Home / ಕಥೆ / ಸಣ್ಣ ಕಥೆ

ಸಣ್ಣ ಕಥೆ

ಮಹಾರಾಜ ದೊಡ್ಡವೀರಪ್ಪ ನ್ಯಾಯಪೀಠದಲ್ಲಿ ನ್ಯಾಯಾಧೀಶನಾಗಿ ಕೂತಿದ್ದ. ಯುವರಾಜ ಅಪ್ಪಾಜಿ ಅಪ್ಪನೆದುರು ಅಪರಾಧಿಯಾಗಿ ತಲೆತಗ್ಗಿಸಿ ನಿಂತಿದ್ದ. ಅಪ್ಪಾಜಿರಾಜನ ಮಗ ಚಿಕ್ಕವೀರಪ್ಪ ಅಪ್ಪನಿಗೆ ಆತುಕೊಂಡು ತಾಯಿಯ ಮರಣಕ್ಕೆ ಕಣ್ಣೀರು ಹಾಕುತ್ತಿದ್ದ. ತನ್ನ ಭ...

ಏಳು ಗಂಟೆಗಳ ದೀರ್ಘ ಪ್ರಯಾಣದಲ್ಲಿ ಸಾಕಷ್ಟು ಬಳಲಿ ಹೋಗಿದ್ದ ಮನೋಜನ ಮೈ ಮನಸ್ಸು ವಿಶ್ರಾಂತಿ ಬೇಡುತ್ತಿತ್ತು. ಬಸ್ಸಿಳಿದವನೇ ಹೊಟ್ಟೆಗೊಂದಷ್ಟು ಹಾಕಿಕೊಂಡೇ ರೂಮು ಸೇರಿದ. ಇಂದು ನಾಳೆ ಸಂಪೂರ್ಣ ವಿಶ್ರಾಂತಿ, ಆಫೀಸಿಗೆ ಹೋಗುವುದು ನಾಡಿದ್ದೆ ಎಂದು ತ...

ಓಡೋಡುತ್ತಲೇ ಬಂದರೂ ಬಸ್‌ಸ್ಟಾಪಿಗೆ ಬರುವಷ್ಟರಲ್ಲಿಯೇ ಬಸ್ಸು ಹೊರಟು ಬಿಟ್ಟಿತ್ತು. ಬಾಗಿಲಿನುದ್ದಕ್ಕೂ ನೇತಾಡುತ್ತಿದ್ದವರನ್ನು ಕಂಡೇ ಬಸ್ಸು ಹತ್ತುವ ಧೈರ್ಯ ಬರಲಿಲ್ಲ. ವಾಚು ನೋಡಿಕೊಂಡಳು. ಗಂಟೆ ಆಗಲೇ ೧೦ ತೋರಿಸುತ್ತಿತ್ತು. ಇನ್ನರ್ಧ ಗಂಟೆಯಲ್ಲ...

ಮನೋಜ್ ಇಂಡಿಯಾದಿಂದ ಬಂದಿದ್ದಾನೆ ಅಂತಾ ಗೊತ್ತಾದ ಕೂಡಲೆ ಅವನನ್ನು ನೋಡಲು ಆತುರದಿಂದ ಹೊರಟ ಸಾವಂತ, ಮನೋಜ್ ಇಂಡಿಯಾಕ್ಕೆ ಹೋಗಿ ತಿಂಗಳಾಗಿತ್ತು. ಗೆಳಯನಿಲ್ಲದೆ ಆ ಒಂದು ತಿಂಗಳು ಹೇಗೆ ಕಳೆದನೋ ತನ್ನೊಬ್ಬನನ್ನೇ ಬಿಟ್ಟು ತನ್ನವರನ್ನು ನೋಡಲು ಹೋಗಿದ್...

