Home / Satire

Browsing Tag: Satire

ಸಂಕಟ ಬಂದಾಗ ವೆಂಕಟರಮಣ ಅನ್ನೋ ಗಾದೆ ಓಲ್ಡಾತು. ಕಾಲಂ ಕೂಡ ಮಾರಿಪೋಚಿ. ಕಾಲಕ್ಕೆ ತಕ್ಕ ಆಟ, ಆಟಕ್ಕೆ ತಕ್ಕ ವೇಷ ಕಣ್ರಿ ಈಗ. ಸಂಕಟ ಅಟಕಾಯಿಸಿಕ್ಯಂಡಾಗ ವೆಂಕಟರಮಣಂತಾವ ಹೋಗಿ ಗುಂಡು ಹೊಡಸ್ಕೊಂಡು ಬರೋದು ಶುದ್ಧ ಓಲ್ಡ್ ರಿಚುಯಲ್ಸ್ ಆತು. ಈಗ &#8220...

ಶ್ರೀರಾಮನ ಹೆಸರ್ನಾಗೆ ಈ ದೇಶದಾಗೆ ಭಾಳೋಟು ಲೂಟಿಗಳು ಖೂನಿಗಳು ನೆಡೆದು ಹೋದವು. ರಾಮ ಅಂದ್ರಂತೂ ಸಾಬರು ಹಗಲೊತ್ತೂ ವಂದ ಮಾಡ್ಕೋತಾರೆ. ಗೋದ್ರಾ ಹತ್ಯಾಕಾಂಡ ನೆನೆಸ್ಕೊಂಡ್ರೆ ಗುಜರಾತಿನೋರು ಗುಳೆ ಹೊಂಡಾಕೆ ರೆಡಿ ಆಯ್ತಾರೆ. ಇಂತದ್ರಾಗೆ ಇತ್ತೀಚೆಗೆ ...

ಮೊನ್ನೆನಾಗ ಸಿ.ಎಂ. ಕೊಮಾರಸ್ವಾಮಿ ತೆಗ್ದು ರಾಜೀನಾಮೆ ಒಗೆದೇ ಬಿಟ್ರು ಅಂತ ಧರ್ಮು, ಖರ್ಗೆ, ಸಿದ್ರಾಮು, ಬಂಗಾರಿ ಎಲ್ಲರಿಗೂ ಖುಸಿಯೋ ಖುಸಿ. ಚುನಾವಣೆ ನೆಡ್ಡಂಗೆ ತಾವೆಲ್ಲಾ ನಿಂತು ಗೆದ್ದಂಗೆ ಎಲ್ಲಾ ಪಕ್ಷಗಳೂ ಸೇರ್ಕೊಂಡು ಕಾಂಗ್ರಸ್ನೋರ ಸಂಗಡ ಸರ್...

ಕನ್ನಡನಾಡಿನ ಕುಮಾರನ ಅಂತ್ಯ ಸಂಸ್ಕಾರನಾ ರಾಜಕಾರಣದಲ್ಲಿನ್ನೂ ಕೊಮಾರನಾದ (ಬಚ್ಚಾ) ಕುಮಾರಸ್ವಾಮಿ ಏಟು ಪಸಂದಾಗಿ ಮಾಡಿದ ಅಂಬೋದ್ನ ನೀವೆಲ್ಲಾ ಮನೆಯಾಗೇ ಕುಂತು ಟವಿನಾಗೆ ಗಾಬರಿಬಿದ್ದು ನೋಡಿ ಹೊಟ್ಟೆಗೆ ಹಾಲು ಹೊಯ್ಕೊಂಡಿದ್ದೀರಿ. ದೇಶದ ಪಾಪ್ಯುಲರ್ ...

ಗೋಕಾಕ್ ಚಳುವಳಿ ಅಂತ ಒಂದು ದೊಡ್ಡ ಗದ್ದಲವೆ ನೆಡೀತು ೨೫ ವರ್ಷದ ಹಿಂದೆ ನೆಪ್ಪದೇನ್ರಿ? ಆಗಿನ ಜಮಾನ್ದಾಗೆ ಬೆಂಗಳೂರ್ನಾಗೆ ಎಲ್ಲಿ ನೋಡಿದ್ರೂ ತಮಿಳರ ಸ್ಲಮ್ಮು ಇಸಮ್ಮುಗಳೇ ತುಂಬ್ಕೊಂಡಿದ್ವು. ಬೆಂಗಳೂರ್ನಾಗೆ ಕಾಲಿಕ್ಕಿದ ತಕ್ಷಣ ಕೇಳ್ತಿದ್ದೇ ‘ಎಂಗೆ...

