Home / ಕವನ / ಕವಿತೆ

ಕವಿತೆ

ಹನಮಂತ ಹಾರಿದಾ ಲಂಕಾ ಸುಟ್ಟುಬಿಟ್ಟಾನೋ ಬಿಡು ನಿನ ಬಿಂಕಾ ||ಪ|| ರಾಮ ರಘುಪತಿ ಭಕ್ತಾ ಒಂದು ನಿಮಿಷದೂಳಗ ತಂದುಕೊಟ್ಟನೋ ಸೀತಾ ಹೌದೌದು ರಾಮರವದೂತಾ ||೧|| ರಾಮ-ಲಕ್ಷ್ಮರ ಮಾತು ಮಾರುತಿಗೆ ಹೇಳಿದ್ದು ಗೊತ್ತಿಲ್ಲದಾಯ್ತು ಉಂಗುರ ಕೊಟ್ಟಿದ್ದು ಗೊತ್ತು...

ಮರದ ಕೊಂಬೆಗೆ ಒಂದು ತೊಟ್ಟಿಲವ ಕಟ್ಟಿಹುದು ತೊಟ್ಟಿಲಲಿ ಆಡುತಿದೆ ಕೈಕಾಲುಗಳ ಬಿಚ್ಚಿ ಈಗ ಕಣ್ದೆರೆದಿರುವ ಹೊಚ್ಚ ಹೊಸ ಎಳೆಯ ಕೂಸು || ಮರದ ಮೇಲ್ಬದಿಯಲ್ಲಿ ಮರಜೇನು ಹುಟ್ಟಿಹುದು ದೇವರಾಯನ ಕರುಣೆ ಯಿಂದ ಹುಟ್ಟಿಗೆ ಸಣ್ಣ ಹುಗಿಲು ಕೊರೆದಿಹುದಲ್ಲಿ ಹನ...

ಬೋಲ್ತೆ ಅಲಾವಾ ಖೇಲೈ ಚಲೋ ಜಾ ಐಸುರ ಅಲಾವಾ ಖೇಲೈ ಚಲೋ ಜಾ                ||ಪ|| ಲೋ ಕಾತೂನಾ ಚ ಬಾಲಕ ಮೊಹರಮ್ ಅಲಾವಾ ಖೇಲೈ ಚಲೋ ಜಾ                    ||ಅ.ಪ.|| ಎಪ್ಪಡತೆ ಮಪ್ಪಡ ವುಲ್ ಉಂಟಾಲೆಮೆ ಶಪ್ಪಿಸೆಸೆ ಸೋಮಯಾಶೆ ಮದೀನಪುರದಿ ಬೊಲ್ತ...

ಬಹುಶಃ ಹಗಲು ಇರುಳಿಂದ ಬೈಗು ಬೆಳಗಿಂದ ಭೂಮಿ ಬಾನಿಂದ ನೆಲವು ಜಲದಿಂದ ತಾರೆಯು ಪುಂಜದಿಂದ ಸೂರ್ಯನು ಕಪ್ಪುಗೂಡಿಂದ ಬೇರೆಯಾದಂದು ನಾವಿಬ್ಬರೂ ಬೇರೆ ಬೇರಾಗಿರಬೇಕು ಇಡಿಯಾಗಿ ನೋಡಿದರೆ ನನಗೂ ನಿನಗೂ ಕೋಟಿ ರೂಪ ಬಿಡಿಯಾಗಿ ನೋಡಿದರೆ ನಾನೊಂದು ಬಯಕೆ ನೀನ...

ದೀಪಗಳ ದಾರಿಯಲಿ ನಡುನಡುವೆ ನೆರಳು ನೆರಳಿನಲಿ ಸರಿವಾಗ ಯಾವುದೋ ಬೆರಳು ಬೆನ್ನಿನಲಿ ಹರಿದಂತೆ ಭಯಚಕಿತ ಜೀವ ತಣ್ಣನೆಯ ಒಡಲಲ್ಲಿ ಬೆದರಿರುವ ಭಾವ. ಆಸೆ ಕನಸುಗಳೆಲ್ಲ ತೀರಿದುವು ಕುಸಿದು ಭಾಷೆಗೂ ಸಿಗದಂಥ ಭಯದ ಮಳೆ ಬೆಳೆದು ಕಪ್ಪು ಮೋರೆಯ ಬೇಡ ಕರಿದಾರ ...

