ಉಡುಗಿದಾರೋಗ್ಯಕ್ಕೆ ಕೊಂಡ ಸಾವಯವದನ್ನ ಸಾಕೇ?

ಹುಡುಕಾಟ ಜೋರಿಂದು ಸಾವಯವದನ್ನ ಕೊಂಡುಂಬ ತವಕ ಸಡಿಲಾದ ಸೂರಿಂಗೆ ಮೂಂಡು ಕೊಟ್ಟುಳಿಸುವಾತಂಕ ಬಡ ಹಳ್ಳಿ ಗೂಟವದೆಂತು ತಾಳೀತು ಶಹರದ ತೂಕ ಹುಡುಕಿ ಕೊಳ್ಳುವುದಲ್ಲ ಹಗುರ ಹಳ್ಳಿಯೊಳಿದ್ದು ನಡು ಬಳುಕಿ ಪಡೆದರದು ಸಾವಯವ ಪಾಕ -...

ಎಂತುಳಿಸುವುದೋ? ರೈತಾತ್ಮ ಶಕ್ತಿಯನು

ಅಂತು ಪೇಳುವೊಡೆಲ್ಲ ಪೇಟೆಗೆ ಬಂದು ಕುಂತೋದಿದನುಭವಕೆ ಮನ್ನಣೆ ತಂದು ಒಂದುದ್ಯೋಗ ಭಿಕ್ಷೆಯ ಪಡೆದವರಿಂದು ಸಂಭ್ರಮಿಸುತಿಹುದನು ಕಂಡ ರೈತನಿನ್ನೆಂತು ಭಂಗ ಪಟ್ಟುಂಬನ್ನದೊಳು ಸುಖವ ಕಾಂಬುದೋ? - ವಿಜ್ಞಾನೇಶ್ವರಾ *****

ತಾಳವೆನುವಾ ತರುಲತೆಗಳನೊಂಟಿ ಮಾಡುವುದ್ಯಾಕೋ?

ತಲೆಮಾರಿನಂತರವ ತಾಳದೆಲೆ ತಾನು ತಾನೆನುತ ತಲೆಗೊಂದು ಸೂರೆಳೆವ ಮನುಜ ತಾ ಸಹಬಾಳ್ವೆ ತೊರೆದೊಡಂ ಕೇಡಿಲ್ಲವಾದೊಡೆಲ್ಲ ಜೊತೆಯಾಗಿರ್‍ದೊಡದು ತಮ್ಮ ಹಿತವೆನುವ ಸಸ್ಯಗಳನೀ ಪರಿ ಬೇರ್ಪಡಿಸು ತಲದನು ತಬ್ಬಲಿ ಮಾಡಿರಲೆಲ್ಲ ಕೃಷಿ ಕೆಟ್ಟಿಹುದು - ವಿಜ್ಞಾನೇಶ್ವರಾ *****

ಹೊರೆವ ಹೊಟ್ಟೆ ಮೆರೆವಂತೆ ತಿನ್ನಿಸುವ ಸಕ್ಕರೆಗೀಪರಿ ಕೃಷಿ ಬೇಕೇ?

ಬರವೆಂದೊಂದು ಬಾವಿಯ ಮಾಡಿ ಬೇಡ ದಿರೆ ಬೇಕುಗೊಳಿಪ ಕಬ್ಬನು ಹೂಡಿ ಮತ್ತೆ ಬರವೆಂದೆನುತ ಬೋರನು ಮಾಡಿ ಮಳೆ ನೀರಿಂಗಿಸಲಿನ್ನಷ್ಟು ರೊಕ್ಕವ ಹೂಡಿ ಮೂಲಾ ಧಾರ ಋತುಚಕ್ರಗತಿ ಕೆಟ್ಟಿರಲಾರು ಕಾಯುವರೋ - ವಿಜ್ಞಾನೇಶ್ವರಾ *****

ಇಂತೆಲ್ಲ ಕುಂತುಣ್ಣಲೆಂತೀ ಯಂತ್ರ ಹಸಿವಿಂಗುವುದೋ?

ಎಂತು ನೋಡಿದೊಡಂ ಅಂದಿದ್ದೊಂದು ಹೊಟ್ಟೆ ಹಸಿವಡಗಿಸಲು ಬಂದಾ ರಸಗೊಬ್ಬರದವಾಂತರವು ಭೀಕರವಲಾ ಒಂದರಾ ಮೇಲೊಂದು ನೂರೊಂದು ಹಸಿವೆಗಳು ಸಾಲು ಸಾಲು ಬಂಧನದೊಳೊಂದೆಡೆಗೆ ಆಂ ಎನುವ ಸಾಕು ಪ್ರಾಣಿಗಳಳಲು ಯಂತ್ರ ತಂತ್ರ ಸಿಬ್ಬಂದಿಗಳಿನ್ನೊಂದೆಡೆಗೆ ಬೇಕು ಬೇಕೆನಲು -...

