ಮುಕ್ತಿ ಮಂತ್ರ

ಗಟ್ಟಿಯಾಗದೇ ಬದುಕು ದಕ್ಕದುನ್ನು ಕೆರೆ ಬಾವಿಗಳ ಪಾಲು ಆಗದಿರು ಹಗ್ಗದ ಉರುಳಿಗೆ ನಿನ್ನ ಕೊರಳ ನೀಡದೇ ಸುತ್ತಲೂ ಕಟ್ಟಿದ ಉಕ್ಕಿನ ಗೋಡೆ ಬೆಂಕಿಯ ಜ್ವಾಲೆಗೆ ದೂಡುವ ಕೈಗಳನ್ನು ಕತ್ತರಿಸಲು ಝಳಪಿಸುವ ಖಡ್ಗವಾಗು. ಶತ್ರುಗಳ ಸೆಣಸಿ...

ಸೂರುಕೊಡಿ

ಕಲ್ಲು ದೇವರಿಗೆಂದು ಗುಡಿ ಗುಂಡಾರಗಳ ಕಟ್ಟಿಸುವವರೇ ಕೊರೆವ ಚಳಿ, ಮಳೆ, ಬಿರಗಾಳಿಗೆ ಗುಡುಗು ಸಿಡಿಲು ಮಿಂಚಿಗೆ ಬರಿಮೈಯನ್ನೊಪ್ಪಿಸಿ, ಗಡಗಡನೆ ನಡುಗುವ ನಿಮ್ಮವರ ತಲೆಯ ಮೇಲೊಂದು ಸೂರುಕಟ್ಟಿಸಿ ಕೊಡಿ. *****

ಅವಕಾಶ ಕೊಡಿ

ಹರಿಯುವ ನೀರಿಗೆ ಅಡ್ಡಗಟ್ಟಿ ಅಣೆಕಟ್ಟು ಕಟ್ಟಿ ತಡೆಯಬೇಡಿ, ನಾಲ್ಕು ಗೋಡೆಗಳ ಮಧ್ಯೆ ಖೈದು ಮಾಡದೇ ಅದಕೆ ಸ್ವಚ್ಛಂದ ಹರಿಯಲು ಬಿಡಿ. ಕತ್ತಲೆಯ ಕೋಣೆಯಲಿ ಬಂದಿಯಾಗಿಸದೇ ಸೂರ್ಯನ ಜಗದ ತುಂಬ ಬೆಳಗಲು ಅವಕಾಶ ಮಾಡಿ ಕೊಡಿ....

ತಿರಂಗಾ ಧ್ವಜ

ಬೇಲಿಯೇ ಇಲ್ಲದ ಸೂರ್ಯ ಮುಳುಗದ ದೇಶ ವೀರ ಜನತೆಯ ರಕ್ತ ಕೆಂಪಾದ ಜಲಿಯನ್‌ವಾಲಾ, ಆ ರಕ್ತದ ಮೇಲೆ ಬೆಳೆದ ಹಸಿರು ಮರದ ಟೊಂಗೆ ಟೊಂಗೆಯಲಿ ತಿರಂಗಾಧ್ವಜ ನೆಟ್ಟು ಗೂಟ ಕಟ್ಟಿ, ಗಳ ಹಿಡಿದು ಗೋಣು...

ಸ್ವಾತಂತ್ರ್ಯಕ್ಕೆ ೫೦ ತುಂಬಿದಾಗ

ಸ್ವಾತಂತ್ರ್ಯ ನಿನಗೀಗ ಐವತ್ತು ನೀನು ಬಂದು ಹತ್ತು ವರ್ಷಗಳಿಗೆ ನನ್ನ ಹುಟ್ಟು ತುಂಬಿದೆ ನನಗೀಗ ನಲವತ್ತು ನೀನು ಅರ್ಧರಾತ್ರಿಯಲಿ ಕತ್ತಲೆಯನ್ನು ಸೀಳುತ್ತಾ ಸೂರ್ಯನಂತೆ ಬಂದೆಯಂತೆ, ನನಗದು ಗೊತ್ತಾಗಲೇಯಿಲ್ಲ. ಏಕೆಂದರೆ ನಾನಾಗ ಹುಟ್ಟಿರಲೇ ಇಲ್ಲ. *****

ಚೋಮನ ದುಡಿಮೆ

ದಿನವೆಲ್ಲ ದನದಂತೆ ಬುಟ್ಟಿಗಳ ಹೆಣೆದು, ಧನವಿಲ್ಲದೆ ಬರಿಗೈಲಿ ಬಂದೆಯಾ ಚೋಮ? ಬಿತ್ತಲು ಭೂಮಿಯಿಲ್ಲ - ಮಲಗಲು ಮನೆಯಿಲ್ಲ ಕಷ್ಟ ಪಟ್ಟು ದುಡಿದರೂ ನಿನಗೆ ದಕ್ಕುತ್ತಿಲ್ಲ ಒಪ್ಪತ್ತಿನ ಕೂಳು. ಉಸ್ಸೆಂದು ಕೂತು ಬರಿಗೈಯನ್ನು ನೋಡಿ ಹಣೆ...

ಧರೆಯ ಮೇಲೆ

ದಿನದಿನಕ್ಕೂ ಹೆಮ್ಮರವಾಗಿ ಬೆಳೆಯುತ್ತಿರುವ ನೋವುಗಳು, ಗೋಜಲುಗೋಜಲಾಗಿ ಸ್ಪಷ್ಟತೆಯಿಲ್ಲದೆ ತಡಕಾಡುವ ಸಾವಿರಾರು ಸಮಸ್ಯೆಗಳು, ಜರ್ಜರಿತವಾಗಿ ಹತಾಶವಾಗಿರುವ ಸುಂದರ ಕನಸುಗಳು, ಅರಳಿ ಘಮಘಮಿಸಿ ನಳನಳಿಸಲಾಗದೇ ಬತ್ತಿ ಹೋಗುತ್ತಿರುವ ಮೊಗ್ಗು ಮಲ್ಲಿಗೆಗಳು, ಹರಡಿ ಹ೦ದರವಾಗಿ ಹಸಿರುಟ್ಟು ನಲಿದು ತಂಪನೀಯಲಾಗದೇ...

ಹಡೆದವ್ವನಿಗೆ ಕೇಳಿಸುವುದೇನೆ?

ನಾನವನ ಅರ್ಧಾಂಗಿ, ಅವನ ಯಾವ ಅಂಗದ ಮೇಲೆ ನನಗೆ ಅಧಿಕಾರವಿದೆ ಹೇಳು? ನನ್ನ ನಗು, ಅಳುವಿನ ಮೇಲೆಯೂ ಅವನದೇ ಅಧಿಕಾರ, ಅಷ್ಟೇ ಏಕೆ? ಅವನ ಒಪ್ಪಿಗೆ ಪಡೆದೇ ನಾನು ಫಲ ಧರಿಸಬೇಕು, ಭ್ರೂಣ ಹೆಣ್ಣಾಗಿದ್ದರೆ...