ಮನುಷ್ಯರು ಏನನ್ನೋ ಕಂಡು
ಹಿಡಿಯುತ್ತಾರೆ. ಅದಕ್ಕಾಗಿ ಪ್ರಕೃತಿಯನ್ನು
ಉಪಯೋಗಿಸುತ್ತಾರೆ. ಈ ಎಲ್ಲಾ ಪ್ರಯತ್ನಗಳು
ಮಾನವ ಕಲ್ಯಾಣಕ್ಕಾಗಿ ಎಂದೇ ಭಾವಿಸುತ್ತಾರೆ.
ಇದರ ಪರಿಣಾಮವಾಗಿ ಇಂದು ಪೃಥ್ವಿ
ಮಾಲಿನ್ಯಗೊಂಡಿದೆ. ಮಾನವನ ಅಭಿವೃದ್ಧಿ
ವಿಚಾರಗಳು ಗೊಂದಲಮಯವಾಗಿದೆ.
ಅಧ್ವಾನದ ಆಧುನಿಕ ದಿನಗಳಿಗೆ
ಆಹ್ವಾನವಿತ್ತಾಗಿದೆ.
ಈ ತೋಟದಲ್ಲಿ ನಾವು ಶ್ರಮ ರಹಿತ
ಕೃಷಿ ಮಾಡುತ್ತಿದ್ದೇವೆ ಪರಿಪೂರ್ಣವಾದ,
ಸ್ವಾದಯುಕ್ತ ಧಾನ್ಯಗಳನ್ನು ಮತ್ತು ಹಣ್ಣುಗಳನ್ನು
ತಿನ್ನುತ್ತೇವೆ. ಇದರಿಂದ ನಮ್ಮೆಲ್ಲ ಚಟುವಟಿಕೆಗಳ
ಹಿಂದಿರುವ ಜಗತ್ತಿನ ಹೃದಯಕ್ಕೆ ನಾವು
ಹತ್ತಿರವಾಗುತ್ತೇವೆ. ಬದುಕು
ಅರ್ಥಪೂರ್ಣವಾಗುವುದು. ಆತ್ಮತೃಪ್ತಿ
ದೊರೆಯುವದು. ಜೀವನ ಒಂದು ಕಾವ್ಯ.
*****
(ಮೂಲ- ಮಸನೊಬು ಫುಕವೊಕ)