
ಬೇರಿಳಿಸಲು ಕುಡಿಯೊಡೆಯಲು ಹೂ ಅರಳಿಸಲು ಸೂರ್ಯನೇನು ಒಂದು ಕಾಳೇ? ಜೀವ ತುಂಬಲು ಚೈತನ್ಯ ನೀಡಲು ಬಿಡದಂತೆ ಹಿಡಿದಿಡಲು ಆಗಸವೇನು ಮಣ್ಣೇ ? ಅನಾದಿಯಿಂದ ಆಗಸಕ್ಕೆ ಅದೇ ದೂರು ಸೂರ್ಯನ ಆತ್ಮಸಾಂಗತ್ಯವಿಲ್ಲದ ಬೇಜಾರು ಸೂರ್ಯನಿಗೋ ಅವನದೇ ಹಾದಿ ನಡೆದದ್ದೆ...
ಯಾವುದಕ್ಕೂ ಬಗ್ಗದ ಕುಗ್ಗದ ಕಲ್ಲಾದರೆ ನೀನು ಮಳೆಗೆ ಬಳಿದು ಹೋಗುವ ಬಿಸಿಲಿಗೆ ಬೂದಿಯಾಗುವ ಮಣ್ಣು ನಾನು ನೀನು ನಿರ್ವಿಕಾರ ಅಚಲ ನಾನು ನೀರಿನೊಡನೆ ವಿಕಾರವಾಗುವ ಕೆಸರು ಹುಡಿಯಾಗಿ ಗಾಳಿಯಲ್ಲಿ ಸಂಚಲ ನೀನು ನೆನೆದುಕೊಂಡು ಗಟ್ಟಿಯಾದೆ ನಾನು ಒತ್ತಡಗಳಿ...
ನಿನಗಾಗೇ ಈ ಹಾಡುಗಳು ನೀ ಕಟ್ಟಿಸಿದ ನಾಡುಗಳು; ನೀನೇ ಇದರ ಮೂಲ ಚೂಲ ಒಳಗಿವೆ ನನ್ನ ಪಾಡುಗಳು. ಯಾಕೆ ಕಂಡೆನೋ ನಾ ನಿನ್ನ ತುಂಬಿ ಹರಿಯುವ ಹೊಳೆಯನ್ನ? ಯಾಕೆ ಹೊಕ್ಕಿತೋ ಹಿಡಿವಾಸೆ ಹೊಳೆಯುವ ಕಾಮನ ಬಿಲ್ಲನ್ನ? ನೀರು ತುಂಬಿರುವ ನಿಜ ಕೊಳವೊ, ಮೋಹಿಸಿ ಕ...
ಬಾಂಬು ಭಯೋತ್ಪಾದನೆಯ ಸದ್ದುಗಳು ಇಲ್ಲಿ ಕೇಳಿಸದೇ ಕಾಣಿಸದೇ ಹೋದರೂ ಮನೆಗೆ ಬಂದು ಬೀಳುತ್ತವೆ ಪತ್ರಿಕಾ ಸುದ್ದಿಗಳು, ಟಿ.ವಿ. ಚಿತ್ರಗಳು ಮುಗಿಲುದ್ದ ಬಾಂಬುಗಳ ಹೊಗೆ ನೆಲತುಂಬ ಸಾವು ನೋವುಗಳ ಆಕ್ರಂದನ ಅಮಾಯಕರ ಗೋಳಾಟ ತುಂಡು ತುಂಡಾದವರ ನರಕಯಾತನೆ ತ...
ಹೀಗೆ ಒಮ್ಮೊಮ್ಮೆಯಾದರೂ ಎಲ್ಲ ಮಿತಿಗಳ ಮೀರಿ ನನ್ನೆದೆಯ ದಡಕೆ ಅಪ್ಪಳಿಸು ಬಾ ಕಡಲೇ. ಶತಶತಮಾನಗಳಿಂದ ಕಾದು ಕೆಂಡವಾಗಿರುವ ನನ್ನೆದೆಯ ಸುಡುಮರಳ ಕೊಂಚ ತಂಪಾಗಿಸಿಕೊಳ್ಳುತ್ತೇನೆ. ನೀ ಹೊತ್ತು ತರುವ ಕುಳಿರ್ಗಾಳಿಗೆ ಒಮ್ಮೆಯಾದರೂ ಅರಳಿ ಮತ್ತೊಮ್ಮೆ ಪಕ್...
ನೀ ಸಿಗದೆ ನಾನೆಂತು ತಿಳಿವೆನೇ ನನ್ನ ಸಾಣೆ ಗೆರೆಮಿಂಚದೆ ತಿಳಿವರೇ ಹೊನ್ನ? ನೂರಾರು ಕೊಪ್ಪರಿಗೆ ನಿಧಿ ಹುಗಿದ ಗವಿಯು ಆತ್ಮ ಸೆರೆಯಿದ್ದೂ ಅರಿತಿರದ ಭವಿಯು ನಾನೊಂದು ಕಗ್ಗಾಡು ನನ್ನ ನಾ ಅರಿಯೆ ಬೆಳಕಾಗಿ ಒಳತೂರಿ ದಾರಿಗಳ ತೆರೆಯೆ! ನನ್ನ ಗೂಢಗಳಲ್ಲಿ...
ಕಥೆಯಂತೂ ಸಾಗುತ್ತದೆ ಕಂದ ಆದರೊಂದೇ ಷರತ್ತು ಕಥೆ ಕೇಳುವ ಕುರುಹಿಗೆ ಕಥೆಗೆ ಉಸಿರಂತೆ ನೀ ‘ಹೂಂ’ ಎಂದರೆ ಮಾತ್ರ ಮುಂದೆ ಸಾಗುತ್ತದೆ ಕಥೆ ತಡವರಿಸದೆ! ಆಡ್ಡಗೋಡೆಯ ಮೇಲಿನ ದೀಪ ಇತ್ತಲೂ ಒಂದಿಷ್ಟು ಬೆಳಕು ಚೆಲ್ಲಿ ಅತ್ತಲೂ ಒಂದಿಷ್ಟು ಬೆಳಕು ಚೆಲ್ಲಿ ಎ...













