Home / ಕವನ / ಕವಿತೆ

ಕವಿತೆ

ನಿನ್ನ ನೆನಪು ನಿನ್ನ ಕರುಣೆ ನಿನ್ನ ಪ್ರೀತಿ ನಿನ್ನ ಭಾವ ನನಗೆ ಮುದವ ನೀಡಿದೆ || ನಿನ್ನ ಬಾಳು ನಿನ್ನ ಬವಣೆ ನಿನ್ನ ಮನಸು ನಿನ್ನ ಹೊಸತು ಮಾದರಿಯಾಗುಳಿದಿದೆ || ನಿನ್ನ ಸ್ನೇಹ ನಿನ್ನ ಘನತೆ ನಿನ್ನ ರೀತಿ ನಿನ್ನ ನೀತಿ ನನ್ನ ಸರ್ವಸ್ವ ಎನಿಸಿದೆ || ...

ಮುಕ್ಕಣ್ಣಶೆಟ್ಟಿ ದಯವಿಟ್ಟು ಕೊಟ್ಟ ಅಕ್ಕಿಯಲ್ಲಿ ಚಿಕ್ಕ ಚಿಕ್ಕ ಸಹಸ್ರ ಲಿಂಗಗಳು; ಅಕ್ಕಿಯಷ್ಟೆ ಬಿಳಿ ಉಕ್ಕಿನಷ್ಟು ಭಾರ ಬಿಕ್ಕಿದರೆ ಹೇಗೆ ಚಿಕ್ಕ ಆಲಿಕಲ್ಲನ್ನು ಮುಗಿಲು ಹಾಗೆ ಮಣಿಹರಳು! ಶೆಟ್ಟಿ ಶಿವಭಕ್ತ ಜೊತೆಗೆ ಕವಿರಕ್ತ ಈಗ ಸರ್ಕಾರವೂ ಕುಲುಕ...

ಆನೆ ಬಂತೊಂದಾನೆ ಆನೆ ಬಂತೇನೆ ಆನೆಯಷ್ಟೇ ದೊಡ್ಡ ಆನೆ ಸರಿ ತಾನೆ ಭಾರಿ ಕಂಭಗಳಂತೆ ಅದರ ಕೈಕಾಲು ಸೊಂಡಿಲೆಂದರೆ ತೂಗಿ ತೊನೆವ ಬಿಳಲು ದೊರಗು ಮೈ ಗೆರಸೆ ಕಿವಿ ಅದರಂತೆ ಗೋಣು ಏನೊ ಹೇಳಲು ಬಯಸುವಂಥ ಕಿರುಗಣ್ಣು ನೋಡಿದರೆ ಎಲ್ಲರೂ ಹೊರಬೀದಿಗಿಳಿದು ಎಂದಿ...

ಆಡು ಬಾಬಾ ಕೂಡು ಬಾಬಾ ಬೆಳಗಿನಂಗಳ ಹೊಳೆಯಲಿ ಹಾಡು ಬಾಬಾ ನೀಡು ಬಾಬಾ ನಿಜದ ನಿರ್‍ಮಲ ಕೊಳದಲಿ ||೧|| ಎತ್ತ ನೋಡಲಿ ಸುತ್ತ ಓಡಲಿ ಒಲವಿನಮೃತ ಮಿಲನಜಂ ಸತ್ಯ ಸೋಂಸೋಂ ತೋಂತೋಂ ತನನ ತಂತನ ತನನ ಓಂ ||೨|| ಗಾಳಿ ಬಿಂಗರಿ ಮುಗಿಲ ಸಿಂಗರಿ ತುಂಬಿ ತಿರುಗಿದ...

ಯಾರು ಕೊಯ್ದರೊ ಬೆಳೆಯ ನೆನ್ನೆ ನಗುತ್ತಿದ್ದ ನವಿಲುಗದ್ದೆಯಲ್ಲಿ? ರೆಪ್ಪೆ ಮುಚ್ಚಿದರಿಲ್ಲಿ ಕಪ್ಪೆ ತುಂಬಿದ ಬಾವಿ ಸಿಪ್ಪೆ ಸುಲಿಯುತ್ತಿದೆ ನೆನಪು ನಿದ್ದೆಯಲ್ಲಿ. ಕನಸುಗೊಬ್ಬರದಲ್ಲಿ ತೆನೆಯೊಡೆದ ಮನಸನ್ನು ನೆತ್ತರಲಿ ತೊಯ್ದವರು ಯಾರೊ ಕಾಣೆ ಬೆವರು ...

