ಅಮ್ಮಾ ಅಮ್ಮಾ, ನಾನೂ ನಿನ್ನ ಹಾಗೇ ಹೆಣ್ಣೇ ಅಲ್ಲವೇನಮ್ಮಾ… ನಿನ್ನ ಮೈಯೊಳಗೆ ಹರಿವ ರಕ್ತವೇ ನನ್ನೊಳಗೂ ಹರಿಯುತ್ತಿರುವುದರಿಂದ, ನೀನು ಉಸಿರಾಡುವ ಗಾಳಿಯನ್ನೇ ನಾನೂ ಉಸಿರಾಡುತ್ತಿರುವುದರಿಂದ, ನೀನು ಉಣ್ಣುವ ಊಟವನ್ನೇ ನಾನೂ ಉಣ್ಣುತ್ತಿರುವುದ...

ಅಮರಪ್ಪನವರು ತಮ್ಮ ಇಡೀ ಆಯುಷ್ಯವನ್ನು ರಾಜಕೀಯದಲ್ಲೇ ಕಳೆದರು.  ಅಧಿಕಾರದ ಸುಖ ಅನುಸರಿಸುವರು.  ಸಾಕಷ್ಟು ಧನ, ಕನ, ಸಂಪತ್ತು ವರ್ಧಿಸಿಕೊಂಡರು.  ದೆಹಲಿ, ಬೆಂಗಳೂರು, ಸ್ವಂತ ಊರು ಎಲ್ಲೆಂದರಲ್ಲಿ ಬಂಗ್ಲೆ ಪ್ಲಾಟು ಹೊಂದಿದ್ದರು. ದೇಶದ ರಾಜಕಾರಣಕ್ಕ...

ಅದು ಮದುವೆ ಮನೆ. ಅಕ್ಷತೆಯ ನಂತರ ಭೋಜನ ಪ್ರಾರಂಭವಾಯಿತು. ಉದ್ದ ನಾಲ್ಕು ಸಾಲುಗಳಲ್ಲಿ ಜನರು ಊಟಕ್ಕೆ ಕುಳಿತಿದ್ದರು. ಅದು ಪ್ರತಿಷ್ಠಿತ ವ್ಯಕ್ತಿಯ ಮಗನ ಮದುವೆಯಾಗಿರುವುದರಿಂದ ಸುಗ್ರಾಸ ಭೋಜನದ ವ್ಯವಸ್ಥೆ ಆಗಿತ್ತು. ಊಟದ ರುಚಿಯನ್ನು ಪ್ರೀತಿಯಿಂದ ...

ಸ್ಫರದ್ರೂಪಿ ಯವಕನೊಬ್ಬ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಉನ್ನತ ಅಧಿಕಾರಿಯಾಗಿದ್ದ. ಅವನು ತನ್ನ ತಾಯಿ ತಂದೆ ಸಂಬಂಧಿಕರೊಂದಿಗೆ ಬಂದು ಆ ಚೆಲುವಾದ ಹುಡುಗಿಯನ್ನು ನೋಡಿದ. ಅವಳ ಮಾತು, ಅರ್ಹತೆಗಳೆಲ್ಲ ಅವನಿಗಿಷ್ಟವಾದವು. ಹುಡುಗಿಯೂ ಅವನನ್ನು ಮೆಚ್ಚಿಕ...

ಉಗ್ರಪ್ಪ ನಾಲ್ಕನೆಯ ಬಾರಿ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಹ್ಯಾಟ್ರಿಕ್ ಸಾಧಿಸಿದ್ದ. ಅಭಿಮಾನಿಗಳು ಅತ್ಯಂತ ವೈಭವದಿಂದ ಅವನ ವಿಜಯೋತ್ಸವ ಆಚರಿಸಿದರು. ತೆರೆದ ವಾಹನದಲ್ಲಿ ಊರ ತುಂಬ ಮೆರೆಸಿದರು. ಗೆಲುವಿನಿಂದ ಬೀಗಿಕೊಂಡಿದ್ದ ಉಗ್ರಪ್ಪನ ಬಳಿಗೆ...

