ಯಾವಾಗಲೂ

ಯಾ ಯಾ ಯಾ
ಯಾವಾಗಲೂ

ಯಾವುದನ್ನೂ ಬಯಸದಂತೆ
ಯಾರನ್ನೂ ನೋಯಿಸದಂತೆ
ಯಾಕಾಗೂ ಕೊರಗದಂತೆ
ಯಾರ ಮೇಲೂ ಒರಗದಂತೆ
ಯಾ ಯಾ ಯಾ
ಅಯ್ಯಾ ನಮ್ಮ ನಡೆಸೋ
ಯಾವಾಗಲೂ

ವಾದಕೆಂದೆ ವಾದಿಸದಂತೆ
ವಾಲಗ ಸುಮ್ಮನೆ ಊದದಂತೆ
ವಾರಗೆಯವರ ಮರೆಯದಂತೆ
ವಾರೆ ನೋಟಕೆ ಸೋಲದಂತೆ
ವಾ ವಾ ವಾ
ಅಯ್ಯಾ ನಮ್ಮ ನಡೆಸೋ
ಯಾವಾಗಲೂ

ಗಲ್ಲಕೆ ಕೈಯಿಟ್ಟು ಕೂರದಂತೆ
ಗಗನ ಕುಸುಮಕೆ ಎಳಸದಂತೆ
ಗತಕಾಲವನು ಬಯ್ಯದಂತೆ
ಗದ್ದಿ ಮೋಹಕೆ ತುಯ್ಯದಂತೆ
ಗಾ ಗಾ ಗಾ
ಅಯ್ಯಾ ನಮ್ಮ ನಡೆಸೋ
ಯಾವಾಗಲೂ

ಕಾಲು ನಡೆದು ಕುಸಿಯದಂತೆ
ಹಾಲು ಕುದಿದು ಬಸಿಯದಂತೆ
ಕಡಲು ಮೇರೆ ಮೀರದಂತೆ
ಒಡಲು ಬೇರೆ ಕೋರದಂತೆ
ಲೂ ಲೂ ಲೂ
ಅಯ್ಯಾ ನಮ್ಮ ನಡೆಸೋ
ಯಾವಾಗಲೂ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅನುವಾದದ ಕ್ರಿಯಾಶೀಲತೆ
Next post ಬೇವು ಬೆಲ್ಲ

ಸಣ್ಣ ಕತೆ

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…