ಅಧ್ಯಾಪಕರಿಗೆ ಕಿವಿಮಾತು

ಅಧ್ಯಾಪಕರಿಗೆ ಕಿವಿಮಾತು

೧. ಅಧ್ಯಾಪಕರು ತರಗತಿಯಲ್ಲಿ ಸ್ಪಷ್ಟವಾಗಿ ಹಾಗೂ ಎಲ್ಲರಿಗೂ ಕೇಳಿಸುವಂತೆ ಮಾತು ಉಚ್ಚರಿಸುವುದು ಅಗತ್ಯ. ಮಾತು ಸ್ವಲ್ಪ ನಿಧಾನವಾದರೂ ಪರವಾಯಿಲ್ಲ, ಸ್ಪಷ್ಟತೆ ಮುಖ್ಯ. ಯಾಕೆಂದರೆ, ಯಾವುದೇ ವಿದ್ಯಾರ್ಥಿಗೆ ಅಧ್ಯಾಪಕರ ಮಾತಿನಲ್ಲಿ ಒಂದು ಪದ ಸ್ಪಷ್ಟವಾಗದಿದ್ದರೂ ಆತ...
ಆದಿವಾಸಿಗಳು ಅರಣ್ಯದಲ್ಲೇ ಇರಬೇಕೇ?

ಆದಿವಾಸಿಗಳು ಅರಣ್ಯದಲ್ಲೇ ಇರಬೇಕೇ?

ಕಾಡಿನಲ್ಲಿರುವವರು ಕಾಡಿನಲ್ಲೇ ಇರಲಿ, ಪಾಪ, ಅವರು ಆ ಪರಿಸರಕ್ಕೆ ಓಗ್ಗಿದ್ದಾರೆ. ಅವರಿಗೆ ಅಲ್ಲಿಗೇ ಮೂಲಭೂತ ಅಗತ್ಯಗಳನ್ನು ಒದಗಿಸಿದರೆ ಸಾಕು.. ಮೂಲಭೂತ ಅಗತ್ಯಗಳೆಂದರೆ? ಮನೆ, ನೀರು, ವಿದ್ಯುತ್, ಟೆಲಿಫೋನು, ಟೀವಿ, ಆಸ್ತತ್ರೆ, ಶಾಲೆ, ಅಂಗಡಿಗಳು, ಪತ್ರಿಕೆಗಳು,...
ವಿಮರ್ಶಕರಿದ್ದಾರೆ ಎಚ್ಚರಿಕೆ!

ವಿಮರ್ಶಕರಿದ್ದಾರೆ ಎಚ್ಚರಿಕೆ!

ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದ ವಿದ್ಯಾರ್ಥಿಯಾದ ನಾನು ಸಾಹಿತ್ಯ ಕಲಿತದ್ದು ಹಳೆಯ ವಿಧಾನದಲ್ಲಿ. ಎಂದರೆ, ಕವಿತೆಯೊಂದು ಪಠ್ಯ ಪುಸ್ತಕದಲ್ಲಿದ್ದರೆ ಮೊದಲು ಕವಿಯ ಬಗ್ಗೆ ಸ್ವಲ್ಪ ತಿಳಿದುಕೊಳ್ಳುವುದು, ನಂತರ ಕವಿತೆಯ ಚರಣಗಳನ್ನು ಓದುತ್ತ, ಅದರ ಶಬ್ದಾರ್ಥಗಳನ್ನು...
ಸಾಧನೆ ಮತ್ತು ಮನ್ನಣೆ

ಸಾಧನೆ ಮತ್ತು ಮನ್ನಣೆ

ಪ್ರತಿಯೊಬ್ಬ ಮನುಷ್ಯನೂ ವೈಯಕ್ತಿಕವಾಗಿ ಬಯಸುವುದೇನು? ಸುಖ, ಶಾಂತಿ, ಶ್ರೀಮಂತಿಕೆ, ಆರೋಗ್ಯ? ಊಹೂಂ, ಇವೆಲ್ಲಾ ಸಿಕ್ಕಿಯೂ ಮನ್ನಣೆಯೊಂದು ಸಿಗದಿದ್ದರೆ ವ್ಯರ್ಥವೇ ಸರಿ. ರಾಜಕೀಯವಾಗಿ ಪ್ರಜಾಪ್ರಭುತ್ವ ಎಲ್ಲೆಡೆ ಬಂದು ಸಮಾನತೆ ನೆಲಸಿದ ಮೇಲೂ ವ್ಯಕ್ತಿಯಮಟ್ಟಿಗೆ ಈ ಮನ್ನಣೆಯೆನ್ನುವುದು...
ಪ್ರಾಣ ಪರಿಸರ

ಪ್ರಾಣ ಪರಿಸರ

ಚೈನಾದಲ್ಲಿ ಒಂದು ಪಾತರಗಿತ್ತಿ ಹಾರಿದರೆ ಯುರೋಪಿನಲ್ಲಿ ಭೂಕಂಪನವಾಗುತ್ತದೆ ಎಂಬ ಮಾತಿದೆ. ಮೇಲುನೋಟಕ್ಕೆ ಇದು ತಮಾಷೆಯಾಗಿ ಕಾಣುತ್ತದೆ. ಆದರೆ ಇಡೀ ಲೋಕವೇ ಒಂದು ಬೃಹತ್ತಾದ ಅಂತರ್ಜಾಲವಾಗಿರುತ್ತ ಇಂಥ ಯಾವ ಮಾತೂ ನಿಜಕ್ಕೂ ಅರ್ಥಹೀನವಲ್ಲ. ಯಾವುದೋ ಒಂದು...
ಲೇಖಕ ಸತ್ತ?

