Home / Kannada Novels

Browsing Tag: Kannada Novels

ವಿಲೀನನಾದನು ವೇಣುನಾದದಲಿ ಭೀಷ್ಮ ಇದು ಅವಳೇ ಇರಬಹುದೆ? ಹಾಗೆ ಅಂದು ನನ್ನೆದುರು ನಿಂತು ಮೊದಲ ಬಾರಿಗೆ ನನ್ನನ್ನು ಏಕವಚನದಲ್ಲಿ ಕರೆದು ಪ್ರತಿಜ್ಞೆಯಂತಹ ಮಾತುಗಳನ್ನಾಡಿ ಧಗಧಗನೆ ಉರಿಯುತ್ತಿದ್ದ ಚಿತೆಯನ್ನು ಪ್ರವೇಶಿಸಿದಳಲ್ಲಾ, ಆ ಅಂಬೆಯೇ ಹೀಗೆ ಶಿ...

ಅಗ್ನಿಗಾಹುತಿಯಾಯ್ತು ಸಕಲವು ಅಂಬೆ ಬ್ರಾಹ್ಮೀ ಮುಹೂರ್‍ತದಲ್ಲಿ ಮಧುಭಾಷಿಣಿ ‘ಅಂಬೆ, ಅಂಬೆ’ ಎಂದು ನನ್ನ ಮೈ ಕುಲುಕಿಸಿದಾಗ ನನಗೆ ಎಚ್ಚರವಾಯಿತು. ನಾನು ಎಲ್ಲಿದ್ದೇನೆಂದು ತಿಳಿಯಲು ಸ್ವಲ್ಪ ಹೊತ್ತು ಬೇಕಾಯಿತು. ಇಂದು ನನ್ನ ಜೀವನದ ಅತ್ಯಂತ ನಿರ್ಣಾಯ...

ಅಸ್ತಮಿಸಿದನು ಕರ್ಣ ದಿನಮಣಿ ಸೂರ್ಯಾಸ್ತಮಾನವಾಗುತ್ತಿದ್ದಂತೆ ಇದ್ದಕ್ಕಿದ್ದಂತೆ ಯುದ್ಧರಂಗದಿಂದ ಆವರೆಗೆ ಕೇಳಿಬರುತ್ತಿದ್ದ ಕದನ ಕರ್ಕಶ ಸದ್ದು ಅಡಗಿತು. ಭೀಷ್ಮರಿಗದು ಅಸಹನೀಯ ಮತ್ತು ವಿಪತ್ತಿನ ಸೂಚನೆಯಂತೆ ಭಾಸವಾಗತೊಡಗಿತು. ಏನು ವಿಪತ್ತು ಸಂಭವಿ...

ಮಿಳಿತವಾದುದು ಪ್ರೇಮ ನಯನದಲಿ ಗಿರಿನಾಯಕ ತೋರಿಸಿಕೊಟ್ಟದ್ದು ಪರಶುರಾಮರನ್ನು. ಬದುಕಿರುವಾಗಲೇ ಕತೆಯಾದವರು ಅವರು. ಅಂಬೆ ಎಳವೆಯವಳಾಗಿದ್ದಾಗ ಅವಳ ಅಪ್ಪ ಪರಶುರಾಮರ ಕತೆಗಳನ್ನು ಎಷ್ಟೋ ಬಾರಿ ಹೇಳಿದ್ದುಂಟು. ಅಪ್ಪ ಅವರನ್ನು ಕ್ಷತ್ರಿಯ ದ್ವೇಷಿ ಎಂದು ...

ರೋಷದಲಿ ಕುದಿದನು ರುಧಿರವ ಶಲ್ಯ ಭೂಪತಿಯನ್ನು ಕರ್ಣ ಸಾರಥ್ಯ ವಹಿಸುವಂತೆ ಒಡಂಬಡಿಸಲು ತನ್ನಿಂದ ಸಾಧ್ಯವಾದುದಕ್ಕೆ ಭೀಷ್ಮರಿಗೆ ಅಮಿತಾನಂದವಾಗಿತ್ತು. ಎದೆಯ ನೋವು ಮರೆತು ಹೋಗಿ ರಾತ್ರಿ ಚೆನ್ನಾಗಿ ನಿದ್ದೆ ಬಂದಿತ್ತು. ಯುದ್ಧ ಹದಿನೇಳನೆಯ ದಿನವನ್ನು ...