‘ಸಾಹಿತಿಗಳ ಜಗಳ ಗಂಧ ತೀಡಿದ್ದಾಂಗ’ ಅಂತ ಆವರ ಜಗಳವನ್ನೆಲ್ಲ ಎಂಟರ್ಟೈನ್ಮೆಂಟ್ ಆಗಿ ತಗೊಳ್ಳೋ ರೀಡರ್ಸ್ ಅಭಿಪ್ರಾಯ. ಅಡಿಗರು, ಕೆ. ಎಸ್. ನರಸಿಂಹಸ್ವಾಮಿ ಅವರನ್ನ ಪುಪ್ಪಕವಿ ಅಂತ ಚೇಡಿಸಿದರೆ, ಇದೇ ಅಡಿಗರು ಬಿಜೆಪಿ ಕನೆಕ್ಷನ್ ತಗಂಡು ಯಲಕ್ಷನ್ನಿಗೆ...

ಯು.ಆರ್. ಅನಂತಮೂರ್ತಿನಾ ಹೂ ಆರ್ ಅನಂತ ಮೂತ್ರಿ? ಎಂದು ಗುಡುಗಿದ ಕೊಮಾರ ರಾಮನ ಅಸಲಿರೂಪವೀಗ ಹೊರಬಿದೈತ್ರಿ. ಎಳೆ ವಯಸ್ಸಿನ ಸಿ‌ಎಂ ಭಾಳ ತಾಳ್ಮೆ ಸಹನಾ ಮೂತ್ರಿ ಅಂತೆಲ್ಲಾ ಮಾಧ್ಯಮಗಳಿಂದ ಹಾಡಿ ಹೊಗಳಿಸಿಕ್ಕಂಡಿದ್ದ ಈವಯ್ಯ, ಕಲಿತಬುದ್ಧಿ ಕ್ಕೆ ಬಿಡೋ...

ಕೋಜಾ ಸರ್ಕಾರ ಅಂದಾಕ್ಷಣ ಗಾಬರಿಯಾಗಬೇಕಾಗಿಲ್ಲ ಬಿಡ್ರಿ. ಕಾಂಗ್ರೆಸ್ನೋರು ಅಧಿಕಾರ ಕಳ್ಕೊಂಡು ಸಿಡಿಲು ಬಡಿದೋರಂಗಾಗಿ ನಾಲಿಗೆ ಮ್ಯಾಗೆ ಹಿಡಿತಾನೇ ಕಳ್ಕೊಂಡು ಸರ್ಕಾರನಾ ‘ಕೋಜಾ’ ಅಂತ ಲೇವಡಿ ಮಾಡಿದ್ರೂ ಅಂಥ ಸೀರಿಯಸ್ ಆಗಿ ತಗಬೇಕಿಲ್ಲೇಳಳ್ರಿ. ಅವರು...

ಎಂ.ಎಫ್. ಹುಸೇನ್ ಎಂಬ ಖ್ಯಾತ ಚಿತ್ರಕಾರನ ಇನ್ಶಿಯಲ್ಲೇ ಆತನ ಜಾತಕ ಹೇಳಿಬಿಡುತ್ತೆ ನೋಡ್ರಲಾ. ಎಂ ಯಾನೆ ಮೆಂಟಲ್, ಎಫ್ ಯಾನೆ ಫೀವರ್. ಮೆಂಟಲ್ ಫೀವರ್ಗೆ ತುತ್ತಾಗಿರೋ ಹುಸೇನಜ್ಜಂಗೆ ಬೆತ್ಲೆ ಚಿತ್ರ ಬಿಡಿಸೋ ಗೀಳು ಭಾಳ ಕಣ್ರಿ. ಅಗ್ದಿ ಫೇಮಸ್ಸಾದ ಮಂ...

ಈಗೀಗ ರಾಜಕೀಯದಾಗೆ ವಿಶೇಷ ಏನಿಲ್ಲ ಅನ್ನಂಗೇ ಇಲ್ ಬಿಡ್ರಿ. ಗೋಡ್ರು ನಾಟಕಕ್ಕೆ ಹೊಸ ಹೊಸ ಸೀನರಿಗಳು ಬರೆಸ್ತಾ ಅವ್ರೆ. ರಾಜಿನಾಮೆ ಕೊಟ್ಟರೂ ಅವರೆಯಾ ತಕ್ಕೊಂಡರೂ ಅವರೆಯಾ. ಕೊಟ್ಟಿದ್ದು ಯಾಕೋ ತಕ್ಕೊಂಡಿದ್ದು ಯಾಕೋ ಯಾರು ಕೇಳ್ಳೂ ಇಲ್ಲ ಇವರು ಹೇಳ್ಳ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...