ಅಮ್ಮ ನಾನು ನೀನು ಸುತ್ತೋಣ ಬೆಟ್ಟ ಕಾನು ಎಲ್ಲೆಲ್ಲೂ ಮರಗಳ ಗುಂಪು ಅವುಗಳ ನೆರಳದು ತಂಪು ಮರವನು ತಬ್ಬಿದ ಬಳ್ಳಿ ಕೆರೆಯಲ್ಲಿದೆ ಮಿಂಚುಳ್ಳಿ ಜಲ ಜಲ ಜಲ ಜಲ ಧಾರೆ ಇವೆಲ್ಲಾ ಮಾಡ್ದೋರ್‍ಯಾರೆ ಕಣ್ಣಿಗೆ ಹಸಿರಿನ ಹಬ್ಬ ಹತ್ತೋಕೆ ಕಷ್ಟ ದಿಬ್ಬ ಭಾರಿ ಗಾತ...

ಆಕಾಶದಿಂದ ಜಾರಿ ನಕ್ಷತ್ರ ಗುಂಪಿನಿಂದ ಕಳಚಿ ಬಿದ್ದ ಒಂಟಿ ನಕ್ಷತ್ರ, ರಾತ್ರಿ ಕತ್ತಲಲಿ ಉದುರುವ ಮಿಂಚು, ಹಗಲಿನಲ್ಲೇಕೆ ಹುಡುಕುವಿರಿ? ನೋವಿನ ಸುರಂಗದಿಂದ ಕಣ್ಣುಗಳ ಆಳಕ್ಕಿಳಿದು ಝಲ್ಲೆಂದು ಉದುರುವ, ಗಾಢ ಕತ್ತಲೆಯಲಿ ಜಾರುವ ಬೆಳಕಿನಕಿಡಿ ಮಿಂಚಿನ ...

ಹತ್ತವತಾರಗಳು ಆಗಿಹೋದರೂ ಅವತಾರಗಳಿನ್ನೂ ಕೊನೆಗೊಂಡಿಲ್ಲ ಶತಕೋಟಿ ದೇವರುಗಳು ಬಂದು ಹೋದರೂ ದೇವರುಗಳಿನ್ನೂ ಮುಗಿದಿಲ್ಲ ಅವತಾರದವತಾರ ಇಲ್ಲಿ ಪ್ರತಿಯೊಬ್ಬನೂ ಯಾವ ಯಾವುದೋ ವರಾತ ಆರಂಭಿಸಿದ ಸ್ವಯಂಚಾಲಿತ ಲೀಲೆಯ ನಿಲ್ಲಿಸಲು ತಾನೆ ಮರೆತ ಯುಗದ ಗಾಲಿಗಳ...

ನಾ ಮೊದಲು ಕಂಡಿದ್ದು- ಬೃಂದಾವನ ಗಾರ್ಡನ್‌ನ ಸಂಗೀತ ಕಾರಂಜಿಯನ್ನು ನಂತರ ಎದೆತುಂಬಿ ಹಾಡಿದೆನು… ಆ ನಂತರ ಗಣಪತಿ ಸಚ್ಚಿದಾನಂದ ಸ್ವಾಮಿ ಆಶ್ರಮದಲ್ಲಿ- ದಸರಾ ಗೋಷ್ಠಿಗಳಲ್ಲಿ ಅಬ್ಬಾ! ಮೈಸೂರಿನಲ್ಲಿ ಮನೆಮನೆಗಳಲ್ಲಿ ಸಂಗೀತ ಕಾರಂಜಿ ಹರಿಯುತ್ತಿ...

ವಾರಿ ರುಮ್ಮಲ ಸುತ್ತಿ ಓಣ್ಯಾಗ ನಿಂತಾನ| ಹ್ವಾರ್ಯಾನಿಲ್ಲೇನೊ| ಹೊಲದಾಗ ಹೊಲದಾಗ| ಹ್ವಾರ್ಯಾನಿಲ್ಲೇನೊ || ಹ್ವಾರ್ಯಾನಿಲ್ಲಽ ಏನೊ ಹೊಲದಾಗ ಚಂದರಾಮಾ| ನಾರ್ಯಾರಿಲ್ಲೇನೊ| ಮನಿಯಾಗ ಮನಿಯಾಗ| ನಾರ್ಯಾರಿಲ್ಲೇನೊ |೧| ಮಕಮಕ ಮಲ್ಲೀಗಿ ಅದರಾಗ ಖ್ಯಾದೀಗಿ|...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....