ಸುಖದ ಕ್ಷಣವದು ಎಷ್ಟು ನಶ್ವರ? ಗಿರಿನಾಯಕನ ಮನೆಯ ಮಹಡಿಯಲ್ಲೊಂದು ವಿಶಾಲ ಕೊಠಡಿಯಿತ್ತು. ಅದನ್ನೇ ಅಂಬೆಗೆಂದು ಬಿಟ್ಟುಕೊಡಲಾಯಿತು. ಅದರಲ್ಲಿ ಎದುರು ಬದುರಾದ ಎರಡು ದೊಡ್ಡ ಕಿಟಕಿಗಳಿದ್ದವು. ಪೂರ್ವದ ಕಡೆಯ ಕಿಟಕಿಯಿಂದ ನೋಡಿದರೆ ದಟ್ಟವಾದ ಕಾಡು, ಪೊ...

ಮನವನೋದಿಕೋ ತಾತ ದ್ರೋಣಾಚಾರ್ಯರ ದೇಹಾಂತ್ಯದ ಬಳಿಕ ಇನ್ನು ಬದುಕುಳಿದು ಮಾಡುವುದೇನು ಎಂಬ ಭಾವ ಭೀಷ್ಮರನ್ನು ಕಾಡತೊಡಗಿತು. ದ್ರೋಣಾಚಾರ್ಯರನ್ನು ಹಾಗೆ ವಧಿಸಬೇಕಾದ ಪ್ರಮೇಯವಿರಲಿಲ್ಲ. ಹೆಬ್ಬೆರೆಳು ಕಳಕೊಂಡ ವಯೋವೃದ್ಧ ಗುರುವನ್ನು ಕೊಲ್ಲಲು ಯುಧಿಷ್ಠ...

ಕುವರಿ ಮಿಂದಳು ನೈಜ ಪ್ರೀತಿಯಲಿ ಸರೋವರದ ಬಲಪಾರ್‍ಶ್ವದಲ್ಲೊಂದು ಪುಟ್ಟ ಗುಡ್ಡ. ಅದರಲ್ಲಿ ಅಲ್ಲಲ್ಲಿ ಗುಡಿಸಲುಗಳನ್ನು ಕಂಡ ಅಂಬೆಗೆ ತೀವ್ರ ನಿರಾಶೆಯಾಯಿತು. ಋಷ್ಯಾಶ್ರಮವಿರಬಹುದೆಂದು ಭಾವಿಸಿ ಬಂದವಳಿಗೆ ಚಿತ್ರವಿಚಿತ್ರ ವೇಷಭೂಷಣಗಳ ಜನರು ಕಾಣಿಸಿದ...

ಅನೃತದಿ ಛೇದಿಸಿದ ಕೊರಳನು ಹೆಜ್ಜೆಯ ಸಪ್ಪಳ ಕೇಳಿ ಭೀಷ್ಮರು ಕಣ್ತೆರೆದರು. ಕಳೆದ ರಾತ್ರಿ ಸರಿಯಾಗಿ ನಿದ್ದೆ ಇಲ್ಲದೆ ಇಂದು ಇಡೀ ದಿನ ಅವರು ಆಗಾಗ ಮಂಪಿನಲ್ಲಿದ್ದರು. ಹಗಲು ನಿದ್ದೆ ಮಾಡಿದರೆ ರಾತ್ರಿಯನ್ನು ಕಳೆಯುವುದು ಹೇಗೆಂಬ ಆತಂಕದಿಂದ ಅವರು ಗಾಢ...

ಎಲ್ಲಿ ದೊರಕೀತು ಸುಖವು? ಅಂಬೆ ವಿಹ್ವಲಳಾಗಿದ್ದಳು. ಇನ್ನು ಹೋಗುವುದು ಎಲ್ಲಿಗೆ ಎಂದವಳಿಗೆ ತೋಚುತ್ತಲೇ ಇರಲಿಲ್ಲ. ಕಾಶಿಯಿಂದ ಹಸ್ತಿನಾವತಿಯ ರಥವೇರಿ ಬಂದವಳು ಅವಿವಾಹಿತೆಯಾಗಿ ಕಾಶಿಗೆ ಹೋಗಬಾರದು. ಹಸ್ತಿನಾವತಿಗೆ ಹಿಂದಿರುಗಿ ಭೀಷ್ಮರೆದುರು ನಿಂತು...

1...34567

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...