ಕಾರ್ಯಾಲಯದಲ್ಲಿ ಶಿಕ್ಷಣಾಧಿಕಾರಿಗಳು ಕಡತ ನೋಡುವಲ್ಲಿ ಮಗ್ನರಾಗಿದ್ದರು. ಹೊರಗೆ ಕೂಗಾಟ ಕೇಳಿಸಿತು. “ಧಿಕ್ಕಾರ…. ಧಿಕ್ಕಾರ…. ಹಲ್ಕಾ ಶಿಕ್ಷಕನಿಗೆ ಧಿಕ್ಕಾರ.” ಧ್ವನಿ ಜೋರಾಗಿತ್ತು. ಸಾಹೇಬರು ಎದ್ದು ಹೊರಗೆ ಬಂದರು. ಆ...

ಗಿಡ್ಡಜ್ಜ ಚಂದ್ರವಳ್ಳಿ ಕೆರೆ ಏರಿಯ ಮೇಲೆ ಕುಂತು ಗಾಣ ಹಾಕಿ ಬಲಗೈಯಿಂದ ಅವಾಗವಾಗ ಮೇಲಕ್ಕೆತ್ತುತ್ತಾ ಕೆಳಕ್ಕೆ ಬಿಡುತ್ತಾ ಮೀನು ಸಿಕ್ಕಿದೆಯೇ ಎಂದು ಪರೀಕ್ಷಿಸುತ್ತಿದ್ದ ಕಿವಿಯ ಬಳಿಯೇ ಎಡೆಬಿಡದೇ ಗುಯ್ಗುಟ್ಟುತ್ತಿದ್ದ ಸೊಳ್ಳೆಗಳನ್ನೂ ತಲೆಯ ಸುತ್ತ...

ಕವಿಯ ಬರಹದಕ್ಷರದಲಿ ನಿನ್ನ ಬಾಳಿನಕ್ಕರ ತೋರಲಾಗದು… ಓ ಸೌಮಿತ್ರಾ ಪ್ರಿಯೆ ಊರ್ಮಿಳಾ… ಎಲ್ಲೆ ಇರಲಿ, ಹೇಗೆ ಇರಲಿ ಒಲಿದವಗೆ ಕೊರಳ ನೀಡಿದ ಚಿತ್ಕಳಾ ಶಬ್ದಮೀರಿದ ನಿಃಶಬ್ಧದಲ್ಲಿ ತವಸಿಯಾಗಿ ಸಾಗಿದೆ, ಸಂಗ ತೊರೆದ ನಿಸ್ಸಂಗದಲ್ಲಿ ಚೈತನ್ಯ...

(ಭಾವಯಾನ ಪ್ರೀತಿಯ ಮಾತು) ಭೂಮೀನ ನೋಡಲು ಸೂರ್ಯ ಓಡೋಡಿ ಬಂದು, ಆಕೆಯ ಮುಖದಲ್ಲಿ ನಗು ನೋಡಿ ಪುಳಕಗೊಂಡು.. ಭೂಮಿನ ನೋಡುತ್ತಾ.. ನಿಂತಿದ್ದಾನೆ! ಮೊಗ್ಗು ಹೂವಾಗಿ ತನ್ನ ಕಂಪನ್ನು ಸೂಸುತ್ತಿದೆ…! ಇಬ್ಬನಿಯು ಆ ಹೂವ ಎದೆಯನ್ನು ಚುಂಬಿಸಿ ತೃಪ್ತ...

ನೀಲಿ ನಭದ ತಳಿಗೆಯಲ್ಲಿ ಚೆಲ್ಲಿ ಹೊಳೆವ ತಾರೆಗಳು ಸುಧಾಕರನಲ್ಲಿ ಇಂದು ಸಂಭ್ರಮ ಮೂಡಿಸುತ್ತಿಲ್ಲ. ಶುಭ್ರ ಶ್ವೇತ ಚಂದಮಾಮ ಅವನಿಗಿಂದು ನಿಸ್ತೇಜ, ನೀರಸ ಹಾಗೂ ನಿಶ್ಯಕ್ತ. ಪ್ರತಿ ಇರುಳ ನೆರಳಿನಲ್ಲಿ ಮನತಣಿಸುತ್ತಿದ್ದ ನಸುಗಾಳಿ ಅವನಿಗೆ ಈ ದಿನ ಅಸಹನ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...