ಹೇಳಲೇಬೇಕಾದ ಮಾತುಗಳು

ಹೇಳಬಾರದು, ಅಂದುಕೊಂಡರೂ ದಿಗ್ಗನೆ ಎದೆಗೆ ಒದ್ದು ದುಡುದುಡು ಓಡಿಬಂದು ಗಂಟಲಲ್ಲಿ ಗಕ್ಕನೆ ಕೂತು ಹೊರಳಿ-ತೆವಳಿ ನಾಲಿಗೆಯ ತುದಿಗೆ ಬಂದು ನಿಂತಾಗ ಕಿಕ್ಕಿರಿದ ಸಭಾಂಗಣದಲ್ಲಿ ಹೆಜ್ಜೆತಪ್ಪಿದ ನರ್ತಕಿಯಂತೆ ಗೆಜ್ಜೆ ಧ್ವನಿಗಳೂ ಅಸ್ಪಷ್ಟ ಹಾವ ಭಾವಗಳು ಮಾತ್ರ...

ಸಾವಸುದ್ದಿ

ಇಂದು ಒಂದು ಕರಿಕಾಗೆ ಕೆರೆ ಅಂಚಿನ ನೀರಲ್ಲಿ ಕತ್ತುವರೆಗೆ ಮುಳುಗುವುದು, ಮೇಲೆದ್ದು ರೆಕ್ಕೆ ಬಡಿಯುವುದು, ಮತ್ತೆ ಮುಳುಗುವುದು, ಎದ್ದೆದ್ದು ರೆಕ್ಕೆ ಬಡಿಯುವುದು ಮಾಡುತ್ತಲೇ ಇತ್ತು. ಪ್ರಾಯಶಃ ಚೆನ್ನಾಗಿ ಸ್ನಾನ ಮಾಡಿ ಬಿಳೀ ಬೆಳ್ಳಕ್ಕಿಯಂತಾಗಿ ಬಿಡಬೇಕೆಂಬ...

ಬೆಳ್ಳಿ ಹಾಡಿತು

ಬೆಳಕು ಚಿಮ್ಮಿತು ಬೆಳ್ಳಿ ಹಾಡಿತು. ದಿವ್ಯ ಬಾಗಿಲು ತೆರೆಯಿತು || ಎಡದ ಕಡಲಿನ ನಿಬಿಡ ಒಡಲಲಿ ಜ್ಯೋತಿ ತೆಪ್ಪವು ತೇಲಿತು ತೆರೆಯ ಹೊರೆಯಲಿ ನೊರೆಯ ನೆಲೆಯಲಿ ಆತ್ಮದೀಪವ ತೂರಿತು ಮುಗಿಲ ಬಾಂಡಿಯ ಕರಿಯ ಕಂಠವ...

ತುಳುನಾಡಿನ ಸಾಹಿತ್ಯ ಸಿರಿ

ತುಳುನಾಡು ರಮಣೀಯವಾದ ಪವಿತ್ರ ಕ್ಷೇತ್ರ ಇದನ್ನು "ಲ್ಯಾಂಡ್ ಆಫ್ ಟೆಂಪಲ್ಸ್" ಎಂದು ಕರೆಯಲಾಗಿದೆ. ಜಲ-ನೆಲ-ಗಾಳಿ-ಮಳೆ ಜನೋಪಯೋಗಕ್ಕಾಗಿ ವಿಪುಲವಾಗಿ ಲಭ್ಯವಿರುವ, ವನ ಸಂಪತ್ತು, ಕೃಷಿ, ಅನೇಕ ಬಗೆಯ ಮನೋಹರವಾದ ಫಲ-ಪುಷ್ಪಗಳಿಂದ ಸಮೃದ್ಧವಾದ ಈ ನೆಲದ ಜನಪದವೂ...

ಯಾರು ಬಂದರೆ ತಾನೆ ಏನು ?

ನಿನಗೆ ಅರವತ್ತಾಯಿತಾ ಎಂದದ್ದು ‘ಬರೋ ಹೊತ್ತಾಯಿತಾ’ ಎಂದು ಕೇಳಿಸಿ ಸಣ್ಣಗೆ ಬೆಚ್ಚಿದೆ ಒಳಗೆ, ಯಾರು ಕೇಳಿದ್ದು ಹಾಗೆ ? ಜೊತೆಗಿದ್ದ ಅಳಿಯನ ? ಮಗನ ? ಅಥವಾ ಸಿನಿಮಾ ರೇಸು ಕಾರು ಬಾರು ಎಂದು...

ಚುಂಬನ

-೧- ಬಿಚ್ಚಿದ ಮುಡಿಗೆ ಮುತ್ತಿಟ್ಟಾಗ ಪರಿಮಳ ನನಗೆ ನೀನೇಕೆ ಕಣ್ಣು ಮುಚ್ಚಿದೆ ಹಿತವಾಗಿ ಕಿವಿಯ ಮಚ್ಚೆಗೆ ಮುತ್ತಿಟ್ಟೆ ಹಿತವಾಗಿ ಕಿವಿ ಕಚ್ಚುತ್ತಾ ರೋಮಾಂಚನಗೊಳ್ಳಲು ನೀ ಆಡಿದ ಪಿಸುಮಾತು ಹೃದಯ ತಲುಪಿದೆ ಬಿಗಿದ ಎದೆ ಕಂಪಿಸಿದೆ...

ಹಾಯ್ಕೆಗಳು

೧. ಒಣಧೂಳಿನ ಕವಲುದಾರಿಯಲ್ಲಿ ನಿಂತಿದ್ದೆ ತಿಳಿಯದೇ ಸುತ್ತಿ ಎದ್ದು ಬಿದ್ದು ಸಂಕಟದ ಸುಳಿಯಲಿ ತಬ್ಬಿಬ್ಬು ಅವನು ಎಂದು ಬಂದನೋ ಬಾರನೋ ಒಂದೂ ತಿಳಿಯದೆ. ೨. ಒಂದು ದಾರಿಯಲಿ ನಡೆದ ಅಕ್ಕನಂತೆ ಮನ್ನಿಸು ಪ್ರಭುವೇ ಕಾಲುದಾರಿ...