ಓ ನೋಡು ಕೋ ನೋಡು ಹೋ ನೋಡು ಹೈ ನೋಡು
ಅಬ್ಬಯ್ಯನಾ ಬೆಟ್ಟದಪ್ಪಯ್ಯನಾ
ಅಪ್ಪಯ್ಯ ಬಂದಾನ ಅಬ್ಬಯ್ಯ ಮರುವಶಕ
ಅಕ್ಕಯ್ಯ ಅಣ್ಣಯ್ಯ ತಾರಯ್ಯ ತಾ
ಲಕಲಕ್ಕ ಲಕ್ಕಯ್ಯ ಲಕ್ಕೀಯ ಈ ಕೊಳ್ಳ
ಹಕ್ಯಾಗಿ ಹಾರೇನೊ ಬುರ್ರನೆಂದೊ
ಓ ನೋಡು ಶಿವಶಿವಾ ಝಲ್ಲೆಂತೊ ನರನರಾ
ವಿಶ್ವಶಾಂತಿಯ ಭವನ ಝಗ್ಗನೆಂತೊ
ಓ ಕಂಡೆ ಹೋ ಕಂಡೆ ಮುರಳೀಯ ಪಡಕೊಂಡೆ
ಈಶ್ವರನ ಈ ತೇರು ಕಂಡೆ ಕಂಡೆ
ಸತ್ಯಯೋಗದ ಗುಡಿಯ ರಾಜಯೋಗದ ಎಡೆಯ
ಆದಿ ದೇವನ ಸಿರಿಯ ಸಾರಿ ಕಂಡೆ
ಯೋಗ ಯೋಗೇಶ್ವರರು ಕಾಲ ಕಾಲೇಶ್ವರರು
ಸಿದ್ಧ ಸಿದ್ಧರ ಗೆದ್ದ ನವ ಬುದ್ಧರು
ಜಗದ ಸೂರ್ಯರು ಇವರು ಯುಗದ ಸೂರ್ಯರು ಇವರು
ಕುಂಭಕರ್ಣರ ಕೊಂದ ಕಲಿರುದ್ರರು
ಇಲ್ಲಿ ಬಂದ ಮೇಲೆ ಎಲ್ಲಿ ಹೋಗಲು ಬೇಡ
ಗೊಲ್ಲ ಗೂಳಿಯ ಜನುಮ ಜಾರಿಹೋಯ್ತೊ
ಆ ಬುಟ್ಟಿ ಈ ಬುಟ್ಟಿ ಗುಳಬುಟ್ಟಿ ಎಣಿಬುಟ್ಟಿ
ನೂರು ಬುಟ್ಟಿಯ ಪೂಜಿ ತೀರಿಹೋತೊ
ಮುಳ್ಳು ಮಲ್ಲಿಗೆಯಾತು ಕಲ್ಲು ಕೇದಿಗೆಯಾತು
ಓ ಬಂತು ಬಂತೈಯ ಜಾತ್ರಿಕಾಲಾ
ಹುಚ್ಚಯ್ಯನಾ ತೇರು ಕಲಿತೇರು ಹೋತಯ್ಯ
ಬಂತೈ ಬಂತೈಯ ಸತ್ಯಕಾಲಾ
ರೈಲ್ಗಾಡಿ ಹತ್ತೈಯ್ಯ ಭಂವ್ವೆಂದು ಹೋಗಯ್ಯ
ಜೈಯ್ಯೆಂದು ಮುಟ್ಟಯ್ಯ ಮುಕ್ತಿಧಾಮಾ
ಬೈಲ್ಗಾಡಿ ಹತ್ತೈಯ ಬುರ್ರಂತ ಹಾರಯ್ಯ
ಸುರ್ರಂತ ಸಾರಯ್ಯ ಶಾಂತಿಧಾಮಾ
ಅಬ್ಬಯ್ಯ ಪರುವತ = ಆಬೂ ಪರ್ವತ (ರಾಜಸ್ಥಾನ), MT. ABU
ಅಪ್ಪಯ್ಯ = ಸರ್ವ ಆತ್ಮರ ತಂದೆಯಾದ ಪರಮಾತ್ಮ, God.
ಲಕ್ಕೀಕೊಳ್ಳಿ = ನಕ್ಕೀ ಸರೋವರ (Nakki Lake)ಅಬೂ ಪರ್ವತದ ಮೇಲಿನ ಸುಂದರ ಸರೋವರ.
ವಿಶ್ವ ಶಾಂತಿ ಭವನ= Universal Peace Hall. ೩೦೦೦ ಸುಖಾಸನಗಳನ್ನು ಹೊಂದಿದ, ಜಗತ್ತಿನ ಒಂಬತ್ತು ಭಾಷೆಗಳಿಗೆ ಭಾಷಣಗಳನ್ನು
ಭಾಷಾಂತರಿಸಿ ಕೇಳಿಸುವ ಹೇಡ್ ಫೋನ್ ಸೌಕರ್ಯವುಳ್ಳ ಹಾಗೂ ಸ್ಥಳದಲ್ಲಿಯೇ T V, ಪ್ರಸಾರದ ಸೌಲಭ್ಯ ಹೊಂದಿದ ಅತ್ಯಾಧುನಿಕ ಯೋಗದ ಹಾಲ್. ಇದರಲ್ಲಿ ಪ್ರತಿವರ್ಷ World Peace Conference ಜರಗುತ್ತದೆ.
ಅಪ್ಪಯ್ಯನ ರಥ = ಶಿವನ ಸಂದೇಶಕ್ಕೆ ಮಾಧ್ಯಮವಾಗಿರುವ ಶರೀರರಥ. Shiva Baba’s Chariot
ಆದಿದೇವ = ಶಿವನ ಜ್ಞಾನವಾಹನ ಬ್ರಹ್ಮ ಅಥವಾ ಬ್ರಹ್ಮಾ ಬಾಬಾ
ಮುಕ್ತಿಧಾಮ = ಸಕಲ ಆತ್ಮರ ಮೂಲ ಚೈತನ್ಯ ನಲೆ
ಶಾಂತಿಧಾಮ = ಸಕಲ ಆತ್ಮರ ಮೂಲ ಚೈತನ್ಯ ನೆಲೆ
*****