ಈಚಲ ಮರದಡಿ

ಈಚಲ ಮರದಡಿ ಈಶ್ವರ ಭಟ್ಟರು ಧೋತರ ಹರಡಿ ಕುಳಿತೇ ಬಿಟ್ಟರು ಆಕಡೆ ನೋಡಿ ಈಕಡೆ ನೋಡಿ ಮೊಗೆದೇ ಬಿಟ್ಟರು ಕುಡಿದೇ ಬಿಟ್ಟರು ಏನದು ಗಡಿಗೆ ಏನದರೊಳಗೆ ಓಹೋ ಹುಳ್ಳಗೆ ತಿಳಿಯಿತು ಮಜ್ಜಿಗೆ ನೋಡಿದರುಂಟು ಕೇಳಿದರುಂಟು...

ಹಗಲುಗನಸುಗಾರ

ಸೊಗಸುಗಾರ ಸರದಾರ ಹಗಲುಗನಸುಗಾರ ಎಲ್ಲರಂತಲ್ಲ ಅವನು ಭಾರಿ ಮೋಜುಗಾರ ಗಾಳಿಕುದುರಿ ಏರುತಾನೆ ಏಳು ಕಡಲು ಮೀರುತಾನೆ ಇವನ ಕನಸಿಗೆಷ್ಟೊ ದಾರ ಸಾಗಿದಷ್ಟೂ ದೂರ ಗಾಳಿಗಿರಣಿ ಮಂತ್ರಭರಣಿ ತಲೆಗೆ ಕವಚಿ ಬೋಗುಣಿ ಸೆಣಸಿದರೂ ಎಲ್ಲರೊಡನೆ ಗೆಲುವನೀತನೊಬ್ಬನೆ...

ಎಂದಿನಂತಲ್ಲ

ಎಂದಿನಂತಲ್ಲ ಈ ದಿನ ನನ್ನ ಪ್ರೀತಿಯ ಮೊದಲ ದಿನ ಹೋಗು ಮನಸೆ ಆಕಾಶಕೆ ಸಾಗು ನೀ ಬಹುದೂರಕೆ ಯಾರ ಹಿಡಿತಕು ಸಿಲುಕದಲ್ಲಿ ನನ್ನೊಲವಿನ ಸಂಗದಲ್ಲಿ ಬೀಸು ಗಾಳಿಯೆ ಕಾಡುಗಳ ಅಪರೂಪದ ನಾಡುಗಳ ಏರು ಬೆಟ್ಟವೆ...

ಬೇಲಿ ಮತ್ತು ಹೊಲ

ಬೇಲಿಯೆದ್ದು ಹೊಲವ ಮೆದ್ದು ಹೋಯಿತಂತೆ ಕಂಡಿರ? ಗೂಳಿಯೆತ್ತು ಥರವೆ ಇತ್ತು ಮೆಲ್ಲುತಿತ್ತು ನೋಡಿದೆ ರಾತ್ರಿಯೆಲ್ಲ ತಿಂದಿತಲ್ಲ ಸದ್ದು ನಿಮಗೆ ಕೇಳಿತೆ? ಹೊಡೆದು ಡುರುಕಿ ಮಣ್ಣು ಕೆದಕಿ ಕೂಗುತ್ತಿತ್ತು ಕೇಳಿದೆ ಬತ್ತ ಹುರುಳಿ ಕಬ್ಬು ಕದಳಿ...

ಮರಿ ಪಿಶಾಚಿ ಪದ್ಯ

ಭಾಗ-೧ ಒಮ್ಮೆ ಒಂದು ಮರಿಪಿಶಾಚಿ ಊರ ಸುತ್ತಲದಕೆ ತೋಚಿ ಪೊಟರೆಯಿಂದ ಇಳಿಯಿತು ಧೈರ್ಯದಿಂದ ನಡೆಯಿತು ನಡೆದು ನಡೆದು ಬರಲು ಕೊನೆ ಬಿತ್ತು ಕಣ್ಣಿಗೊಂದು ಮನೆ ಬಾಗಿಲಿಗೆ ಬೀಗವಿತ್ತು ಕಿಟಕಿ ಮಾತ್ರ ತೆರದೆ ಇತ್ತು ಅರೆ!...

ಏನಂತಿ

ಏನಂತಿ ವಾಸಂತಿ ಬಾ ನನ್ನ ಕೂಡೆ ಸಂತಿ ತಲೆ ತುಂಬ ಸೇವಂತಿ ಮುಡಿಸುವೆನು ಏನಂತಿ ದೂರದ ಹಾದಿಯಲ್ಲ ಯಾರದು ಭೀತಿಯಿಲ್ಲ ಸಾಗೋಣ ಮೆಲ್ಲ ಮೆಲ್ಲ ವಾಸಂತಿ ವಾಸಂತಿ ಏನಂತಿ ರೂಪವಂತಿ ಬಳೆಯಂಗಡಿಯುದ್ದಕು ಎಷ್ಟೊಂದು ಬಣ್ಣ...

ಯಾರು ಕರೆದರು

ಕೋಳಿ ಕೂಗುವ ಮುನ್ನ ಯಾರು ಕರೆದರು ನನ್ನ ಹೇಳು ಮನಸೇ ಹೇಳು ಕತೆಯ ನಿನ್ನ ಗುರುತು ಪರಿಚಯವಿರದ ದೇಶದಲಿ ನಾನಿರಲು ಯಾರು ಬಯಸಿದರಿಂದು ನನ್ನ ಕಾಣಲೆಂದು ಯಾರೆಂದು ನೋಡಿದರೆ ಬಾಗಿಲಲಿ ಯಾರಿಲ್ಲ ಎಲ್ಲಿ ಹೋದರು...

ನೀ ಕೇಳಿದ್ದು

ನೀ ಕೇಳಿದ್ದು ಕೊಡುವೆನು ಗೆಳತಿ ಆಗು ನನ್ನ ಮನೆಯೊಡತಿ ನಾ ಕೇಳಿದ್ದು ಕೊಟ್ಟರೆ ಗೆಳೆಯ ಕೊಡುವೆಯ ಚಿನ್ನದ ಬಳೆಯ ಚಿನ್ನದ ಬಳೆಗಳು ನೂರು ಕುದುರೆಗಳೆಳೆಯುವ ತೇರು ನೀ ಕೇಳಿದ್ದು ಕೊಡುವೆನು ಗೆಳತಿ ಆಗು ನನ್ನ...

ಯಾವಾಗಲೂ

ಯಾ ಯಾ ಯಾ ಯಾವಾಗಲೂ ಯಾವುದನ್ನೂ ಬಯಸದಂತೆ ಯಾರನ್ನೂ ನೋಯಿಸದಂತೆ ಯಾಕಾಗೂ ಕೊರಗದಂತೆ ಯಾರ ಮೇಲೂ ಒರಗದಂತೆ ಯಾ ಯಾ ಯಾ ಅಯ್ಯಾ ನಮ್ಮ ನಡೆಸೋ ಯಾವಾಗಲೂ ವಾದಕೆಂದೆ ವಾದಿಸದಂತೆ ವಾಲಗ ಸುಮ್ಮನೆ ಊದದಂತೆ...