Home / ಬಾಲ ಚಿಲುಮೆ

ಬಾಲ ಚಿಲುಮೆ

ಉಬಿಸ್ತೇವೆ ಕೊಬ್ಬಿಸ್ತೇವೆ ನಿನ್ನಯ ಕೀರುತಿ ಹಬ್ಬಿಸ್ತೇವೆ ಆಮೇಲೆ ನಿನ್ನ ತಲೆ ಕಡಿತೇವೆ ಓಕೇನಾ? ಓಕೆ ಓಕೆ ಎಂದಿತು ಮೇಕೆ ಆದರೆ ಜೋಕೆ! ನಾನೂ ಹಂಗೇ ಮಾಡುತ್ತಿದ್ದೆ ಹಿಂದಿನ ಜನ್ಮದಲಿ! *****...

ನಮ್ಮ ಚಂದ್ರಾಮ ಬೆಳುದಿಂಗಳಲಿ ಮಿಂದಾಂವ ತಂಪಿನ ಬೆಳಕನು ಚೆಲ್ಲಾಂವ ನಾಚುವ ಮಲ್ಲಿಗೆ ಮೊಗ್ಗೆಗೆ ಊದಿ ಮೆಲ್ಲಗೆ ಬಿಡಿಸಾಂವ ನಮ್ಮ ಚಂದ್ರಾಮ ಕಾಡಿಗೆ ಇಬ್ಬನಿ ಸುರಿಸಾಂವ ನಾಡಿಗೆ ಮಂಜು ಕಳಿಸಾಂವ ಬೀಸುವ ಗಾಳಿಯ ಮೋಡವನೇರಿ ಸವಾರಿ ಹೊರಟಾಂವ ನಮ್ಮ ಚಂದ್ರ...

ಪುಟ್ಟನ ಮನೆ ಮುಂದೆ ಇದೇನು ಕೂಟ ಇಷ್ಟು ಬೆಳಿಗ್ಗೆಯೆ ಊರವರ ಕಾಟ ಕೆಲವರು ಕುಂತು ಕೆಲವರು ನಿಂತು ಹಲವರು ಹಣಿಕಿ ಉಳಿದವರಿಣುಕಿ ಹಾಡುತ್ತಿರುವನು ಪುಟ್ಟನು ಎಂದು ಜನ ಬಂದಿರುವರು ಕೇಳಲು ಇಂದು ಪುಟ್ಟನ ಗಾಯನ ಒಂದೇ ಸವನೆ ನಡೆದಿದೆ ಯಾರದೆ ಪರಿವಿಲ್ಲದೆ...

ಚುಕು ಬುಕು ರೈಲು ಸಾಗುತಲಿತ್ತು ಮುಂದಕೆ ಮುಂದಕೆ ಓಡುತಲಿತ್ತು ಗಾವುದ ಗಾವುದ ಎದುರಿಗೆ ಇತ್ತು ಗಾವುದ ಗಾವುದ ಹಿಂದಕು ಬಿತ್ತು ಚುಕು ಬುಕು ರೈಲು ಸಾಗುತಲಿತ್ತು ಮುಂದಕೆ ಮುಂದಕೆ ಓಡುತಲಿತ್ತು ಆಚೆಗೆ ಬೆಟ್ಟ ಈಚೆಗೆ ಬಯಲು ಎಲ್ಲೋ ಹೊಲದಲಿ ನಡೆದಿದೆ ...

ಹಣ್ಣು ಹಣ್ಣು ಮಾವಿನ ಹಣ್ಣು ಯಾರಿಗೆ ಬೇಕು ಮಾವಿನ ಹಣ್ಣು? ನಂಗೆ ಬೇಡ ಮಾವಿನ ಹಣ್ಣು ಯಾಕೋ ಬೇಡ ಮಾವಿನ ಹಣ್ಣು? ಗೊರಟಿದೆಯಲ್ಲಾ ಅದಕೇ ಬೇಡ! ಹಣ್ಣು ಹಣ್ಣು ಬಾಳೇ ಹಣ್ಣು ಯಾರಿಗೆ ಬೇಕು ಬಾಳೇ ಹಣ್ಣು? ನಂಗೆ ಬೇಡ ಬಾಳೇ ಹಣ್ಣು ಯಾಕೋ ಬೇಡ ಬಾಳೇ ಹಣ್ಣ...

