
ಎಂಥಾ ನಗಿ ಬಂತೋ ಎನಗೆ ಗಡ ಮುದುಕಿಯ ಕಂಡು ||ಪ|| ನಿಂತು ನೋಡಲಾಗವಲ್ಲದು ಕಣ್ಣಿಲೆ ಸಂತ್ಯಾಗ ಮಂದಿ ಕಾಣದವಳೋ ||ಅ.ಪ.|| ಆರು ಮೂರು ಗೆಳತೇರ ಸ್ನೇಹವನು ದೂರ ಮಾಡದೆ ಸುಮ್ಮಾನದಿ ತಾನು ದಾರಿಹಿಡಿದು ಸಾರುವಳಿದು ಏನು ದಾರಿ ನಡೆದ ಮುದುಕಿಯ ಕಂಡು ||೧|...
ನಡಿ ನಡಿಯುತ ಗಂಡ ನಡಮುರಿದೊದೆದೆನ್ನ ಹುಡುಗಾಟ ಬಿಡಿಸಿ ಹೌದೆನಿಸಿದನೇ ||ಪ|| ಮದನಗಿತ್ತ್ಯಾಗಿ ಬಂದು ಮನೆಯೊಳಗಿರುತಿರೆ ಬೆದಗಡಿಕಿಯೆಂದು ಹೆಸರಿಡಿಸಿದನೇ ನದರಿನಮ್ಯಾಲ ತಾ ನದರಿಟ್ಟು ಎನಗೆ ಮುದದಿ ಚುಂಬನಕೊಟ್ಟು ರಮಿಸಿದನೇ ||೧|| ಹೊಸದಾದ ಸೊಸಿಯಾದ...
ಮುದಿಕ್ಯಾಗಿ ಮುರುಕ ಇನ್ನ್ಯಾಕ ಎದುರಿಗೆ ನೀರಗಿಗಳ್ ಒದೆಯುವದು ಸಾಕೆ ||ಪ|| ಮೊದಲಿಗೆ ಮೂವರು ಕೂಡಿ ಮಾಯ ಮದನ ಮಂದಿರದೊಳು ಮುದದಿ ಮಾತಾಡಿ ಹದಗೆಟ್ಟು ಹಾದರ ಮಾಡಿ ಮುಂದೆ ಬದುಕಿನ ಎಚ್ಚರ ನಿನಗಿಲ್ಲ ಖೋಡಿ ||೧|| ಏಳೆಂಟು ಗೆಳತೇರು ಜತ್ತು ಹಳ್ಳಿ ಹಳ...
ಗುರುವಿಗೆ ಮರುಳು ಮಾಡುವರೇನೆ ಮಾನಿನಿ ? ಧರೆಯೊಳು ಪ್ರಭುವರ ದೊರಕುವನೆ ? ||ಪ.|| ಸರಸಿಜಮುಖಿವರ ಪರಮಮಧುಕೇಶ್ವರ ನರನಲ್ಲ ತಿಳಿ ನಿನ್ನ ಸರಕೇನೆ ? ಧರಿಗೆ ಪಾರ್ವತಿ ತನ್ನ ತಾಮಸರೂಪದಿ ನೆರೆ ಬಂದರೇನಾತ ಬೆರೆಯುವನೇ ? ||೧|| ಚನ್ನ ಚಲ್ವಿಕೆ ಕಂಡು ಸ...
ಎಂಥಿಂಥಾದೆಲ್ಲಾನು ಬರಲಿ ಚಿಂತೆಯಂಬೋದು ನಿಜವಾಗಿರಲಿ ||ಪ|| ಪರಾತ್ಪರನಾದ ಗುರುವಿನ ಅಂತಃಕರುಣ ಒಂದು ಬಿಡದಿರಲಿ ||ಅ.ಪ.|| ಬಡತಾನೆಂಬುದು ಕಡತನಕಿರಲಿ ವಡವಿ ವಸ್ತ ಹಾಳಾಗಿಹೋಗಲಿ ನಡುವಂಥ ದಾರಿಯು ತಪ್ಪಿ ಅಡವಿ ಸೇರಿದಂತಾಗಿ ಹೋಗಲಿ...