ವೇಷ ಭಾಷೆಯೊಳಷ್ಟೇ ಅಕ್ಷರದಚ್ಚೊತ್ತಿದರೆ ಸಾಕೇ?

ಕೃಷಿಯೊಳೊಲವಿಲ್ಲ ಕೃಷಿಯ ನಾನರಿಯೆನೆನುವ ವಿಷಯವಿದೊಂದು ತರಹದಾತ್ಮಹತ್ಯೆಯಲಾ ಖುಷಿಯೊಳೆಮ್ಮ ದೇಹವನು ಉಣಿವನಿವಾರ್‍ಯ ದಶನಕ್ಕೆ ಬಳಸದಾತ್ಮದೂನತೆ ಹೀನವಲಾ ಕಾಸಿನಾಣತಿಗಿಂತು ಮಣಿವಾತ್ಮ ದೀನವಲಾ - ವಿಜ್ಞಾನೇಶ್ವರಾ *****

ತನ್ನೆಲೆಯ ಕಳೆದೇನು ವನವೋ? ಜೀವನವೋ?

ಏನಿದೇನಿದಕಟಾ ನಾವಿರ್ಪಲ್ಲೆ ಇರುತಿದ್ದೆಮ್ಮ ಬೇಕುಗಳೆಲ್ಲ ವನು ಕೊಂದಾಯ್ತು ನೀರನ್ನಗಳನು ತಿಂದಾಯ್ತು ಇನ್ನುಳಿದಿಹುದೊಂದೆ ಗಾಳಿಯದರಂತರುಷ್ಣತೆ ಯನೇರಿಸಿರಲದಕು ಅಭಾವ ಬಂದಾಯ್ತು ಇನ್ನೇನಿದ್ದೊಡಂ ಇರುನೆಲೆಯ ಕೃಷಿಯೊಂದ ಬದುಕಿಗಾಧಾರ - ವಿಜ್ಞಾನೇಶ್ವರಾ *****

ಹಳ್ಳಿ ಬೆಳೆಯದೆ ಹಾಳು ವಿಷ ಕಳೆವುದೆಂತು?

ಪೇಳ್ವಂತೆ ಮಾಡುವಾ ನಿರವಯವ ಕೃಷಿ ಯಾಳಿಂದ ಪೇಳ್ದುದರಲಷ್ಟಿಷ್ಟು ಮಾಡುವಾ ಸುಳ್ಳು ಸಾವಯವ ಕೃಷಿಯೊಳು ಮೇಲು ಸುಳ್ಳನೇ ದಿಟವೆಂದು ಸಾಧಿಸುವ ಪೇಟೆ ಬಾಳಿಂದ ಹಳ್ಳಿ ಕೃಷಿ ನಿರವಯವವಾದೊಡಂ ಮೇಲು - ವಿಜ್ಞಾನೇಶ್ವರಾ *****

ಕಾಸಿನಾಸೆ ತೋರಿಸಿ ಬಡವಾದ ಕೃಷಿಯನುಳಿಸಲುಂಟೇ?

ರಸಗೊಬ್ಬರವನೆರಚಿ ಇಳುವರಿಯನಧಿಕ ಗೊ ಳಿಸುವವೊಲ್ ಸಾಲ ಸಬ್ಸಿಡಿ ಯೋಜನೆಗಳಾಸೆ ತೋ ರಿಸಿ ರೈತರುತ್ಸಾಹವುಳಿಸುವುಪಾಯ ಇನ್ನೆಷ್ಟು ದಿನವೋ? ಕಸುವಿಲ್ಲ ಭುವಿಯಲ್ಲಿ ಜಸವಿಲ್ಲ ರೈತನಲಿ ವಿಷವೆಲ್ಲ ಮನಸಿನಲಿ ರಸ ಸೃಷ್ಟಿಯದೆಂತೋ -ವಿಜ್ಞಾನೇಶ್ವರಾ *****

ಸತ್ತು ಹುಟ್ಟುವ (ಹುಟ್ಟಲು) ಸಾವಯವಕ್ಕೆಷ್ಟು ಕಾಲ ಬೇಕು ಗೊತ್ತಾ?

ಸಾವಯವ ಕೃಷಿಯೆಂದರದೊಂದು ಸಂಸ್ಕೃತಿ ಕಾಣಾ ಸಂತೆಯೊಳಂತೆ ಕೊಂಡು ತಿನ್ನುವುದಲ್ಲ ಕೇಳಿ ಮಾಡುವುದಲ್ಲ ಸಾನುರಾಗದಿ ಸಸ್ಯ ಸಂಚಯ ಕಳಿತೊಂದಿಂಚು ಮೇಲ್ಮಣ್ಣಾಗೆ ಸಹಸ್ರ ಮಾನವೆ ಬೇಕಿಂತೊಂದು ಸಂಸ್ಕೃತಿಯು ರೂಪುಗೊಳ್ಳಲಿಕೆ ಸರಸ ಸಮರ ಸಮರಸದ ಸ್ವಾನುಭವ ಸಾವಯವ -...