ತಾಯೆ ನಿನ್ನ ಕಂದನಾದೆನಲ್ಲ ಎಂಥ ಪುಣ್ಯವೇ ನಿನ್ನ ಅಮ್ಮನೆಂದು ಕರೆವ ಜೀವ ಏನು ಧನ್ಯವೇ! ನಿನ್ನ ಪಾದ ತೊಳೆಯಲು ಕಾತರಿಸಿದೆ ಕಡಲು ಕೋಟಿ ಕೋಟಿ ಜೀವಕೆ ರಕ್ಷೆ ನಿನ್ನ ಒಡಲು ಹಸಿರು ಮುರಿವ ಶಾಲಿವನದ ಸಾಲು ನಿನಗೆ ವಸ್ತ್ರ ಅಂಬರದಲಿ ಮಿಂಚಿದೆ ನಿನ್ನ ಕೈ...

ಐಸುರ ಮೋರುಮದಾಟ ಹೇಸಿ ತಗಿ ನಿನ್ನ ಪಾಠ                ||ಪ|| ಒಂದು ಬೀಜ ಅಕ್ಷರವನರಿಯದೆ ಮಂದಿಯೊಳು ಬಹು ಜಾಣನೆನಸಿ ನಿಂದೆಗುಣ ನಿಜಾತ್ಮನರಿಯದೆ ಹಂದಿ ಜಲ್ಮಕೆ ಬಿದ್ದಿ ತಮ್ಮಾ             ||೧|| ಕತ್ತಲ ಶಹಾದತ್ತು ಹ್ಯಾಂಗೋ ಛೇ ಮತಿಹೀನ ಹೋಗ...

ಅಲಾವಿ ಇನ್ನ್ಯಾತಕ್ಕಾಡಬೇಕು                       ||ಪ|| ಬೇಧವನರಿಯದೆ ನೀವು ಸಾಲತುರುಕರು ಕೂಡಿ ಕುಂದನಿಟ್ಟು ಕುಣಿಸ್ಯಾಡೋ ಅಲಾವಾ ಯಾತಕ್ಕಾಡಬೇಕು. . .    ||೧|| ಆರು ಶಾಸ್ತ್ರ ಹದಿನೆಂಟು ಪುರಾಣ ಓದಿಕೋ ಪುರಾಣ ಓದಿಕೋ ಕಿತಾಬ ಯಾತಕ್ಕಾಡಬೇ...

ಹಿಡಿ ಹಿಡಿ ಹೋಗ್ತದ ಐಸುರ ಹೋಗ್ತದ ಐಸುರ                                       ||ಪ|| ಜಡಿ ಜಡಿ ಬಲವಾಯ್ತು ಕರ್ಬಲ ಕರ್ಬಲ ಜಡಿದರ ಮಾರ್ಬಲಯೆಲ್ಲದ ಸಾರ್ಬಲದೊಳು ನೀ ನಡಿ ನಡಿ   ||೧|| ಪಡಿ ಪಡಿ ಸಮ ರಂಗಭೂಮಿಯ ಶಾದತ್ತ ಪಡಿ ಶಾದತ್ತ ಪಡಿದರೆ...

ಹಾಡುದು ಬಿಡೋ ಮೂಢಾ ಕವಿತ ರಿವಾಯತ     ||ಪ|| ರೂಢಿಪ ಶಾರಮದೀನದ ಪತಿಗಳು ಕೂಡಿದರ‍್ಹೋಗಿ ಶಾದತ್ತ                  ||೧|| ಕಲ್ಲಿನೊಳಗ ವಜ್ರ ಚೆಲ್ಲಿ ಕತ್ತಲದಿನ ಬಲ್ಲಿದರ‍್ಹೋಗಿ ಶಾದತ್ತ                ||೨|| ಹೇಳುವರ‍್ಯಾರಿಲ್ಲ ಶಿಶುನಾಳ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...