Home / Vijaya Vilasa

Browsing Tag: Vijaya Vilasa

ಈಕಡೆ ವೇದವತೀ ನಗರದಲ್ಲಿ ಕಾರಾಗೃಹದಲ್ಲಿದ್ದ ಶೀಲವತೀ ದೇವಿಗೆ ವಿಜಯನ ಪ್ರತಿಜ್ಞೆ ಮತ್ತು ಪ್ರಯಾಣಗಳ ವಿಚಾರವು ಕಾವಲುಗಾರರಿಂದ ತಿಳಿದಿತ್ತು. ಆಕೆಯು, ತನ್ನ ಸುಕುಮಾರನು ಕ್ಷಿಪ್ರದಲ್ಲಿ ವಿಜಯಶಾಲಿಯಾಗಿ ಬಂದು ಸತ್ಯಧರ್ಮಗಳನ್ನು ಆರಿಸಿ ತನ್ನನ್ನು ಮೃ...

ಇತ್ತ ರತ್ನಾವತಿಯ ಅರಮನೆಯಲ್ಲಿ ಮಾರನೆಯ ದಿನ ಅಗ್ನಿಶಿಖ ರಾಕ್ಷಸೇಂದ್ರನು ತನ್ನ ಪತ್ರದಂತೆ ಈವರೆಗೆ ವೀರಭೈರವನು ವಿಜಯನನ್ನು ದುರ್ಗಿಗೆ ಬಲಿಗೊಟ್ಟೇ ಇರುವನೆಂಬ ದೃಢವಾದ ನಂಬಿಕೆಯಿಂದ ಶತ್ರು ನಿವಾರಣೆಯಾಯಿತೆಂದು ತನ್ನಲ್ಲಿ ತಾನು ಸಂತೋಷಪಟ್ಟು ಕೊಂಡಿ...

ಈವರೆಗೆ ಅನೇಕ ಯಕ್ಷಿಣೀ ಮಾಯಾ ಮಂತ್ರ ತಂತ್ರಗಳನ್ನು ಗ್ರಹಿಸಿಕೊಂಡಿದ್ದ ವಿಜಯನು, ದೇವರು ತನ್ನನ್ನು ಕೈಬಿಡದೆ ಕಾಪಾಡುವನೆಂಬ ಧೈರ್ಯದಿಂದ ಹೊರಟು, ಸರೋಜಿನಿಯ ಮನೆಗೆ ಬಂದು, ನಡೆದ ಸಂಗತಿಯನ್ನಾಕೆಗೆ ತಿಳಿಸಿ, ತನ್ನ ಮಾಯಾತುರಗವನ್ನೇರಿ ದುರ್ಗಾವತಿಯನ...

ಪಕ್ಕೆಯಲ್ಲಿ ಚುಚ್ಚಿಕೊಂಡಿದ್ದ ರತ್ನ ಬಾಣವನ್ನು ತೆಗೆಯಲು ಬಾರದೆ ಬಹಳವಾದ ನೋವಿನಿಂದ ಹಾಸುಗೆ ಹತ್ತಿ ಮಲಗಿದ್ದ ಅಗ್ನಿಶಿಖ ರಾಕ್ಷಸೇಂದ್ರನಿಗೆ ಅರಮನೆಯ ವೈದ್ಯನಾದ ಚರಕಾಚಾರ್‍ಯನು ಚಿಕಿತ್ಸೆ ಮಾಡುತ್ತಿದ್ದನು. ಪುತ್ರಿಯಾದ ಚಂದ್ರಲೇಖೆಯು ಯಾವಾಗಲೂ ತ...

ಇತ್ತಲಾ ವಿಜಯನು ರತ್ನ ಬಾಣದೊಡನೆ ಹಾರಿಹೋದ ಹದ್ದನ್ನು ಹುಡುಕಿಕೊಂಡು ಹೊರಟು, ಅದರ ಮೈಯಿಂದ ತೊಟ್ಟಿಕ್ಕಿದ್ದ ರಕ್ತದ ಗುರುತುಗಳನ್ನು ಅನುಸರಿಸಿ ಅದು ಹೋದ ಮಾರ್ಗವನ್ನು ಹಿಡಿದು ಬಹು ದೂರ ಹೋದನು. ಆದರೂ ಹದ್ದಿನ ನೆಲೆಯು ಮಾತ್ರ ತಿಳಿಯಲೇ ಇಲ್ಲ. ಹೀಗ...

ಬೆಳಗಾಯಿತು. ದಿನರಾಜನಾದ ಪ್ರಭಾಕರನು ತನ್ನ ಸಹಸ್ರಕಿರಣಗಳಿಂದ ಲೋಕಕ್ಕೆ ಆನಂದವನ್ನುಂಟುಮಾಡಿ ದಿಕ್ತಟಗಳನ್ನು ಬೆಳಗಲಾರಂಭಿಸಿದನು. ಜಯಶಾಲಿಯಾಗಿ ರತ್ನ ಬಾಣವನ್ನು ಪಡೆಯಬೇಕೆಂಬ ಕುತೂಹಲದಿಂದಿದ್ದ ವಿಜಯನು ಎದ್ದು ಎಂದಿನಂತೆ ತಾಯಿಯಂತಃಪುರಕ್ಕೆ ಬಂದು ...

ಇತ್ತಲಾ ವೇದವತೀ ನಗರದಲ್ಲಿ ರಾಜನು ತಪಸ್ಸಿಗೆ ಹೋದುದು ಮೊದಲಾಗಿ ಪರಮ ಪತಿವ್ರತೆಯಾದ ಶೀಲವತಿಯು ತನ್ನ ಪತಿಗೆ ಯಾವಾಗಲೂ ಶುಭವನ್ನೇ ಬಯಸುತ್ತ, ಆತನು ಯತ್ನಿಸಿದ್ದ ಕಾರ್ಯದಲ್ಲಿ ಜಯಶಾಲಿಯಾಗಿ ಇರುವಂತೆ ಅನುಗ್ರಹಿಸಲು ತ್ರಿಕಾಲದಲ್ಲಿಯೂ ಸರ್ವಮಂಗಳೆಯನ್...

ವಿಜಯದಶಮಿ; ಲೋಕವೆಲ್ಲವೂ ಸಂತೋಷದಿಂದ ಕಲಿಯುವ ಶುಭ ದಿವಸ. ಬೆಳಗಾಯಿತು; ತಂಗಾಳಿಯು ಮನೋಹರವಾಗಿ ಬೀಸುತ್ತಿತ್ತು; ದಿಕ್ಕುಗಳು ಕಳೆಯೇರಿದುವು, ಪಕ್ಷಿಗಳು ಮಧುರವಾಗಿ ಗಾನವಾಡಲಾರಂಭಿಸಿದವು, ಪೂರ್ವದಿಕ್ಕಾಮಿನಿಯು ಹಣೆಯಲ್ಲಿಟ್ಟ ಕುಂಕುಮದ ಬೊಟ್ಟಿನಂತೆ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....