ಬಂದು ಬಿಡಬಹುದೇ ಹೀಗೆ?

ಕಪ್ಪಡರಿದ ಕಂದೀಲು ನಾನಿನ್ನೂ ಉಜ್ಜಿ ಹೊಳಪೇರಿಸೇ ಇಲ್ಲ! ದೇವರ ಮುಂದಲ ನಂದಾದೀಪ ಯಾವಾಗಲೋ ಆರಿ ಬತ್ತಿ ಸುಟ್ಟು ಕರಕಾಗಿತ್ತಲ್ಲ! ಹೀಗೆ ಇದ್ದಕ್ಕಿದ್ದಂತೆ ಮೋಡ ಮುಸುಕಿ ಕತ್ತಲಾವರಿಸುತ್ತದೆಂದು ಯಾರಿಗೆ ಗೊತ್ತಿತ್ತು? ಗುಟ್ಟಾಗಿ ಬಸಿರಾದ ಮೋಡ ಯಾವ...

ನಮ್ಮೂರ ಹುಡುಗಿಯರು

ಎಲೆ ಮರೆಯ ಕಾಯಿಗಳನ್ನು ಹಣ್ಣಾಗುವ ಮೊದಲೇ ಯಾರ್ಯಾರೋ ಕಿತ್ತುಬಿಟ್ಟರು. ನಮ್ಮೂರ ಚೆಂದದ ಹೆಣ್ಣುಗಳನ್ನು ಇನ್ನೂ ಕಣ್ಣು ಬಿಡುವಷ್ಟರಲ್ಲೆ ಯಾರ್ಯಾರೋ ಮದುವೆಯಾಗಿಬಿಟ್ಟರು. *****

ನಿವೇದನೆ

ಕಾಲವೇ, ನನಗೆ ನನ್ನ ಕಳೆದು ಹೋದ ಬಾಲ್ಯ ಕೊಡು. ಕುಣಿಯಲು ಅಂಗಳ ಕೊಡು, ಆಡಲು ಆಟಿಕೆ ಕೊಡು. ನನ್ನ ಯೌವನವನ್ನು ಮತ್ತೆ ಬರುವ ಮುದಿತನವನ್ನು ನೀನೇ ಇಟ್ಟುಕೋ. ನಾನು ಮಗುವಾಗಿ ಬೀಳುತ್ತಾ, ಏಳುತ್ತಾ, ಕುಣಿಯುತ್ತಾ...

ಎಂದಿಗಾದೀತು ಈ ದೇಶ

ಎಂದಿಗಾದೀತು ಈ ದೇಶ ಎಲ್ಲರಂತೆ ತಾನೂ? ಎಂದಿಗಾದೀತು ಇರದಂತೆ ತರತಮ ಏನೇನೂ? ಜನಮನಗಳ ನಡುವೆ-ಗೋಡೆ ಎಂದಿಗೆ ಉರುಳುವುವು? ಬಡವರ ಇರುಳುಗಳು-ಎಂದಿಗೆ ಪೂರಾ ಕರಗುವುವು? ಸೆರೆಯೊಳಿರುವ ಲಕ್ಷ್ಮಿ-ದೀನರ ಕಡೆ ಹೊರಳುವಳೆಂದು? ಗಾಳಿ ಬಿಸಿಲಿನಂತೆ - ಎಲ್ಲರ...

ಲೋಹದ ಹಕ್ಕಿ

ಹಕ್ಕಿ ಹಕ್ಕಿ ಇದು ಲೋಹದ ಹಕ್ಕಿ ಎನದರ ಚೆಂದ ಏನದರ ಅಂದ ಮೈಯೆಲ್ಲ ನುಣ್ಣನುಣ್ಣನೆ ಹೊಳಪು ಸೊಕ್ಕಿದ ರೆಕ್ಕೆಯ ಭುಜಬಲ ಯಾರು ಸಮಾನರೆನಗೆನ್ನುವ ಅಹಂ! ನಾನೂರು ಜನರ ಹೊರುವ ಭರವಸೆಯ ಮೂರೇ ಕಾಲಿನ ಸಾಮರ್ಥ್ಯದ...

ಕಬ್ಬಿಗ

ಯಾವ ಪ್ರತಿಮೆಗೆ ಯಾವುದುಪಮೆಯೋ ರೂಪಕಕೆ ಯಾವುದೋ ಆಕರ ಭಾವಯಾನದ ಭೌಮ ಕವಿಯೊಳು ಕವಿಸಮಯ ದೀಪಗಳಂಕುರ | ಧೃವಗಳುತ್ತರ ದಕ್ಷಿಣಗಳು ಸಮದ ಸಮತೆಗೆ ತೋರಣ ದಿಶಾ ದಿಸೆಯ ದೆಸೆಗಳೆಲ್ಲವೂ ಕಾವ್ಯ ಬಲ್ಮೆ ಮೇಲ್ಮೆಗೆ ಕಾರಣ |...

ಹುಟ್ಟು

ಎಲ್ಲೋ ಬೆಳೆದ ಗಿಡಮರಗಳ ಒಣ ತರಗಲೆಗಳ ಸವರಿ ಗಾಳಿ, ತೇಲಿ ಬಿಟ್ಟ ಕಣಜ ಬದುವಿನ ಕಾಳು, ಹೋಗಿದ್ದಾರೆ ಮೋಡಗಳ ಕರೆತರಲು ಕೈಯೊಂದು ಬೇಕಿದೆ ಹನಿಗಳ ಸಿಂಪಡಿಸಲು ಎಟುಕು ಮೊಳಕೆಗೆ ಕಾದು ಕುಳಿತ ಮರ್ಮರ. ಯಾರಿಗೆ...