ಬೆಕ್ಕೇ ಬೆಕ್ಕೇ ಮಾರ್ಜಾಲ ತೋರಿಸು ನಿನ್ನಯ ಚಾಲ (ಕಾಣಿಸದಾಯಿತು ಬಾಲ) ಬೆಕ್ಕೇ ಬೆಕ್ಕೇ ಮಾರ್ಜಾಲ ತೋರಿಸು ನಿನ್ನಯ ತಂತ್ರ (ಮೂಗೂ ಮೀಸೆ ಅತಂತ್ರ) ಬೆಕ್ಕೇ ಬೆಕ್ಕೇ ಮಾರ್ಜಾಲ ತೋರಿಸು ನಿನ್ನಯ ಮಾಯ (ಇಲ್ಲವಾಯಿತು ಕಾಯ) ಆದರು ಹೇಗೆ ಉಳಿದಿದೆ ನೋಡಿ ಮ...

ಬೆಳ್ಳಂಬೆಳಗ್ಗೆ ಬಿಸಿ ಬಿಸಿ ಇಡ್ಳಿ ಯಾರಿಗೆ ಬೇಕು ಇಡ್ಳಿ? ಅಣ್ಣನಿಗೆ ಹತ್ತು ನಂಗೊಂದಿಪ್ಪತ್ತು ಒಟ್ಟಾರೆಷ್ಟು ಇಡ್ಳಿ? ಒಟ್ಟಾರೆ ಮೂವತ್ತು ಇಡ್ಳಿ ಕಣ್ ಕಣ್ ಬಿಟ್ಟು ಉದ್ದಿನ ಹಿಟ್ಟು ಯಾರಿಗೆ ಬೇಕು ದೋಸೆ? ಅಣ್ಣನಿಗಿಪ್ಪತ್ತು ನಂಗೊಂದು ಮೂವತ್ತು ಒ...

ಬಿಂದಿಗೆ ಬಿಂದಿಗೆ ನೀರಿಗೆ ಬಾ ಬಿಂದಿಗೆ ಸಂಜೆಯಾದರೆ ಬರತೀನವ್ವ ಮಲ್ಲಿಗೆ ಮೊಗ್ಗೆ ಬಿರಿತಾವೆ ಬಿಂದಿಗೆ ಬಿಂದಿಗೆ ನೀರಿಗೆ ಬಾ ಬಿಂದಿಗೆ ಹಕ್ಕಿ ಮರಳಿದರೆ ಬರುತೇನವ್ವ ಚಿಲಿಪಿಲಿ ರಾಗವ ಹಾಡುತಾವೆ ಬಿಂದಿಗೆ ಬಿಂದಿಗೆ ನೀರಿಗೆ ಬಾ ಬಿಂದಿಗೆ ಗಾಳಿ ಬೀಸ...

ಕೋಟಾಕಿದಂತೆ ಕೂತಿದ್ದರು ಟೆರ್ರಾ ಕೋಟಾ ಬುದ್ಧರು ಒಂದು ಎರಡು ಮೂರು ನಾಲಕು ಐದು ಆರು ಏಳು ಎಂಟು ಒಂಭತ್ತು ಹತ್ತು ಮತ್ತು ಇನ್ನೂ ಇರಬೇಕು ಮೂವತ್ತು ಎಷ್ಟೇ ಲೆಕ್ಕವ ಮಾಡಿದರೂ ಲೆಕ್ಕಕೆ ಸಿಗದೆ ಅವರಿದ್ದರು ಒಬ್ಬರೊಬ್ಬರ ಮೋರೆಯ ನೋಡಿ ಸದ್ದಿಲ್ಲದೆ ನಗ...

ನಮ್ಮೂರಲೊಬ್ಬ ಕತೆಗಾರರಿರುವರು ಇರುಳೂ ಹಗಲೂ ಕತೆ ಹೇಳುವರು ಯಾತಕೆ ಎಂದರೆ ಗೋಳಾಡುವರು ಪಾತರದವರೇ ವರಾತದವರು ಕದ ತಟ್ಟಿ ಬರುವ ಕತೆಗಳಿದ್ದಾವೆ ಕಿಟಿಕಿಲಿ ನುಗ್ಗುವ ಕತೆಗಳಿದ್ದಾವೆ ಕನಸಲಿ ಬಿಡದವು ನೆನಸಲಿ ಬಿಡುವುವೆ? ಹೇಳಿ ಮುಗಿಸಿದರೂ ಎದ್ದೆದ್ದು...

1...2324252627...37

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...