ನಿನ್ನೊಲುಮೆಯಲಿ ನಾನಿರುವೆ
ನನಗಾಸರೆಯಾಗಿ ನೀನಿರುವೆ
ಬದುಕುವ ಸುಂದರ ಕಲೆಯನ್ನು
ಕಲಿಸಿದ ಕಲೆಗಾರ ನೀನು ||
ಕಡಲ ತೀರದ ದೋಣಿಯಲಿ
ಕುಳಿತು ದಾರಿಯನು ತೋರಿ
ದಡವ ಸೇರಿಸಿದ ಅಂಬಿಗ ನೀನು ||
ಸೂಜಿ ದಾರ ಎಂಬ ಬದುಕಿಗೆ
ದಾರಿಯ ತೋರುತ ದಾರಕ್ಕೆ
ಹೂವ ಪೋಣಿಸಿದ ಧೀರ ನೀನು ||
ಸಂಸಾರದ ಸಂತೆಯಲಿ
ಬುಗುರಿಯು ಕಾಯಕದಂತೆ
ನಾನಾ ರೂಪಾವೇಷಗಳ ಆಡಿಸಿದ
ಸೂತ್ರಧಾರಿ ನೀನು ||
*****