ಲೋಕದ ಮನುಜರ ಚಿಂತೆಯು
ಕಾಡುವುದು ಚಿತೆಯಾಗಿ
ಚಿಂತೆಯು ಬೇಡ ಚಿತೆಯು ಬೇಡ
ಬೇಡವೇ ಬೇಡ ಅವರಿವರ ಸಹವಾಸ||
ಸಂಸಾರ ನಿಸ್ಸಾರ ಬಂಧು ಬಳಗ
ತಾನವಿತ್ತಾನ ಬಿತ್ತು ನೆಮ್ಮದಿಯ
ಬೀಜ ಮರವಾಗೀನ ಫಲ ರುಚಿಯು
ಚಿಂತೆಯು ಬೇಡವೇ ಬೇಡ ನಮಗೆ||
ಆಸರೆ ಸೆರೆಯಾಸರೆ ಬದುಕು
ಬವಣೆ ಚಿತ್ತಾರ ಬಿಡಿಸಿ
ರೂಪವ ಕೊಟ್ಟು ಅಂಗೈಯಲಿ ಆಡಿಸಿ
ನೋಡುವ ಚಿಂತೆ ಬೇಡವೇ ಬೇಡ ನಮಗೆ||
ಜಾತಿ ನೀತಿ ಜಗತ್ತು ತೂಗಿ
ತೂಗುವ ಅವರವರ ಭಾವಕ್ಕೆ
ಜೀವಾಳಕ್ಕೆ ಸರಿದೂಗುವ ಕಾಯಕ
ಚಿಂತೆಯು ಬೇಡವೇ ಬೇಡ ನಮಗೆ||
*****