೧೫-೮-೫೦

ಈ ಧ್ವನಿಯೆ ಬೇರೆ ಈ ನೋಟ ಚಂದ್ರನ ತೋಟ

ಇದರ ಕಣಿ ಬೇರೆ ಇದು ತಾನೊಂದೆ ಸಾರುತಿದೆ

ಯುದ್ಧ ಕೂಡದೆಂದು ಅತ್ತ ಅಸ್ತ್ರದ ನೋಟ

ಅರ್ಧ ಭೂಮಿಗೆ ಸದಾ ಸರಿಯೆಂದು ತೋರುತಿದೆ

ಕೊಲೆಮನೆ ಕಡುಗತ್ತಿ ಕುರಿಮರಿಯ ಕುಣಿದಾಟ

ಬೇಕು ಮಾನವನ ದಾನವತೆಗೀ ರಾತ್ರಿಯೂಟ

 

ಈ ಧ್ವನಿಯೆ ಬೇರೆ ಬಾಂಬಿಗೆ ಹೆದರಲಿಲ್ಲ ಇದು

ಕತ್ತಿಯಲಿ ಕೆತ್ತಿದ ಸ್ವತಂತ್ರತೆಯನರಿಯದಿದು

ನೆತ್ತರಲಿ ಬರೆದ ನಾಗರಿಕೆತೆಯ ಕುರಿಯದಿದು

ಶಸ್ತ್ರವನು ನ೦ಬಿ ಶಾ೦ತಿಯ ಸೋಗ ಹಾಡದಿದು

ಈ ನಾಡು ಬೇರೆ ಇದು ನಡೆವ ದಾರಿಯೆ ಬೇರೆ

ಇವರ ನಡೆ ನೋಟ ನಂಬಿಕೆ ಎಲ್ಲ ಬೇರೆ ಬೇರೆ

 

ಇಂಡಿಯಾ ಇಂಪಾದ ಹೆಸರು ಏಷ್ಯದ ತಾಯಿ

ಬೆಟ್ಟದಲಿ ಹಡೆದು ನದಿಯಲಿ ತೊಳೆದು ನಾಕದಲಿ

ತೂಗಿ ನೆತ್ತಿಗೆ ತಾರೆಗಳನೊತ್ತಿ ಮುಗಿಲಲಿ ಸುತ್ತಿ

ಚಳಿಗಾಳಿ ಉರಿಗಾಳಿ ಬೀಸಿ ಭುಜನನು ತಟ್ಟಿ

ಜಗಜಟ್ಟಿಯಾಗಿಸಿದ ಹಿರಿಯ ಮಗಳೀ ನಾಡು

ಆ ತಪೋವನಗಳಲಿ ನರ್ತಿಸುನ ನವಿಲ ನೋಡು

 

ದೇವದೂತರು ದಿಕ್ಕ ತೋರಿದರು ಶಾ೦ತಿಯಲಿ

ಧನ್ಯರ್ಷಿಗಳು ಕಡೆದ ಬ್ರಹ್ಮಜಿಜ್ಜಾಸೆಯಲಿ

ಧವಳಗಿರಿಯಂತೆ ಬೆಳಕಾದ ಸಿರಿಮೊಗವೆತ್ತಿ

ಏಷ್ಯದ ಹಿರಿಮಗಳು ಭರತನ ಸಾಕುತಾಯಿ

ಸಾರುತಿಹಳಿಂದು ಎತ್ತಿದ ಕತ್ತಿಗಳ ತಡೆದು

ಶಾಂತಿ ಮೂಡದು ರಕ್ತಪಾತದಲಿ ಶಾಂತಿರಸ್ತು

 

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ೨೬-೧-೫೦
Next post ಕೊಡಗಿನ ಕರೆ

ಸಣ್ಣ ಕತೆ

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…