ಯಾ ಇಮಾಮ ಕಾಸೀಮ ಧೂಲಾ
ಹುಡುಕುತ ಹೊಂಟ ಯಜೀದ ಸುಮರ
ಕಡಿದಾಟಾತು ಧರಣಿಯ ಮ್ಯಾಲ
ಹಿಡಿದಾರು ದಾರಿ ದೂರ ಕರ್ಬಲ || ೧ ||
ಆವಾಗ ಬೀಬಿಫಾತಿಮನವರಾ
ದುಃಖವಮಾಡಿ ಅಳುತಾರಲ್ಲಾ
ವಕ್ಕರಸಿತು ಅವರ ದೈವದ ಫಲ
ಈ ಮಾತು ಯಾರಿಗೆ ತಿಳಿದಿಲ್ಲ || ೨ ||
ವಂಟಿಮ್ಯಾಲ ನೌಬತನಗಾರಿ ಏರಿ
ಬಿಲ್ಲುಬಾಣ ಕಲ್ಲುಕವಣಿಯ ತೂರಿ
ನಿಲ್ಲಾದವು ದರಿ ತಾ ಕಚದೋರಿ
ನೀರಿಲ್ಲದೆ ಹೋಯಿತು ಅಸುಹಾರಿ || ೩ ||
ಅಸಮ ಶಹಾದತ್ತು ತೀರಿತು
ಶಿಶುನಾಳ ಊರಿಗೆ ಬೆಳಗಾಯಿತೋ
ಹಸನಾಗಿ ಹಾಡೋ ಈ ರಿವಾಯತೋ
ಕಸರಿದ್ದರ‍್ಹೇಳರಿ ಬಲ್ಲವರಾ || ೪ ||
*****