ಹತ್ತು ರೂ/ಗೆ ಹತ್ತು ಏಟು

ಐದು ವರ್ಷದ ಮಗು ದೊಡ್ಡ ಚೀಲದಲ್ಲಿ ಕೊತಂಬರಿ ಕಟ್ಟುಗಳನ್ನು ತುಂಬಿಕೊಂಡು ರಸ್ತೆಯಲ್ಲಿ ಹೋಗುತ್ತಾ ನನಗೆ ಕೊಂಡು ಕೊಳ್ಳಲು ಕೇಳಿತು. ಅವಳ ತೂಕಕ್ಕಿಂತಲೂ, ಹೆಚ್ಚು ತೂಕ ಅವಳ ಎತ್ತರಕ್ಕಿಂತಲೂ, ಹೆಚ್ಚು ಉದ್ದವಾದ ಚೀಲ ಹೊತ್ತಿದ್ದ ಮಗುವನ್ನು...

ಜೋಕಾಲಿ

ಅರುಣೋದಯ. ಚುಮು ಚುಮು ಬಿಸಿಲು ಬರುವ ಹೊತ್ತು. ಮನೆಯ ಅಂಗಳವನ್ನು ಗುಡಿಸಿ, ನೀರು ಚೆಲ್ಲಿ, ಚುಕ್ಕೆ ಎಣಿಸಿ ಇಟ್ಟು ರಂಗೋಲಿ ಎಳೆಯ ಧಾರೆಯನ್ನು ಬೆರಳುಗಳಿಂದ ಬಿಡುತ್ತಾ, ವೃದ್ದೆ ಬಾಯಲ್ಲಿ ದೇವರನಾಮ ಹೇಳುತ್ತಾಬಾಳನ್ನು ಪೂಜಿಸಿ ಸಾಧನೆಯಲ್ಲಿ...

ವಿರಹಿ

ಅವಳೊಬ್ಬ ವಿರಹಿ. ತನ್ನಿಂದ ದೂರಾದ ಪ್ರಿಯನ ನಿರೀಕ್ಷೆಯಲ್ಲಿ ಪಾರಿಜಾತ ಗಿಡದ ಕಟ್ಟೆಯಲ್ಲಿ ಕುಳಿತಿದ್ದಳು. ಅರಳಿದ ಪಾರಿಜಾತಗಳು ಒಂದೊಂದಾಗಿ ಬಿದ್ದು ಅವಳ ಕನಸಿನ ಗೋಪುರವನ್ನು ಅಲಂಕರಿಸುತ್ತಿತ್ತು. ಅವಳ ತಳಮಳಗೊಂಡ ಮನವು ಮಾತ್ರ ಕಣ್ಣಲ್ಲಿ ಅಶ್ರು ಹನಿಸುತಿತ್ತು....

ಹುಚ್ಚಿ

ಅವಳು ಮಲಗಿದೊಡನೆ ಅವಳಿಗೊಂದು ಕನಸು ಬೀಳುತಿತ್ತು. ಬೀದಿಯಲ್ಲಿ ಹೋಗುತಿದ್ದ ಇವಳನ್ನು ಎಲ್ಲರೂ "ಹುಚ್ಚಿ, ಹುಚ್ಚಿ" ಎಂದು ಅಪಹಾಸ್ಯ ಮಾಡುತ್ತಿದ್ದರು. ಅವಳಿಗೆ ಅಸಾಧ್ಯ ಕೋಪ ಬರುತ್ತಿತ್ತು. ಮನಸ್ಸು ಕದಡಿ ಹೋಗುತ್ತಿತ್ತು. ಬುದ್ಧಿ ಚುರುಕಾಗುತ್ತಿತ್ತು. ತರ್ಕ ಸವಾರಿಯಾಗುತ್ತಿತ್ತು....

ಸುಖದ ಮರೀಚಿಕೆ

ಸೃಷ್ಟಿಯಲ್ಲಿ ಎಲ್ಲರೂ ಸುಖವಾಗಿರುವರಾ ಎಂದು ಪರೀಕ್ಷಿಸಲು ದೇವರು ಬಂದ. ಕಡಲಿನಲ್ಲಿ ಈಜುತ್ತಿದ್ದ ಮೀನನ್ನು ಕೇಳಿದ- "ನೀನು ಸುಖವಾಗಿರುವೆಯಾ?" "ನನಗೆ ನೀರಿನಲ್ಲಿ ಬಾಳು ಹಾಯಾಗಿದೆ" ಎಂದಿತು. ಆಕಾಶದಲ್ಲಿ ಹಾರುವ ಹಕ್ಕಿಗೆ ಇದೇ ಪ್ರಶ್ನೆ ಮಾಡಿದ. "ನೀಲ...