ಕೇಳಿಸದೆ ನಿಮಗೂ ಅಃತಪುರದ ಪಿಸುದನಿ

ಬಣ್ಣಗೆಟ್ಟ ಇರುಳುಗಳ ನಡುನಡುವೆ ಹೊರಳಿ ನರಳಿವೆ ವಿರಹದುರಿಯ ದಳ್ಳುರಿ, ಎಲ್ಲಿ? ಎಲ್ಲಿ? ಹೋದವೆಲ್ಲಿ ಮುಗಿಲ ಪಡೆ? ಸುರಿಸದೆ ಒಂದಿಷ್ಟು ತಣ್ಣನೆ ಹನಿಗಳ ಬಾಯಾರಿವೆ, ತೊನೆಯುವ ಬಯಕೆ ಆಸೆಗಳ ಚೆಲ್ಲಾಟದಲಿ ಮೂಕಸಂಕಟ ಯಾರಿಗೆ ಬೇಕಾಗಿತ್ತು ನೂರು...

ಮಾಧವಿಯ ವ್ಯಥ ಕಥೆ

ಕುದುರೆ ಏರಿಬರುವ ಶೂರಧೀರ ನನ್ನವ ಲೋಕಸುಂದರ ಚೆನ್ನ ಚೆನ್ನಿಗ ತನ್ನ ತುಂಬಿಕೊಂಡ ಕಣ್ಣ ಒಳಗೆ ಮತ್ಯಾರನೂ ನೋಡ ಬಯಸದವನ ಕೊರಳಿಗೆ ತನ್ನ ಮಾಲೆ ಕನಸು ಕಂಡ ಮಾಧವಿ ಏನಾಯ್ತೆ ಸಖಿ ನಿನ್ನ ವಿಧಿ ಮಾರಾಟವಾಯ್ತೆ...

ಇವಳು ನನ್ನವ್ವ

ಇವಳು ನನ್ನವ್ವ ತಂಪಿಗಾಗಿ ಕಾದವಳು ಹನಿ ಬೀಳದೆ ಒಡಲೆಲ್ಲ ಬಿರುಕು ಬಿರುಕು ಬರಗಾಲ ಒಳಗೂ ಹೊರಗು ಒಲೆಯ ಒಳಗಿನ ಬಿಸಿ ಕಾವು, ಕಾವಿನಲಿ ಬೆಂದ ಅವ್ವ ಹನಿಗಾಗಿ ಮೊಗವೆತ್ತಿ ನಡುನೆತ್ತಿಯ ಮೇಲಿನ ಕಪ್ಪು ಮೋಡಕ್ಕಾಗಿ...

ಮುಗಿದ ಅಧ್ಯಾಯ

ನನ್ನ ಎದೆಯ ಮೀಟಿಮೀಟಿ ಏನ ಹುಡುಕತಲಿರುವೆ ಅಲ್ಲಿಲ್ಲ ಯಾವ ಲೋಹದದಿರು ಹೊನ್ನ ಹೊಂಗನಸು, ಬೆಳ್ಳಿನವಿರು ಪಚ್ಚೆ ಹವಳದ ಭಾವಗಳು ಬರಿದು ಬರಿದು, ಈಗಿನ್ನೇನು ಅಲ್ಲಿಹುದು ನೀನಿದ್ದೆ ಅಂದು ಅಲ್ಲಿ ಬರಿ ಛಾಯೆ ಇಂದು ಇಲ್ಲಿ...

ಅಭಿಸಾರಿಕೆ

ಹೊರಟೆ ಎಲ್ಲಿಗೆ ಅಭಿಸಾರಿಕೆ ನಿರ್ಧಯಳೇ ಕಂದನ ಕರೆಗೆ ಬಿಂಕ ಬಿನ್ನಾಣವ ಉಟ್ಟು ಮುತ್ತು ರತ್ನವ ತೊಟ್ಟು ಹೊರಟೆ ಎಲ್ಲಗೆ ನೀ ಎಲ್ಲಿಗೆ? ಈ ಸೌಂದರ್ಯದ ಪ್ರಖರತೆ ಆಗಬಾರದೆ ಅತ್ಮದ್ದು ಹಿಂದೊಮ್ಮೆ ಹೊರಟಿದ್ದಳು ಅಕ್ಕ ದೂರಾಗಿಸಲು...