ಹೆಂಡತಿಯ ಮಾತ ಕೇಳಿದರೆ ಒಮ್ಮೊಮ್ಮೆ ಒಳ್ಳೆಯದೇ ಆಗುವುದು| ಅಗಾಗ ಅವಳಿಗೂ ಗಂಡ ನಾ ಹೇಳಿದಮಾತ ಕೇಳುವನೆಂಬ ನಂಬಿಕೆಯಲೆ ಜೀವನ ಸಾಗುವುದು|| ವಾರಕ್ಕೊಮ್ಮೆ ಸಂತೆ ಮಾಡೆಂದರೆ ಜೇಬಿಗೆ ಲಾಭವೇ ತಾನೆ| ತಿಂಗಳಿಗೊಮ್ಮೆ ಮನೆ ಸಾಮಾನು ತರಬೇಕೆಂದರೆ ಒಳ್ಳೆಯದೇ...

ಉರಿದುರಿದು ದಣಿದ ರವಿ ಮರೆಯಾದ ದಿನದ ದುಡಿಮೆಗೆ ತೆರೆ ಎಳೆದು ಹೋದ. ಅಭಿಮುಖವಾದವು ಯಾವಜ್ಜೀವ ಪಶು ಪಕ್ಷಿಗಳು ಗೂಡುಗಳ ಕಡೆಗೆ. ಕಣ್ಣು ತೆರೆದಳು ನಿಶೆ ನಭವು ತುಂಬಿ ಹೋಯಿತು ಮಲ್ಲಿಗೆ ಹೂವುಗಳಿಂದ. ಕರೆಸಿದಳು ಮಾರುತನ ನಿಯೋಜಿಸಿದಳು ಬೀಸುತಿರು ಮೆಲ...

೧ ನನ್ನ ಅಜ್ಜಿಯದು ತುಂಬು ಸಂಸಾರ ನನ್ನ ಅವ್ವನಿಗೆ ನಾಲ್ಕು ಮಂದಿ ಮಕ್ಕಳು ನನಗೆ- ಒಬ್ಬಳೇ ಹೆಣ್ಣು ಮಗಳು ಎಲ್ಲ ನೆನಪಾಗುವುದು- ನಾನು, ನನ್ನ ತಂಗಿ ತಮ್ಮಂದಿರು ಹಂಚಿಕೊಂಡೆವು ಅನ್ನದಂತೆಯೇ ಪ್ರೀತಿಯನ್ನು ಸಾಧಿಸಿದೆವು ದ್ವೇಷವನ್ನು ಬಿಟ್ಟುಕೊಟ್ಟವು...

ಅದುರುವ ಅಧರದಲಿರುವುದು ಗಾನವು ವದಗಿದ ಕುಸುಮವು ತುರುಬಿನಲಿ ಕಳಕಳ ರವದಲಿ ನುಣುಪಿನ ಬೆಣಚಲಿ -ಸುಳಿಯುವ ಹೊಳೆಯೋ ಯಾರೆಲೆನೀ- ಕೆಲಸಕೆ ನಲಿವವು ನಿನ್ನಂಗಗಳು ಅಲಸದೆ ನಡುನಡು ನಗುವದದೇಂ ಮಂಜುಳ ಮಾತಿನ ಇಂಗಿತವೇನದು -ಅಂಜದ ಕಂಗಳ ಭಾಷೆಯದೇಂ- ಉಕ್ಕಿ ಹ...

ಜೀವ ಭಾವ ಬೆರೆತಗಾನ ನನ್ನ ಎದೆಯ ತುಂಬಿತು ಅದರ ಭಾವ ನನಗೆ ಒಲಿದು ಬಾಳು ಧನ್ಯವೆನಿಸಿತು || ಎನ್ನ ಬದುಕು ಭವ್ಯವಾಯ್ತು ಮನದ ಹೂವು ಅರಳಿತು ಮುದುಡಿದ ಮನ ಮಿಡಿದು ಹರುಷ ತುಂಬಿ ಗೆಲುವು ತಂದಿತು || ನೂರು ಆಸೆ ನೂರು ಭಾವ ಚೈತನ್ಯವ ನೀಡಿತು ಭರವಸೆಗಳ ...

ಪೆಟ್ರೋಲ್ ವಾಸ್ತೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...