ನೀ ಎಳೆ ಬಾಲೆ ನೀರೆ

ನೀನು
ಎಳೆ ಬಾಲೆ ನೀರೆ
ಎಳೆ ನಿಂಬಿ ಹಾಂಗೆ
ತಿಳಿ ಆಗಸದಾಗೆ
ಮಿನುಗುಟ್ಟುವ ಚುಕ್ಕಿಗಳ ನಡುವೆ
ಚಂದ್ರಮನ ಮೊಗಧಾಂಗೆ ||

ಜೋಗದಿ ನೀನು ಜಲಧಾರೆ ಹಾಂಗೆ
ಅರುಣದಿ ನೀನು ಅರುಣ ಕಿರಣಧಾಂಗೆ
ಚಿಗುರಲ್ಲಿ ನೀನು ಎಳೆ ಚಿಗುರಿನ್ಹಾಂಗೆ ||

ಮೊಗ್ಗಲ್ಲಿ ನೀನು ಎಳೆ ಮೊಗ್ಗಿನ್ಹಾಂಗೆ
ಮಂಜಲ್ಲಿ ನೀನು ಮಂಜಿನ ಹನಿಹಾಂಗೆ
ಮುತ್ತಲ್ಲಿ ನೀನು ಮುತ್ತಿನ ಮಣಿಹಾಂಗೆ
ಹೊಳೆ ಹೊಳೆಯುತಲಿ ಬೆಳಗು ಮಾಣಿಕ್ಯಧಾಂಗೆ ||

ಹಾಲ್‌ಗಲ್ಲ ಹಾಲ್ ಜೇನು
ಸವಿಯಲೇನು ಸವಿ ಜೇನು
ಮೆದುವಾಗಿ ನೀನು ಬೆಳದರೇನು ಚೆನ್ನು
ಬೆಳೆದು ನೀನು ಬೆಳಗು ಕನ್ನಡ ನಾಡನ್ನು
ಕನ್ನಡ ನುಡಿಯನ್ನು ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಂಶೋಧನಾ ವಿಹಾರಿ ಪ್ರೊ. ಲಕ್ಷ್ಮಣ ತೆಲಗಾವಿ
Next post ವಿಶ್ರಾಂತಿ

ಸಣ್ಣ ಕತೆ

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…