ದತ್ತೂರಿ ಕೊಟ್ಟವನು ಸತ್ತುಹೋಗಲಿ ಸಾಂಬಾ ಮತ್ತೆ ಅವರಿಗೆ ಮರಣ ಮೂರು ತಿಂಗಳಿಗೆ ಚಿತ್ತದೊಳು ಮಹೇಶಮಂತ್ರ ಜಪದೊಳಿರಲು ಮೃತ್ಯುವಿನ ಭಯವ್ಯಾಕೆ ಮರೆಯದಿರು ಸಾಂಬಾ ||೧|| ಮೂರು ದೇಹದೊಳಿದ್ದು ತೋರುತಿಹ ಭವಗೆದ್ದು ಮೀರಿ ನಡೆದವನಿಗಿದು ಬರಲರಿಯದು ತಾರಕದ...

ಆ ದೇವರು ನಮ್ಮನ್ನು ಧ್ಯಾನಿಸುವುದಿಲ್ಲ; ನಮ್ಮ ಆತ್ಮ ನಿವೇದನೆಗಳು ಪುಟಿದೇಳುವಾಗ ಸ್ವತಃ ನಾವೇ ಒತ್ತಡಕ್ಕೀಡಾಗುತ್ತೇವೆ. ಸದಾಕಾಲ ಮೋಜಿನೊಂದಿಗೆ ಬದುಕುವ ಜನ ಸಾಂತ್ವನ ಹೇಳಲು ಬರುತ್ತಾರೆ; ನೂರನೆಯ ಸಲ ನಾವು ಸಾಯಲು ಸಿದ್ಧರಾಗಬೇಕಾಗುತ್ತದೆ. ತುಟಿಗ...

ಏಕೆ ಮುರಳೀ ನಿನ್ನ ಕೊಳಲು ನುಡಿಯದಾಗಿದೆ ಸಪ್ತವರ್ಣ ಸಪ್ತಸ್ವರ ಮಿಡಿಯದಾಗಿದೆ ರಾಗನಂದನದಲೀ ಪಿಕವು ರೆಕ್ಕೆ ಮುರಿದು ಅಡಗಿದೆ ಭಾವತಂತಿ ಕಡಿದು ಹೋಗಿ ರಾಗ ಸೆಲೆಯು ಉಡುಗಿದೆ ತಂಪೆಲರಲಿ ಸಿಡಿಮದ್ದಿನ ಗಂಧಕವು ತುಂಬಿದೆ ತಣ್ಣೀರಲು ಕಣ್ಣೀರಿನ ಲಾವಾರಸ ...

ಮನುಷ್ಯರು ಏನನ್ನೋ ಕಂಡು ಹಿಡಿಯುತ್ತಾರೆ.  ಅದಕ್ಕಾಗಿ ಪ್ರಕೃತಿಯನ್ನು ಉಪಯೋಗಿಸುತ್ತಾರೆ.  ಈ ಎಲ್ಲಾ ಪ್ರಯತ್ನಗಳು ಮಾನವ ಕಲ್ಯಾಣಕ್ಕಾಗಿ ಎಂದೇ ಭಾವಿಸುತ್ತಾರೆ. ಇದರ ಪರಿಣಾಮವಾಗಿ ಇಂದು ಪೃಥ್ವಿ ಮಾಲಿನ್ಯಗೊಂಡಿದೆ.  ಮಾನವನ ಅಭಿವೃದ್ಧಿ ವಿಚಾರಗಳು ...

ರೋಮಾಂಚನ ! ನಿನ್ನ ನೆನಪೆಂಬ ಮಧುರ ಗಳಿಗೆ ಎನ್ನೆದೆಯ ನೋವಿಗೆ ಪರಿಹಾರದ ಸಿಹಿಗುಳಿಗೆ ಇವೆ ಇವೆ ನಿನ್ನೊಂದಿಗೆ ಕಳೆದ ಕ್ಷಣವೆಲ್ಲ ಜೀವಂಥ ನೆನಪಾಗಿ ಕಾಡುತಿಹೆಯಲ್ಲೆ ನನ್ನ ಸದಾ ದಾವಂತ ಯಾವೊಂದೆ ಆದರೂ ನೆನಪ ಸುರಳಿ ಬಿಚ್ಚಿ ಗುಂಪು ನಾನು ಸಾಕೆಂದರೂ ನ...