ಲೇಖಕ ಸತ್ತ?

‘ಕತೆಯನ್ನು ನಂಬು, ಕತೆಗಾರನನ್ನಲ್ಲ’ ಎನ್ನುವುದು ಡಿ. ಎಚ್. ಲಾರೆನ್ಸ್‌ನ ಸುಪ್ರಸಿದ್ದ ಮಾತು. ಏನಿದರ ಅರ್ಥ? ಕತೆಗಾರನಿಗೆ ಕತೆಯ ಕುರಿತು ಗೊತ್ತಿಲ್ಲವೆಂದೇ? ಕತೆಯ ಕುರಿತು ಕತೆಗಾರನು ಅದರಲ್ಲಿಲ್ಲದ ಗುಣಗಳನ್ನು ಹೇಳಬಹುದೆಂದೇ? ಕತೆ ಬರೆದಮೇಲೆ ಕತೆಗಾರನೂ ಎಲ್ಲ...
ಕರಡು ತಿದ್ದುವ ಕೆಲಸ

ಕರಡು ತಿದ್ದುವ ಕೆಲಸ

ನಿಮ್ಮದೊಂದು ಪುಸ್ತಕ ಪ್ರಕಟವಾಗುತ್ತಿದೆ. ಅದು ಕರಡು ತಿದ್ದಿ ಸರಿಪಡಿಸುವ ಹಂತ ದಾಟಿರುವಾಗ ಅದರಲ್ಲಿ ಹಲವಾರು ಅಕ್ಷರ ತಪ್ಪುಗಳು ನಿಮ್ಮ ಕಣ್ಣಿಗೆ ಬೀಳುತ್ತವೆ. ನೀವು ಏನು ಮಾಡುತ್ತೀರಿ? ತಪ್ಪು ಒಪ್ಪುಗಳ ಪಟ್ಟಿಯೊಂದನ್ನು ಮಾಡಿ ಪುಸ್ತಕದ ಮೊದಲಿಗೋ...
ಸ್ವಾನುಭವ ಮತ್ತು ಸಾಹಿತ್ಯ

ಸ್ವಾನುಭವ ಮತ್ತು ಸಾಹಿತ್ಯ

ಪಂಚೇಂದ್ರಿಯಗಳು ನಮಗೆ ಒದಗಿಸುವ ಸಂವೇದನೆಗಳಲ್ಲಿ ಕಲೆಗೆ ಮಾಧ್ಯಮವಾಗಿ ಉಪಯೋಗವಾಗುವುದು ಕೇವಲ ಎರಡೇ ಎನ್ನುತ್ತಾನೆ ಹೆಗೆಲ್: ದೃಶ್ಯ (ದೃಷ್ಟಿ) ಮತ್ತು ಧ್ವನಿ (ಶ್ರವಣ). ಯಾಕೆಂದರೆ ಇವುಗಳಿಂದ ನಾವು ಕಲಾಭಿವ್ಯಕ್ತಿಗೆ ಅಗತ್ಯವಾದ ಸುದೂರವನ್ನು ಗಳಿಸಿಕೊಳ್ಳುವುದು ಸಾಧ್ಯವಿದೆ. ಉಳಿದ...
ಸೃಜನಕ್ರಿಯೆ ಸಾವಿರ ವರ್ಷಗಳ ಏಕಾಂತ

ಸೃಜನಕ್ರಿಯೆ ಸಾವಿರ ವರ್ಷಗಳ ಏಕಾಂತ

ನಮ್ಮ ನಾಗರಿಕತೆಯತ್ತ ನೋಡಿದರೆ ನಾವು ಮನುಷ್ಯ ಸಮೂಹವಾಗಿ ಸಂಪಾದಿಸಿಕೊಂಡಿರುವ ಜ್ಞಾನಸಂಪತ್ತು ಅಗಾಧವೂ ಅಪರಿಮಿತವೂ ಆದುದು ಎಂದು ನಮಗನಿಸಬಹುದು. ಆದರೂ ನಾವು ಅರಿಯುವುದಕ್ಕೆ ಇನ್ನಷ್ಟು ಇದೆ-ಅದೆಷ್ಟು ಎನ್ನುವ ಬಗ್ಗೆ ನಮಗೆ ಸರಿಯಾದ ಅರಿವಿಲ್ಲದಷ್ಟು. ಭೂಮಿಯೊಂದು ಉಪಗ್ರಹ...
ಕತೆ: ವಾಸ್ತವತೆ ಮತ್ತು ಅನನ್ಯತೆಗಳ ನಡುವೆ

ಕತೆ: ವಾಸ್ತವತೆ ಮತ್ತು ಅನನ್ಯತೆಗಳ ನಡುವೆ

ಕೆಲವು ದಿನಗಳ ಹಿಂದೆ ಒಂದು ಮುಂಜಾನೆ ನಾನು ಕತೆಗಾರರೊಬ್ಬರ ಜತೆ ದೂರವಾಣಿಯಲ್ಲಿ ಮಾತಾಡುತ್ತಿದ್ದೆ. ಅವರು ಹೇಳಿದರು: ಸದ್ಯ ಕನ್ನಡಕ್ಕೆ ತೇಜಸ್ವಿಯವರ ‘ತಬರನ ಕತೆ’ ಮತ್ತು ಅನಂತಮೂರ್ತಿಯವರ ‘ಸೂರ್ಯನ ಕುದುರೆ’ ಮಾದರಿಯಾಗಿವೆ. ಮೊದಲನೆಯದು ವಾಸ್ತವತೆಯನ್ನು ಒಳಗೊಂಡರೆ...