ನಾನು ನಾನೇ

ಬೊಬ್ಬಿಡುವ ಶರದಿ ನಾನಲ್ಲ ಸದ್ದಿಲ್ಲದೆ ಹರಿವ ನದಿಯೂ ಅಲ್ಲಾ ಬಳ್ಳಿ ಕುಸುಮ ಕೋಮಲೆ ನಾನಲ್ಲ ನಾನು ನಾನೇ ಗೆಳೆಯ ನಾನು ನಾನೇ, ನಾನು ನಾನೇ ಮನದಾಳದ ಭಾವಗಳೆಲ್ಲ ಉರಿವ ಕೆಂಡವಲ್ಲ ಬೆಳದಿಂಗಳ ತಂಪೂ ಅಲ್ಲಾ...

ಬೊಗಸೆಯೊಳಗಿನ ಬಿಂದು

ಬಿಟ್ಟು ಬಿಡು ಗೆಳೆಯ ನನ್ನಷ್ಟಕ್ಕೆ ನನ್ನ ರೆಕ್ಕೆ ಹರಿದ ಹಕ್ಕಿ ಹಾರಿಹೋಗುವುದೆಲ್ಲಿ ಇಷ್ಟಿಷ್ಟೆ ಕುಪ್ಪಳಿಸಿ ಅಲ್ಲಲ್ಲೆ ಅಡ್ಡಾಡಿ ನಿನ್ನ ಕಣ್ಗಾವಲಲ್ಲಿಯೇ ಸುತ್ತಿ ಸುಳಿದು ಒಂದಿಷ್ಟೆ ಸ್ವಚ್ಛಗಾಳಿ ಸೋಕಿದಾ ಕ್ಷಣ ಧನ್ಯತೆಯ ಪುಳಕ ತಣ್ಣನೆಯ ನಡುಕ...

ಒಗಟ ಬಿಡಿಸಿರೇ

ಹಾದಿಬೀದಿಯಲ್ಲಿ ಹೊನ್ನ ಮಾರುತ್ತಿದ್ದರಂತೆ ಅಂದು, ಅಂತೆಯೇ ಮಾರಿದನೊಬ್ಬ ತನ್ನ ಸತಿಯ ನಡುಬೀದಿಯಲಿ ಕ್ರಯಕ್ಕಿಟ್ಟ ಹೆಣ್ಣು ಹರಾಜಾದಳು ಬಿಕರಿಗಿಟ್ಟ ವಸ್ತುವಿನಂತೆ ಕೊಟ್ಟಮಾತ ಉಳಿಸಿಕೊಳ್ಳಲು ಸತ್ಯದ ಕೀರ್ತಿಗಾಗಿ ಸತಿಯ ಮಾರಿ, ತನ್ನ ತಾ ಮಾರಿಕೊಂಡ ಹುಂಬ ಗಂಡ...

ನಿಂತು ಬಿಡೇ ನೀ ಹೀಗೆ

ಯಾರು ಕೊಟ್ಟಿದ್ದೆ ಶಾಪ? ಬರಿತಾಪ, ಪರಿತಾಪ ಧರ್ಮ ಕರ್ಮದ ಗೆರೆ ಎಳೆದವರಲ್ಲವೇ ಅನುಕೂಲ ಸಿಂಧು ಶಾಸ್ತ್ರಸಮ್ಮತ ಅವರಿಗವರದೆ ಒಮ್ಮತ ಅಜ್ಜ ಹಾಕಿದ ಆಲದ ಮರಕ್ಕೆ ನೇಣು ಒಡ್ಡಬೇಡ ಗೋಣು ಯಾರ ಕೈಲಿದೆ ಪರತಂತ್ರ ಶಕ್ತಮನಸ್ಸಿನೊಡತಿ...

ಪೆಟ್ಟಿಗೆ

ಅವಳದೇ ಆದ ಆ ಹಳೆಯ ಪೆಟ್ಟಿಗೆ ಈಗಲೂ ಇದೆ ಅವಳೊಟ್ಟಿಗೆ ಪಡಿಯಕ್ಕಿ ಕೆಡವಿ ಹೊಸಿಲು ತುಳಿದು ನವಬದುಕಿನೊಳಗೆ ಅಡಿಯಿರಿಸಿದಾಗಲೇ ಜೊತೆಯಾಗಿ ಸಖಿಯಾಗಿ ಬಂಧನವ ಬೆಳೆಸಿತ್ತು ನವ ವಧುವಿನ ನವಿರು ಭಾವನೆಗಳ ಗೊಂಚಲಿಗೆ ಹಸಿಹಸಿ ಕನಸುಗಳ...