ಹನುಮಂತ ಭೂಪಾ
ಸದ್ಗುಣಮಣಿ ಶಾಂತರೂಪಾ || ಪ ||
ಹನುಮಂತ ಮಹಾಮುನೀಶ ವಾಯು
ತನಯ ವಾನರೇಂದ್ರ ವನಚರ
ಶುಭಕಿರಣ ವಿಹಾರನು ಮಹಿಮಾಗಾರಾ
ಅಂಜನೀಕುಮಾರಾ ಸುಜನೋದ್ದಾರಾ ಕುಜನೋತ್ಪಾಲನಾ
ಹೋ ಭಕ್ತಪ್ರಾಣ ಪಂಚಪ್ರಾಣಾ ನಮಸ್ತುತೆ
ಕ್ಷೋಣಿಪಾಲ ರಘುಚರಣ ಸೇವಕಾ ಕಪಿವರ ಕರುಣ ಕೃಪಾಳು ||೧||
ಹರಿ ರಾಮ ಚಾರಕಾ ನಿರುಪಮ ನಿರಹಂಕರ ಕರಾ ಸಂಚಾರ
ಚರಿತ ಭೂಪರಾ ಬಹುಭರದಿ ಲಂಕಾಪುರಕೆ ಕಪಿಗಳ
ನೆರಪಿ ವಿಸ್ತರಾ ರಾವಣಸುರಾನುರುಹಿದಾ ದೀರಾ
ಕುಂಭಕರ್ಣರಾ ತಾಟಕಿಯ ಭರಾ ದೂಷಣ
ಖರಾದಿಗಳ ಸಂಹರಾ ಪರಾಕ್ರಮ ವೀರಾ ನಿನ್ನ ಶ್ರೀಕರ
ಚರಣಕಮಲಕೆ ಪರಾಕು ವಂದಿಪೆ ಶರಣು ||೨||
ಜಿತೇಂದ್ರಿಯ ಜಯ ಶುಭಮತೀ ಜಲಸ್ತಟ
ಪಥಾಸಾರಿ ನಿರ್ಮಿತಾ ನಿರಂತರ
ಹತಾಶ ದಾನವ ಪತೀಂದ್ರಜಿತುವಿನ ಮಥನ ಮೂರುತಿ ನತಾ
ವಿಭೀಷಣ ಗತಿಮುಕ್ತಿಯಾ ಪಥ ವಾಯಕಾ ಹಿತಾ ಸಾಯಕಾ
ವೃತಸ್ತಂಭನಾ ಅತೀತ ಮೂರುತಿ ನುತಿಪೆ
ನಿನ್ನ ಪಾದಗತಿಯೆನುತ ಸರ್ವಥಾ ಸೇವಿಪೆ |!೩||
ಭಲಾವಂತ ಬಾಲಕಾ ರಾಮ ಭೂಪಾಲ ರಘುಸುತ
ಸಲುಹಿ ಸಮರದಿ ಕಲಿ ಲಕ್ಷ್ಮಣನಿಗೊಲಿದು ಜೀವನ
ಫಲಾಗೊಳಿಸಿ ಪಾತಾಳಕಿಳಿದು ಮಹಾ
ಮಲಿತ ಮೈರಾವಣ ರಕ್ಕಸರ ತುಳಿದೊತ್ತಿ ಲವ-ಕುಶ ಕುಮಾರರ
ಛಲಾಗೆಲಿಸಿ ಜಾನಕಿಯ ರಾಮ ಪದಕೊಲಿಸಿ ನಿಜ
ಲೀಲಾ ಮೂರುತಿ ಭಲೆ ಬ್ರಹ್ಮಋಷಿ ಕುಲೊತ್ತಮಂ ಭಜೇ
ಬಾಲದಂಡ ಬಲಭೀಮದಯಾಳು ||೪||
ಮಂಡಲೀಶ ಕೋದಂಡ ಹರೀವರ ಪಾಂಡುತನಯ
ಗಾಂಡಿವಿರಥಾಗ್ರದಿ ಕಂಡು ಪತಾಕಿನಿ
ಕುಂಡಲಿಯೋಳ್ ನಿನ್ನ ಅಂಡಲಿಯಲು ಕುರುಸೈನ್ಯ ಕಲಹದೋಳ್
ದಿಂಡುಗೆಡಹಿ ಬ್ರಹ್ಮಾಂಡಕಿಳಿದು ಬಹು ಪುಂಡಗ್ರಾಮ ಅತಿಗೇರಿ ಸ್ಥಳದಿ ಪ್ರ-
ಚಂಡ ವೀರ ಹನುಮಂತ ಪ್ರಭೋ
ಉದ್ದಂಡ ಗುರುಗೋವಿಂದನ ಕರುಣದಿ
ಕಂಡುಸುರುವೆ ನಿನ್ನ ಪಾದಕಮಲ ಕರ
ದಂಡಯೆತ್ತಿ ನಮೋಯೆಂಬೆನೈ || ೫ ||
*****