ವರದರಾಜನ್ ಟಿ ಆರ್ ರವರು ಕಲಾವಿದರು, ಸಮಾಜ ಸೇವಕರು ಹಾಗೂ ಕನ್ನಡ, ಆಂಗ್ಲ ಮತ್ತು ಹಿಂದಿಯಲ್ಲಿ ಭಾಷೆಯಲ್ಲಿ ಬರೆಯುವವರಾಗಿದ್ದಾರೆ. ಇವರು ಹಲವು ಸಾಹಿತ್ಯ ಸಮ್ಮೇಳನಗಳು ಹಾಗೂ ಆಕಾಶವಾಣಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ನಾಟಕಕಾರರಾಗಿ ಹಲವಾರು ನಾಟಕಗಳನ್ನು ರಚಿಸಿದ್ದಾರೆ, ನಿರ್ಧೇಶಿಸಿದ್ದಾರೆ ಹಾಗೂ ನಟಿಸಿದ್ದಾರೆ. ಇವರ ಹಿಂದಿ ಕಾದಂಬರಿ "ಸಲ್ಮಾ"ಗೆ ೨೦೦೧ನೆಯ ರಾಷ್ಟ್ರ ಪ್ರಶಸ್ತಿ ದೊರಕಿದೆ.
ಮೊನ್ನೆ ಕಾಶಿಗೆ ಹೋಗಿದ್ದೆ ಗಂಗೆಯಲ್ಲೊಂದು ಮುಳುಗು ಹಾಕಿ ಕೋಪ ಬಿಟ್ಟು ಬಂದೆ! ಬಡವನ ದವಡೆಗೆ ಮೂಲವಾದ ಈ ಪ್ರಳಯಾಂತಕ ಕೋಪವನ್ನ ಇಟ್ಟುಕೊಳ್ಳುವುದಕ್ಕಿಂತ ಬಿಟ್ಟು ಬಿಡುವುದೇ ಮೇಲಲ್ಲವೇ ? ಅಷ್ಟೇ ಅಲ್ಲದೆ, ಕೋಪ ಬಿಡುವುದು ಅನಿವಾರ್‍ಯವೂ...
ಹೀಗಾಗಬಹುದೆಂದು ನಾನೆಣಿಸಿರಲಿಲ್ಲ ಕನಸಿನಲ್ಲಿಯೂ. ಒಡಹುಟ್ಟಿದ ತಂಗಿಯೆಂದು ಅನ್ನವಿಟ್ಟು ಆದರಿಸಿದೆ, ನಿನ್ನ ಉನ್ನತಿಯ ಬಯಸಿದೆ, ನಿಯತ್ತಿನಿಂದ ಶ್ರಮಿಸಿದೆ, ಮನಸಾರ ಹರಸಿದೆ. ನನ್ನ ಸೇವಕರಾದ ಕಲಾವಿದರನ್ನೂ, ತಂತ್ರಜ್ಞರನ್ನೂ ನಿನ್ನ ಸೇವೆಗೆ ನೇಮಿಸಿದೆ. ನನ್ನ ಆರಾಧಕನನ್ನೇ ನಿನ್ನನಾಧರಿಸಲು ಬೇಡಿದೆ....
ದೂರದ ಗೋವೆಯಿಂದ ವಧು ಬಂದಿತ್ತು ಪ್ರಥಮ ನೋಟದಲೆನ್ನ ಮನವ ಗೆದ್ದಿತ್ತು. ಕಣ್ಗಳೇ ಆಡಿದವು ನೂರಾರು ಮಾತು, ಆಳವಾಗಿ ಬೇರೂರಿತು ಪ್ರೇಮ, ಹೃದಯಗಳು ಬೆರೆತು. ಬಾಂಧವ್ಯಕೆ ಭಾಷೆಯ ಬಂಧನವಿಲ್ಲ ಹಲವು ಭಾಷೆಗಳಲ್ಲಿ ಹರಿಯಿತು ಪತ್ರ ಪ್ರವಾಹ...
ನನ್ನ ಪರಿಚಯ ಮಾಡಿಕೊಡುವೆ, ಸಹನೆ ಇದ್ದರೆ ಕೇಳಿ. ಕಾಲೇಜಿನಲ್ಲಿ ಕಲಿಯುತ್ತಿರುವ ಬಡ ವಿದ್ಯಾರ್ಥಿ ನಾನು. ಎಲೆಮರೆಯ ಕಾಯಿಯಂತೆ ಬದುಕ ಬಯಸುವೆ ನಾನು. ಕಾಲೇಜಲೆಲ್ಲೆಲ್ಲೂ ಎದ್ದುಕಾಣುವ, ಚರ್ಚೆ, ಸಮಾರಂಭ, ಸಮ್ಮೇಳನಗಳಲ್ಲಿ ಭಾಷಣ ಬಿಗಿಯುವ ವಾಗ್ಮಿ ನಾನಲ್ಲ....
ನಾಟಕ! ನಾಟಕ! ಇಂದು ಸಂಜೆ ನಾಟಕ ಸರ್ವರಿಗೂ ಸುಸ್ವಾಗತ ನೀವೆಲ್ಲರೂ ಬಂದು ನೋಡಿ ಅತ್ಯಂತ ಮನೋಹರ ಸಹಜ ನಾಟಕ ಯಾವ ಆಡಂಬರವಿಲ್ಲ ನಿಯೋಜಿತ ಸ್ಥಳವಿಲ್ಲ ಬಹಳ ನೈಜ ನಾಟಕ. ಎಷ್ಟು ನೈಜತೆಯೆಂದು ತಿಳಿಯ ಬಯಸುವಿರೇನು?...
ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿ ನಾನು ಯಾವುದೋ ಒಂದು ತರಗತಿಯಲ್ಲಿ ಓದುತ್ತಿದ್ದೇನೆ. ಅಲ್ಲ ಅಲ್ಲ ಯಾವುದೋ ಒಂದು ತರಗತಿಯಲ್ಲಿ ಇದ್ದೇನೆ. ಅದೂ ಅಲ್ಲ ಯಾವುದೋ ಒಂದು ತರಗತಿಯಲ್ಲಿ ನನ್ನ ಹೆಸರಿದೆ. ತರಗತಿಗೆ ಹೋಗಲು ನನಗೆಲ್ಲಿ ಸಮಯ?...