ಗುರುನಾಥಾ ರಕ್ಷಿಸೋ ಹೇ ಕರುಣಾಸಾಗರಾ ||ಪ|| ನರಜೀವಿಗೆ ಈ ದುರಿತ ಭವದ ಭಯ ಪರಿಹರಿಸೆನುತಲಿ ಮರೆಹೊಕ್ಕೆನು ||೧|| ಪಾಪಾಂಬುಧಿಯನು ಪಾರುಮಾಡೆನುತಲಿ ಶ್ರೀಪಾದಾಂಬುಜ ನಂಬಿಕೊಂಡೆ ಪರಮಾತ್ಮಾ ||೨|| ವಸುಧಿಯೊಳು ಶಿಶುನಾಳಧೀಶನ ಸೇವಕನ ವ್ಯಸನಗಳಿದು ಸಂತ...
ನನ್ನೊಳಗ ನಾ ತಿಳಕೊಂಡೆ ನನಗ ಬೇಕಾದ ಗಂಡನ್ನ ಮಾಡಿಕೊಂಡೆ ||ಪ|| ಆಜ್ಞಾಪ್ರಕಾರ ನಡಕೊಂಡೆ ನಾ ಎಲ್ಲಾರ ಹಂಗೊಂದು ಹರಕೊಂಡೆ ||ಅ.ಪ.|| ಆರು ಮಕ್ಕಳನಡುವಿಗಟ್ಟಿ ಮೂರು ಮಕ್ಕಳ ಬಿಟ್ಟಗೊಟ್ಟೆ ಇವನ ಮೇಲೆ ಮನವಿಟ್ಟೆ ಎನ್ನ ಬದುಕು ಬಾಳೆವೆಲ್ಲಾ ಬಿ...
ಗುರುಧ್ಯಾನವ ಮಾಡಿದಿ ಭಕ್ತಿಯ ನೀಡಿದಿ ಮುಕ್ತಿಯ ಬೇಡಿದಿ ಗುರುವಿನ ಕೂಡಿದಿ ಕುಣಿಕುಣಿದಾಡಿದಿ ಕೂಸು ನೀನಾಡಿದಿ ಈಶಾಡಿದಿ || ೧ || ಬೆಳ್ಳನ್ನ ಬೆಳದಿಂಗಳಾ ಹಾಲೂರಿದಂಗಳಾ ಬೆಳ್ಳಿಯ ಗಂಗಾಳಾ ಬೆಳ್ಳನ್ನಂಗಳಾ ಜಯ ಜಯ ಮಂಗಳಾ ಸದಾ ಶಿಶುನಾಳ ಸಾಧುಸಂತ ಮೇ...
ಗುರುಧ್ಯಾನವ ಮಾಡಿದಿ ಭಕ್ತಿಯ ನೀಡಿದಿ ಮುಕ್ತಿಯ ಬೇಡಿದಿ ಗುರುವಿನ ಕೂಡಿದಿ ಕುಣಿಕುಣಿದಾಡಿದಿ ಕೂಸು ನೀನಾಡಿದಿ ಈಶಾಡಿದಿ || ೧ || ಬೆಳ್ಳನ್ನ ಬೆಳದಿಂಗಳಾ ಹಾಲೂರಿದಂಗಳಾ ಬೆಳ್ಳಿಯ ಗಂಗಾಳಾ ಬೆಳ್ಳನ್ನಂಗಳಾ ಜಯ ಜಯ ಮಂಗಳಾ ಸದಾ ಶಿಶುನಾಳ ಸಾಧುಸಂತ ಮೇ...
ಹಾಕಿದ ಜನಿವಾರವಾ ಸದ್ಗುರುನಾಥಾ ಹಾಕಿದ ಜನಿವಾರವಾ || ಪ || ಹಾಕಿದ ಜನಿವಾರ ನೂಕಿದ ಭವಭಾರ ಬೇಕೆನುತಲಿ ಬ್ರಹ್ಮಜ್ಞಾನ ಉಚ್ಚರಿಸೆಂದು || ಅ. ಪ.|| ಸಂದ್ಯಾವಂದನೆ ಕಲಿಸಿ ಆ- ನಂದದೀವ ಬಿಂದು ವರ್ಗದಿ ನಿಲಿಸಿ ಹೊಂದಿಸಿ ಯಮುನಾತೀರದ ಮಧ್ಯದಲಿನಿಂದು ಎ...













