“ಗಿಡ, ಮರ, ಪ್ರಾಣಿ ಎಲ್ಲ
ನಮ್ಹಾಗೇನಮ್ಮಾ?
ಹೊಡದ್ರೆ ಬೈದ್ರೆ ಅವಕ್ಕೂ ನೋವು
ಆಗತ್ತೇನಮ್ಮ?”
“ಹೌದು ಮರಿ, ಮರ ಗಿಡ
ಎಲ್ಲಾ ನಮ್ಮಂತೇ
ಪ್ರಾಣೀನ್ ಕೂಡ ನೋಡ್ಕೋಬೇಕು
ಮನೇ ಮಕ್ಳಂತೆ.”
“ಮತ್ಯಾಕ್ ಅವು ನಮ್ಹಾಗೇನೇ
ಮಾತನ್ ಆಡಲ್ಲ?
ಬಟ್ಟೇ ಹಾಕ್ಕೊಂಡ್ ಸ್ಕೂಲಿಗ್ ಬಂದು
ಪಾಠ ಕಲಿಯೊಲ್ಲ?”
“ಅವುಗಳ ಮಾತು ರೀತಿ ಎಲ್ಲಾ
ಬೇರೆ ಥರಾ ಮರೀ,
ನಮ್ಗೆ ಅವು ತಿಳಿಯೋದಿಲ್ಲ
ಅವಕ್ಕದೇ ಸರಿ.
“ಅಮ್ಮಾ ಅಮ್ಮಾ ನಾಯಿ ಬೆಕ್ಕು
ನಾನೂ ಸಾಕ್ಲೇನೇ?
ತಿಂಡಿ ತಿನ್ಸಿ ಅವುಗಳ ಜೊತೆ
ಆಟ ಆಡ್ಲೇನೇ?”
*****