Home / ಕವನ / ಕವಿತೆ

ಕವಿತೆ

ನಾನು ಎನ್ನುವ ಅಹಂಕಾರವು ನಿನ್ನೊಳಗೇ ಮನೆ ಮಾಡಿರಲು ಮರೆತೆ ನೀ ನಿನ್ನವರನ್ನ ಮರೆತೆ ನೀ ಎಲ್ಲವನ್ನ… ಹುಸಿ ಕೋಪ ತರವಲ್ಲ ಮನದಿ ನಿತ್ಯ ಮನತಾಪ ಸರಿಯಲ್ಲ ಕೋಪದಾ ಮೂಲ ಕೊಲ್ಲುವುದು ನಿನ್ನ ಅದನ್ನು ಅರಿತರೆ ನಿನ್ನ ಬಾಳು ಚೆನ್ನ. ದ್ವೇಷದಿಂದ ದ್...

ಅನಿರೀಕ್ಷಿತವಾಗಿ ಮಾಡಿದ ಭಾಷಣ, ವರ್ಷಗಳ ಅನಂತರ ಮಾಡಿದ ನಾಟಕ, ಆಶು ಭಾಷಣ ಸ್ಪರ್ಧೆಯಲ್ಲಿ ಗಳಿಸಿದ ಬಹುಮಾನ ಟ್ರೈನಿಂಗ್‌ಗೆ ಹೋಗಿದ್ದಾಗ ಮಾಡಿದ ಉಪನ್ಯಾಸ ಇವೆಲ್ಲ ಕಂಡಾಗ ಕ್ಷಣ ಹೊತ್ತು ಅನಿಸಿತ್ತು ನನ್ನೊಳಗಿನ ಕಲಾವಿದ ಇನ್ನೂ ಇದ್ದಾನೆ ಜೀವಂತ. ಮನ...

ಸಾಕಾತ ಸಾಕಾತ ಇವ್ನ ಸಂಗ ಸಾಕಾತ ಸಾಕಾದ್ರು ತುಸು ತುಸು ಬೇಕಾತ ||ಪಲ್ಲ|| ನನಪೂರ್ತಿ ನಾನಿದ್ರ ಬುಸರ್ಬುಳ್ಳಿ ಅಂತಾನ ಹೆಸರ್‍ಹೇಳಿ ಕಿಡಿಕ್ಯಾಗ ಹಾಡ್ತಾನ ಬಾರಾಕ ನಿನಗ್ಯಾಕ ಪಡಿಪಾಕ ಧೀಮಾಕ ಬಾರಂದ್ರ ಜೋರ್‍ಮಾಡಿ ಓಡ್ತಾನ ||೧|| ನಿದ್ರ್ಯಾಗ ನೀರಾಗ ...

ನನ್ನೊಡಲ ತುಂಬ ನೋವಿನ ಧ್ವನಿಗಳು, ಚೀತ್ಕಾರಗಳು. ಉಸಿರುಗಟ್ಟಿ ಸಾಯುತ್ತಿರುವ ಹತಾಶ ಕನಸುಗಳು ಹೆಡೆಬಿಚ್ಚಿ ಹೊಗೆಯಾಡುವ ಬುಸುಗುಡುವ ಬಯಕೆಗಳು, ಬಾಡಿ ಮುದುಡಿ – ಕಮರಿ ಕರಕಾರಿ ಭಸ್ಮವಾದ ಚಿಗುರುಗಳು – ನಿನ್ನ ಕಾಲಡಿ ಸಿಕ್ಕು &#8211...

ಕೃಪಾಶಂಕರ ನಿನಗೆ ಅವಧಾನಿಗಳ ಕೃಪೆಯಾಗಲಿಲ್ಲ ಮಂತ್ರಿ ಪದ ಬರಲಿಲ್ಲ ಜನಮತಗಳಿಸಿ ನಿನ್ನ ಮರ್ಯಾದೆ ಉಳಿಸಿದರೂ ಪದ ಪಡೆಯುವ ಆಸೆ ಭರವಸೆ ಇದ್ದರೂ ಮೇಲಿನವರು ಕಡೆಗಣಿಸಿದರು. ಇದು ನಿನಗೆ ಸಂದ ಎಣಿಸದೆಯೆ ಬಂದ ಬಹುಮಾನ! ಅಹವಾಲು ತಲುಪಲಿಲ್ಲ ಒಲೈಕೆ- ಫಲಿಸ...

