ಪಂಚೇಂದ್ರಿಯಗಳು ನಮಗೆ ಒದಗಿಸುವ ಸಂವೇದನೆಗಳಲ್ಲಿ ಕಲೆಗೆ ಮಾಧ್ಯಮವಾಗಿ ಉಪಯೋಗವಾಗುವುದು ಕೇವಲ ಎರಡೇ ಎನ್ನುತ್ತಾನೆ ಹೆಗೆಲ್: ದೃಶ್ಯ (ದೃಷ್ಟಿ) ಮತ್ತು ಧ್ವನಿ (ಶ್ರವಣ). ಯಾಕೆಂದರೆ ಇವುಗಳಿಂದ ನಾವು ಕಲಾಭಿವ್ಯಕ್ತಿಗೆ ಅಗತ್ಯವಾದ ಸುದೂರವನ್ನು ಗಳಿಸ...

ಅಲ್ಲಿ, ಮುರುಕು ಗೋಡೆಯ ಪಕ್ಕದಲ್ಲಿ ನಿಂತ ಕುರುಡ, ಹೆಸರಿಲ್ಲದ ಸಾಮ್ರಾಜ್ಯದ ಗಡಿಕಲ್ಲಿನಂಥ ಮುದುಕ, ಗ್ರಹಗಳ ಗಡಿಯಾರದ ಮುಳ್ಳು ತೋರಿಸುವ ಗೊತಿಲ್ಲದ ಅಂಕಿ, ಅವನನ್ನು ಸುತ್ತಿ, ಬಳಸಿ, ಅಡ್ಡಹಾಯ್ದು ಹೋಗುವ ನಕ್ಷತ್ರ ಪಥಗಳ ನಿಶ್ಯಬ್ದ ಕೇಂದ್ರ. ಗೊಂದ...

ಹೂನಗೆ ಬೀರಿದಾಗ ಹೂ ಮಳೆ ಗರೆದಾಗ ನನ್ನವಳ ಮೊಗವು ಅರಳಿತ್ತು || ಬಾನು ನಕ್ಕಾಗ ಬಾಳು ಹಸನಾದಾಗ ನನ್ನವಳ ಮನವು ಸೆಳೆದಿತ್ತು || ಮೌನ ಸೆಳೆದಾಗ ಮಾತು ಬರದಾಗ ನನ್ನವಳ ಭಾವವೂ ಹೊಳೆದಿತ್ತು || ಸ್ವಾತಿ ಮುತ್ತಿನ್ಹಾಂಗ ಪ್ರೀತಿ ಹೊಳೆದಾಗ ನನ್ನವಳ ಅಧರ ...

ಝಗ ಝಗಿಸುವ ಮಾರ್ಕೆಟ್ಟಿನ ಜರತಾರಿ ಜಗತ್ತು ಬೆಳಕಿನ ಬೋಗುಣಿ ಅಂಗಡಿ, ಮುಸ್ಸಂಜೆಯ ಹೊತ್ತು. ಅಂಗಡಿಯೆರಡೂ ಬದಿಗೂ ಪತ್ತಲಗಳ ತೂಗು ಬಣ್ಣದ ಸರಕಿನ ಲೀಲೆ, ಬಯಕೆಯುರಿಯ ಕೂಗು. ಯಾರಯಾರ ಜೊತೆಗೊ ಮಾತು ಎಲ್ಲೆಲ್ಲೋ ಕೂತು, ಕುದಿ ತುಂಬಿದ ಏರುಕೂಗು ಯಾರನ್ನ...

ಎಲ್ಲರಿಗೂ ನಮಸ್ಕಾರ ಜನರ ಪೂರ್ತಿ ಸಹಕಾರ ಇದ್ದರೇನೆ ಆಗೋದಪೋ ಈ ದೇಶದ ಉದ್ಧಾರ ಎಂಥ ಸರಕಾರ! ಎಂಥ ಸರಕಾರ! ಬಂಗಾರದಂಥ ಸರಕಾರ! ಪ್ರತಿ ಊರಿಗೂ ಸರೋವರ ಬೆಳೆದ ಹೆಣ್ಣಿಗೆ ವರ ತಲಿ ಮೇಲೆ ಸೂರು ವಸೀ ಹೊದಿಯೋದಕ್ಕೆ ಛದ್ದರ ಎಂಥ ಸರಕಾರ! ಎಂಥ ಸರಕಾರ! ಬಂಗಾ...

ನನ್ನ ಚಡ್ಡಿ ದೋಸ್ತು ಮಲ್ಲು ಬೆಂಗಳೂರಿನಲ್ಲಿ ಬನಶಂಕರಿಯ ಏರಿಯಾದಲ್ಲಿ ಒಂದು ೪೦-೩೦ ಸೈಟ್ ಬಹಳ ಹಿಂದೆಯೇ ಖರೀದಿಸಿದ್ದ. ‘ಐಟಿ-ಬಿಟಿ’ ಖ್ಯಾತಿ ಇಂದಾಗಿ ಸೈಟು ಮನೆಗಳ ಬೆಲೆಗಳು ಆಕಾಶದತ್ತ ಜಿಗಿಯ ಹತ್ತಿದವು. ಮನೆ ಕಟ್ಟಲು ಈಗ ಸಮಯ ಸೂಕ್ತವಾಗಿದೆ ಎಂದ...

ಚಿತ್ರ ನಟನೊಬ್ಬ ಫೋನ್ ಇನ್ ಕಾರ್‍ಯಕ್ರಮದಲ್ಲಿ ತನ್ನ ಹೊಸ ಸಿನಿಮಾದ ಬಗ್ಗೆ ಅಭಿಮಾನಿಯೊಬ್ಬನ ಬಳಿ ಕೇಳಿದ “ಇಡೀ ಚಿತ್ರದಲ್ಲಿ ನಿಮ್ಮ ನೆನಪಿನಲ್ಲಿ ಉಳಿಯುವ ಭಾಗ ಯಾವುದು?” ಅಭಿಮಾನಿ ಹೇಳಿದ. “ಮದ್ಯಾಂತರ” (ಇಂಟರ್‌ವಲ್‌...

ಬಾರೆ ತಾರೆ ಚಂದ್ರ ನೀರೆ ಮುಗಿಲ ಮಂಚ ಕರೆದಿದೆ ನೂರು ನೂರು ಚುಕ್ಕೆ ಹೂವು ಎದೆಯ ಕಮಲ ತೆರೆದಿದೆ ||೧|| ಕುಣಿವುದೊಂದೆ ಗೊತ್ತು ನನಗೆ ಹೊತ್ತು ಗೊತ್ತು ಕಿತ್ತೆನೆ ಗೆಜ್ಜೆ ಝಣಣ ಹೆಜ್ಜೆ ಝನನ ಪ್ರೇಮ ಪೈಜೆ ಕುಣಿದೆನೆ ||೨|| ಕುಚದ ಕುತನಿ ಕಚದ ಕಮನಿ ...

1...7374757677...111

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...