ಬಾ ವಸಂತ ಹೊಸ ಬಾಳಿನ
ಬಾಗಿಲ ತೆರೆ ಬಾ,
ಹಳೆ ದಿನಗಳ ತರಗೆಲೆಗಳ
ಸರಿಸಿ ನಡೆದು ಬಾ,
ನಿನಗಾಗೇ ಕಾದಿವೆ
ಜನರ ಮನಗಳು,
ಹೊಸ ತೋರಣ ಕಟ್ಟಿವೆ
ಮಣ್ಣ ಮನೆಗಳೂ.
ಮರಮರವೂ ಚಾಮರ
ನಿನಗೆ ಬೀಸಲು,
ಹೂರಾಶಿಯ ಹೊತ್ತಿವೆ
ಪಥಕೆ ಹಾಸಲು,
ಜಗದ ಹೃದಯ ಕುಣಿಸುವ
ಋತುರಾಜನಿಗೆ,
ನೆಲಸಲಾಯ್ತು ಎಲ್ಲ ಜಗದ
ಮನವು ಮೀಸಲು.
ಆಸೆಯ ಮಿಂಚೆದ್ದಿದೆ
ಜಗದ ಕಣ್ಣಲಿ,
ಶುಭದ ಬೆಳೆ ಏಳಲೆಂದು
ಕಾದ ಮಣ್ಣಲಿ,
ಹಳೆಯ ನೋವ ಮರೆತು ಇಳೆ
ಶುಭವ ಕೋರಿದೆ,
ನಿನ್ನ ಬರವು ವರವಾಗುವ
ಅಭಯ ಬೇಡಿದೆ.
*****