ಅವರ ದೇಹದಲ್ಲಿ ಪ್ರವೇಶಿಸಿ ಆಘಾತವನ್ನುಂಟು ಮಾಡುತ್ತವೆ. ಮಾತ್ರವಲ್ಲ ಮಾನವನ ಉಸಿರಾಟದ ರಕ್ಷಣಾ ವಿಧಾನಗಳಿಂದ ತಪ್ಪಿಸಿಕೊಂಡು ಶ್ವಾಸಕೋಶವನ್ನು ಪ್ರವೇಶಿಸುತ್ತವೆ. ನಂತರ ರಕ್ತನಾಳಗಳಿಗೆ ಈ ವೈರಸ್‌ಗಳು ಸೇರಿಕೊಳ್ಳುತ್ತವೆ. ಹೀಗಾದಾಗ ಯಾವುದೇ ವೈದ್ಯಕೀಯ ಚಿಕಿತ್ಸೆ ಇಲ್ಲದೇ ಉಸಿರಾಟ ನಡೆಸಿ ತೊಂದರೆಗೀಡಾಗಿ ಮೃತ್ಯುವನ್ನು ಅಪ್ಪುತ್ತಾರೆ.

ರಕ್ಷಣಾ ಯೋಜನೆಗಳು : ಈ ಭೀಕರ ಅಸ್ತ್ರಗಳ ವೈರಸ್‌ಗಳಿಂದ ತಪ್ಪಿಸಿಕೊಳ್ಳಲು ವಿಜ್ಞಾನಿಗಳು ಸತತವಾಗಿ ಪ್ರಯತ್ನ ಮಾಡುತ್ತಲೇ ಇದ್ದಾರೆ. ಸರಕಾರ ಮತ್ತು ರಾಸಾಯನಿಕ ಕಂಪನಿಗಳು ಮತ್ತು ಜೀವ ವಿಜ್ಞಾನ ಸಂಸ್ಥೆಗಳ ನಡುವೆ ಹೆಚ್ಚು ನಿಕಟ ಸಂಪರ್ಕವನ್ನುಂಟು ಮಾಡಬೇಕಾಗಿದೆ. ಅತಿ ಕಡಿಮೆ ವೆಚ್ಚದಲ್ಲಿ ಈ ರೀತಿಯ ವೈರಸ್‌ಗಳಿಗೆ ತುತ್ತಾದವರಿಗೆ ಚಿಕಿತ್ಸೆ ನೀಡಲು ಬೇಕಾದ ಔಷಧಿಗಳನ್ನು ತಯಾರಿಸಿ ದೇಶದಾದ್ಯಂತ ಆಸ್ಪತ್ರೆಗಳಿಗೆ ತರಿಸಬೇಕಿದೆ. ಈ ಮೂರು ಕಾರಣಗಳು ಯಶಸ್ವಿಯಾದರೆ ವಿಜ್ಞಾನದಿಂದ ಕಹಿಯಾಗುವ ಬದಲು ಸ್ವಲ್ಪಾದರೂ ಸಿಹಿ ಉಣಿಸಬಹುದಾಗಿದೆ. ವಿಜ್ಞಾನವನ್ನು ಮನುಷ್ಯನ ಶಾಂತಿ ನೆಮ್ಮದಿ ಸಮಬಾಳ್ವೆಗಳಿಗೆ ವಿನಿಯೋಗಿಸಬೇಕೇ ಹೊರತು ಇಂಥಹ ಭೀಕರ ಅಸ್ತ್ರಗಳನ್ನು ತಯಾರಿಸಿ ಜನರನ್ನು ಕೊಲ್ಲುವುದು ಅಲ್ಲ. ಅದಕ್ಕೆ ಮಿತಿಯೊಳಗೆ ಅಪಾಯವಾಗದಂತೆ ವಿಜ್ಞಾನವನ್ನು ಎಲ್ಲ ರಾಷ್ಟ್ರಗಳು ಉಪಯೋಗವನ್ನು ಪಡೆದುಕೊಳ್ಳಬೇಕಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಪ್ಪೀ ಮನವಂಜೆ ಜನಕೇನು ಪೇಳುವುದು ?
Next post ಬದುಕು ಇದು ಹೀಗೆ

ಸಣ್ಣ ಕತೆ

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ನೆಮ್ಮದಿ

    ಅವನಿಗೆ ನೆಮ್ಮದಿ ಬೇಕಿತ್ತು. ಆ ಜನನಿಬಿಡ ರಸ್ತೆಯ ಪಕ್ಕದಲ್ಲಿರುವ ನ್ಯೂಸ್ ಪೇಪರ್ ಸ್ಟಾಲಿಗೆ ತಾಗಿ ನಿಂತು ಅವನು ರಸ್ತೆಯನ್ನು ವೀಕ್ಷಿಸುತ್ತಿದ್ದ. ಸೂರ್‍ಯೋದಯವಾಗಿ ಕೆಲವೇ ಗಂಟೆಗಳಾಗಿರಬಹುದು. ಜಾತ್ರೆಗೆ ಸೇರಿದಂತೆ… Read more…