ಓಂ ಬ್ರಹ್ಮಾನಂದಂ ನಾದ ರೂಪಂ ಆನಂದಂ ಸತ್ಯ ನಿತ್ಯ ಸ್ವರೂಪಂ ನಮೋ ನಮೋ ಭುವನ ಮನೋಹರೀ ಶಂಕರೀ ಧನ್ಯಂ ಮಾನ್ಯಂ ಭುವನೇಶ್ವರೀ ಜೀವದುಸಿರ ನರನಾಡಿಗಳಲಿ ನಿನ್ನ ಆವಾಹನೆ ||ತಾಯಿ|| ನೀ ಬಾ ಎನ್ನ ಹೃದಯದಾಲಯಕೆ ನೆಲೆಸು ಬಾ ಹರಸು ಬಾ ||ತಾಯಿ|| ಬಾ ತಾಯೆ ಮಂ...

ಕಟ್ಟುವೆವು ನಾವು ಕನ್ನಡ ನಾಡೊಂದನು ಶಾಂತಿಯ ಬೀಡೊಂದನು|| ಉಳಿಸಿ ಬೆಳೆಸುವೆವು ನಾವು ಕನ್ನಡ ಸುಸಂಸ್ಕೃತಿಯ ಕನ್ನಡ ನಾಡೊಂದನು|| ಏನೇ ಬರಲಿ ಎಂತೇ ಇರಲಿ ಕನ್ನಡ ನಮ್ಮಯ ಉಸಿರಾಗಲಿ| ಕನ್ನಡಕಾದರೆ ಏನೇ ತೊಂದರೆ ಒಗ್ಗಟ್ಟಲಿ ಮೊಳಗಲಿ ಕನ್ನಡಕಹಳೆ| ಕನ್ನ...

೧ ಭಾರಿ ಭಾರಿ ಬದುಕಬೇಕೆಂದು ಬಾವಿ ತೆಗೆಯಲು ಹೋದೆ ಗುದ್ದಲಿ ಹಿಡಿದು ಜಜ್ಜುಗಲ್ಲೆಲ್ಲ ತೆಗೆದೆ ಅಗೆಯುತ್ತ ಅಗೆಯುತ್ತ ಹೋದೆ; ತಡೆಯೊಡ್ಡುವ ಬಂಡೆಗಳಿಗೆ ಡೈನಮೆಂಟಾದೆ ಇಳಿಯುತ್ತ ಇಳಿಯುತ್ತ ಇಳಿದೆ. ೨ ನಿಯತ್ತಿನ ನೇಗಿಲ ಯೋಗಿ ಯಾಗಿ ಬೀಜ ಬಿತ್ತಿ ನೀರ...

ಅಮ್ಮಾ ತಾಯಿ ಜಗದಂಬೆ ದೇವಿ ಮಕ್ಕಳನು ಕಾಯಿ ತಾಯಿ ನಮ್ಮ ಬಿಟ್ಟು ನೀ ಹೋಗಬೇಡ ನಾವಿನ್ನು ಎಳೆಯ ಕಾಯಿ || ೧ || ನಿನ್ನ ನಾಮ ನೂರಾರು ಕೋಟಿ ಕರೆಕರೆದು ಸಾಲದಮ್ಮ ನಿನ್ನ ರೂಪ ಕೋಟ್ಯಾನುಕೋಟಿ ಎಣಿಸಲಿಕೆ ಬಾರದಮ್ಮ || ೨ || ಗರ್ಭದಿಂದ ಹೊರಬಂದು ಕೂಸು ತ...

ಸಂತಸದ ಸಾಗರದಿ ಶರಶೂರೆ ಸರಸಾಟ ನೆಲಕಿಷ್ಟು ಸಿರಿಯು ವಾಸಂತದಲ್ಲಿ ಅಂತವಿಲ್ಲದ ಇಂಥ ಶುಭದ ಸಂತೆಯು ಕೂಡ ಹರಿಯುವದು ಕೊನೆಗೆ ಮಳೆಗಾಲದಲ್ಲಿ ದೊರೆಯ ಭಯ ಅಲ್ಲಿಲ್ಲ ಹಿರಿಯರಂಜಿಕೆಯಿಲ್ಲ ಋತುರಾಜ ವಾಸಂತ ಕಾಲದಲ್ಲಿ ಕೊರತೆಯಿಲ್ಲದ ಸುಖವ ಬಡವಬಲ್ಲಿದರೆಲ್ಲ...

ಪೆಟ್ರೋಲ್ ವಾಸ್ತೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...