ಹನಿಗವನ ಸಲಹೆ ಪರಿಮಳ ರಾವ್ ಜಿ ಆರ್ December 21, 2012June 14, 2015 ದಿನಕ್ಕೊಂದು ಸೇಬು ವೈದ್ಯದಿಂದ ದೂರ ಇರಿ ದಿನಕ್ಕೊಂದು ಈರುಳ್ಳಿ ಎಲ್ಲರಿಂದ ದೂರ ಇರಿ ***** Read More
ಹನಿಗವನ ಸೈಬರ್ನಾಟಕ ಮಾತೆ ಪರಿಮಳ ರಾವ್ ಜಿ ಆರ್ December 14, 2012June 14, 2015 ಜೈ ಭಾರತ ಜನನಿಯ ತನುಜಾತೆ ಜಯಹೇ ಸೈಬರ್ನಾಟಕ ಮಾತೆ ಸೈಬರ್ ಶಕೆಯು ಭವ್ಯತೆ ನೋಡು ಮೌನದಿ ಉರುಳುವ ಮೌಸಿನ ಬೀಡು ಜೈ ಭಾರತ ಜನನಿಯ ತನುಜಾತೆ ಜಯಹೇ ಸೈಬರ್ನಾಟಕ ಮಾತೆ ***** Read More
ಹನಿಗವನ ಸಾಮರಸ್ಯ ಪರಿಮಳ ರಾವ್ ಜಿ ಆರ್ November 28, 2012June 14, 2015 ಅನ್ನದ ತಪ್ಪಲೆಗೂ ನನ್ನ ತಲೆಗೂ ಒಂದೇ ಸಾಮರಸ್ಯ ಇಬ್ಬರೂ ಕುದಿಯುತ್ತೇವೆ ಒಂದು ಒಲೆಯ ಮೇಲೆ ಮತ್ತೊಂದು ಒಲೆ ಇಲ್ಲದೆ **** Read More
ಹನಿಗವನ ಪ್ರೀತಿ ದೀಪ ಪರಿಮಳ ರಾವ್ ಜಿ ಆರ್ November 21, 2012June 14, 2015 ನನ್ನ ನಿನ್ನ ಬತ್ತಿ ಪ್ರೀತಿಯಲಿ ನೆನೆಸಿ ಹೊತ್ತಿ ಉರಿಸಿದಾಗ ಹಚ್ಚೇವು ನಾವು ಬಾಳ ಪ್ರೀತಿ ದೀಪ **** Read More
ಹನಿಗವನ ಪ್ರಶ್ನೆಗೆ ಪ್ರಶ್ನೆ ಪರಿಮಳ ರಾವ್ ಜಿ ಆರ್ November 14, 2012June 14, 2015 ಮಗು! ಬೆಳಕು ಎಲ್ಲಿಂದ ಬಂತು? ಕೇಳಿದರು ಗುರುಗಳು ಊದಿ, ದೀಪವಾರಿಸಿ ಕೇಳಿತು ಮಗು ಹೇಳಿ ಗುರುಗಳೇ! ಬೆಳಕು ಹೋಯಿತು ಎಲ್ಲಿಗೆ? ***** Read More
ಹನಿಗವನ ಪ್ರಗತಿ ಪಥ ಪರಿಮಳ ರಾವ್ ಜಿ ಆರ್ November 9, 2012June 14, 2015 ಕಾಲಲ್ಲಿ ತುಳಿದ ಮಣ್ಣು ಅಗ್ನಿಯಲಿ ಬೆಂದು ಮಡಿಯಾಗಿ ಹಣತೆ ಬೆಳಗಿತ್ತು ಜ್ಯೋತಿ ***** Read More
ಹನಿಗವನ ಪಯಣ ಪರಿಮಳ ರಾವ್ ಜಿ ಆರ್ November 3, 2012June 14, 2015 ದಾರಿಯುದ್ದ ಬಾಳ ಯುದ್ಧ ಜಯಸಿದವ ಸಿದ್ಧ ಬುದ್ಧ **** Read More
ಹನಿಗವನ ಒಂದೇ ಪರಿಣಾಮ ಪರಿಮಳ ರಾವ್ ಜಿ ಆರ್ October 26, 2012June 14, 2015 ಹೆಣ್ಣು ಗಟ್ಟಿಯೋ? ಗಂಡು ಗಟ್ಟಿಯೋ? ಸಾವಿನ ಜಟ್ಟಿಯ ಮುಂದೆ ಇಬ್ಬರೂ ಮಣ್ಣಾಂಗಟ್ಟಿಯೇ ***** Read More
ಹನಿಗವನ ನೆಮ್ಮದಿಯ ಸೂತ್ರ ಪರಿಮಳ ರಾವ್ ಜಿ ಆರ್ October 10, 2012June 14, 2015 ದುಃಖದ ಹೊಳೆಯಲ್ಲಿ ನಗುವಿನ ನಾವೆ ತೇಲುತಿರಲಿ ಅಸೂಯೆ ಕಿಚ್ಚಿನಲಿ ಮೆಚ್ಚುಗೆಯ ಕಿರಣ ಬೆಳಗುತಿರಲಿ ***** Read More
ಹನಿಗವನ ನೆಮ್ಮದಿಯ ನೆಲೆ ಪರಿಮಳ ರಾವ್ ಜಿ ಆರ್ October 3, 2012June 14, 2015 ಬುದ್ಧಿವಂತನ ಚಮತ್ಕಾರ ದಂಗುಬಡಿಸೀತು ಹೃದಯವಂತನ ಉಪಕಾರ ಪ್ರತ್ಯುಪಕಾರ ಬಯಸೀತು ಸ್ವಯಂ ಸಹಕಾರ ನೆಮ್ಮದಿಯ ನೆಲೆಯಾದೀತು ***** Read More