ಬಾ ! ನನ್ನಿ
ಅಲೌಕಿಕದ ಆರೋಹಣವಾಗಿರುವುದು
ಜಳಕ ಮಾಡೋಣ
ಚಂದ್ರ ತಾರೆಯರ ಸಿಹಿ ಬೆಳಕ
ತನುವು ಹೂವಾಗುವುದು.
ಬಾ ! ನನ್ನಿ
ನೀರವ ನೆರೆಯಲಿ
ಲಾಸ್ಯವಾಡುವ
ಮೃದು ಮದುಲ ಹೂವು ಹುಲ್ಲಿನ
ನಡೆ ಮಡಿಯ ಹಾಸಿನಲಿ
ಬಾ ! ನನ್ನಿ
ಕಾಣುವ
ಸೃಷ್ಟಿಯ ಕಲಾ ಕುಸುರನು
ಜೀವ ಪುತ್ಥಳಿಗಳಾದ ಗಿಡಮರಗಳ
ಮಿಗ ಮೊಲಗಳ ದೇಹ, ಭಾವಗಳಲಿ
ಬಾ ! ನನ್ನಿ
ಸಿದ್ಧವಿಹುದು ತೆಪ್ಪ
ವಿಹರಿಸುವ
ಜೀವ ಪಾವನಿಯಾದ ತುಂಗಭದ್ರೆಯಲಿ
ಆನಂದ ತಬ್ಬುವುದು.
ಓ ! ಬಾ ಇನಿಯ
ಕೂಡುವ !
ಏಕವಾಗಿ
ಮಾತು, ಕತೆ ಮೀರಿದ
ಪ್ರೇಮ ಶ್ರೀಯ ಸಾಯುಜ್ಯ.
*****