ಹಕ್ಕಿ ಬಳಗ ಮೇಲೇರುತ ಸಾಗಿದೆ ಹರುಷ-ಹರುಷ ಹೊತ್ತು ಮಣ್ಣಿನಣುಗ ತಾ ಸೋತು ಸೊರಗುತಿಹ ಬದುಕಲು ಪಡೆಯಲೊಂದು ತತ್ತು || ಜ್ಞಾನ ವಿಜ್ಞಾನದಾಗಸದೆತ್ತರ ಮಿಂಚು ಹುಳದ ಮಿಣುಕು ಬಾಳ ಬಾಂದಳಕೆ ತಿಂಗಳ ಬೆಳಕನು ಕೊಡ ಬಲದೆ, ಯಾವ ಕ್ಷಣಕುಽ || ಏರಿ-ಏರುತಲಿ ಹಾ...

ಬುದ್ಧಿ ಇಲ್ಲವೇ ನಿನಗೆ ನಿದ್ರೆಯೆಂಬೋ ನಿಜ ಹಾದರಗಿತ್ತಿ ? ||ಪ|| ಸಿದ್ಧ ಜ್ಞಾನದೊಳ್ ಇರುತ್ತಿರಲಾಕ್ಷಣ ಕದ್ದಡಗಿದೀಕಾಯದ ಮನೆಯೊಳು ಎದ್ದು ನೋಡಿದರೆ ಎಲ್ಲಿ ಪೋದಿಯೋ ? ||೧|| ಸೋಗ ಮಾಡಿ ನೀ ಹ್ಯಾಂಗಾರ ಬರತಿ ತೂಕಡಿಕಿಯೆಂಬಾಕಿ ನೀ ಬಲು ಗರತಿ ಬಾಗಿ...

ನಾನು ನೋಡಿದ ಬೇಸಗೆಯ ಅಪರಿಪೂರ್ಣ ಚಿತ್ರವಿದು: ಒಳರೋಗಿಗಳು ಇನ್ನೆಂದಿಗೂ ಹೊರಬರದಂತೆ ಕಾರಿಡಾರ್‌ನ ಕತ್ತಲ ಗುಹೆಯಲ್ಲಿ ಹೋದ ಬೇಸಗೆಯ ಹಗಲುಗಳನ್ನು ಕಾಣಲೆತ್ನಿಸುತ್ತಾ, ಎಣಿಸುತ್ತಾ ತಟಸ್ಥರಾಗಿ ಹೋಗಿದ್ದರು. ದಗಲ್ಬಾಜಿ ವೈದ್ಯನೊಬ್ಬ ಹೊಸದಾಗಿ ನೇಮಕಗ...

ನೀ ಬರುವೆಯೆಂದು ತಲ್ಲಣವೆ ಕ್ಷಣ ಕ್ಷಣ ಬರುವ ದಾರಿಯ ನೆನಪು ನವಪುಲಕದೂರಣ ನಿರೀಕ್ಷೆಯ ಮಹಾಪೂರ ನನ್ನ ಮೇಲೆ ಸುರಿದಂತೆ ಮನಸು ನಿರ್ವ್ಯಾಪಾರ ಮಾಡುವ ಸಂತೆಯಂತೆ ಇಲ್ಲೇ ನಿಜರೂಪದ ನೆನಪ ಬಿಸಿಲಗುದುರೆ ಕಾಣ್ವ ಕಾತರತೆಯಲ್ಲೆ ಕಾಣದಿಹ ನಶ್ವರತೆ ಕಾಯುವ ಹಿ...

ನಾನು ಹಕ್ಕಿ ಆದರೂಽನು ಹಾರಲಾರೆ ಇನ್ನುಽ ನಾಽನು || ಪುಕ್ಕ ಬಿಗಿದ ಕ್ರೂರಗಣ್ಣು ಯಾವ ಯುಗದ ಮಾಯೆಯೋ ಅತಂತ್ರ ತಂತ್ರ ಪಾರತಂತ್ರ್‍ಯದಲ್ಲಿ ಸ್ವತಂತ್ರ ಬರೀ ಛಾಯೆಯೋ || ಮೇಘ ಮುಗಿಲ ಮೇಲ್ಮೆ ಬಲ್ಮೆ ಸಾಲಲಿ ಶಂಕೆಯಲೆಯಲೆ ಭೀತಿಯು ಅನಿಲನಿಲದ ಕೊರಳ ರವದಲ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....