ರಾವೋ ರಾವು ಕೊರುಂಗು ರಾವಾಂದೇನ್ ದಾನ್‍ಪೇ ಪುಟ್ಟಣ್ಣನಿಗೆ ಈ ಕೊಕ್ಕರೆ ಹಾಡೆಂದರೆ ತುಂಬಾ ಇಷ್ಟ. ಅವನು ಆಗಾಗ ಗುನುಗುನಿಸುವ ಹಾಡದು. ಭತ್ತದ ಗದ್ದೆಯಲ್ಲಿ ನೇಜಿ ನೆಡುವಾಗ ಹೇಳುವ ಹಾಡನ್ನು ಶಾಲೆಯಲ್ಲೂ ಹೇಳುವುದು ಪುಟ್ಟಣ್ಣನ ಅಭ್ಯಾಸ. ಮೇಸ್ಟ್ರು ಒ...

ಆಫೀಸಿನಿಂದ ಮರಳಿ ಬಂದು ಸುಸ್ತಾಗಿ ರೂಮಿನಲ್ಲಿ ಮಂಚದ ಮೇಲೆ ಕುಳಿತು ಬೂಟುಗಳನ್ನು ಕಳಚಿ ಎದೆಯನ್ನು ಸೀಲಿಂಗ್ ಫ್ಯಾನಿಗೊಡ್ಡಿ ಸುಧಾರಿಸಿಕೊಳ್ಳುತ್ತಿದ್ದೆ. ನನ್ನಾಕೆ ಸೀತ ಕಾಫಿ ತಿಂಡಿಯೊಂದಿಗೆ ರೂಮಿಗೆ ಬಂದು ಸ್ಟೂಲಿನ ಮೇಲಿಟ್ಟು ಅಲ್ಲೇ ಇದ್ದ ಗೂಡಿ...

ಕಾದ ಹೆಂಚಿನ ಮೇಲೆ ಪೂರಕೆಯಿಂದ ಸವರುತ್ತಾ ಹಣೆ ಮೇಲಿನ ಬೆವರನ್ನು ಸೆರಗಿನಿಂದ ಒತ್ತಿಕೊಂಡ ಕೌಸಲ್ಯ ದೊಡ್ಡ ಪಾತ್ರೆಯಲ್ಲಿದ್ದ ಹಿಟ್ಟನ್ನು ಸವುಟಿನಿಂದೆತ್ತಿ ಹೆಂಚಿನ ಮೇಲೆ ಎರಡು ಮೂರು ಕಡೆ ಹಾಕಿದಳು. ಚುಂಯ್ ಎನ್ನುವ ಶಬ್ದ ಕಿವಿಗೆ ತುಂಬಿಕೂಳ್ಳುತ್...

ಕೊಡಗಿನಲ್ಲಿ ಹಾಲೇರಿ ಸಂಸ್ಥಾನವನ್ನು ಕಟ್ಟಿದ ವೀರಪ್ಪರಾಜನ ಮೊಮ್ಮಗ ಮೊದಲನೆ ಮುದ್ದುರಾಜನ ಕಾಲದ ಕತೆಯಿದು. ಮುದ್ದುರಾಜ ಸುಮಾರು ಐವತ್ತನಾಲ್ಕು ವರ್ಷಗಳ ಕಾಲ ಕೊಡಗನ್ನು ಆಳಿ ಅದನ್ನು ಕಾವೇರಿಯಿಂದ ಕುಮಾರಧಾರಾ ನದಿಯವರೆಗೆ ವಿಸ್ತರಿಸಿದ. ಅವನು ಬಲಿಷ...

ಸಾವಿನ ಬಗೆಗಿನ ಪ್ರಜ್ಞೆಯನ್ನು ನಾವು ಬೆಳೆಸಿಕೊಳ್ಳಲನುವಾಗುತ್ತಿದ್ದಂತೆ ಅದು ಸೂಚನೆಯನ್ನೂ ಕೊಡದೆ ನಮ್ಮನ್ನು ಆವರಿಸುತ್ತದೆ. ಪ್ರಜ್ಞಾಪೂರ್ವಕವಾಗಿ ಅದನ್ನು ಸಂಧಿಸುವಾಗಿನ ಯಮಯಾತನೆಯನ್ನು ನಾನು ಕಲ್ಪನೆಯಲ್ಲೂ ಊಹಿಸಲಾರೆ. ಕಮಲತ್ತೆ ಈಗಲೋ ಆಗಲೋ ಎನ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....