ಅಖ್ತರ್ ಹುಸೇನ್

ದಾರಿ ತೋರಿದವ- ನಭಿಮನ್ಯುವಲ್ಲ ಅಖ್ತರ್ ಹುಸೇನ ಈತ ಒಳ ನುಗ್ಗಿದಂತೆ ಹೊರ ಬರಬಲ್ಲ- ನಾದರೂ ಬೇಕೆಂದೆ ಒಳಗೇ ಉಳಿದಿರುವನು ಎಷ್ಟೋ ಕಾಲದಿಂದ ಸಂದಿಗೊಂದಿಯ ಹಾದು ಕತ್ತಲಿಗೆಡವಿ ಗೋಡೆಗಳ ತಡವಿ ಅಂತೂ ಹೊರಬಂದೆವು ಬಚಾವೆಂದು ನೋಡಿದರೆ...

ಹೈದರ್‌ಗುಡದಲ್ಲೊಬ್ಬ ಹೈದ

ಹೈದರ್‌ಗುಡದಲ್ಲೊಬ್ಬ ಹೈದನಿದ್ದನು ನೋಡು ಹಲವು ವರ್ಷಗಳ ಕಾಲ ಮಾತಿಲ್ಲ ಕತೆಯಿಲ್ಲ ಯಾರೇನ ಕೇಳಿದರು ಮೌನವೇ ಉತ್ತರವು ಕೊನೆಗೊಬ್ಬ ಬೈರಾಗಿ ಆ ದಾರಿ ಬಂದವನು ಕೊಟ್ಟನು ಹಿಡಿ ರಾಗಿ ಏನಾಶ್ಚರ್ಯ! ಬಾಲಕನು ಒಮ್ಮೆಲೇ ಮಾತಾಡತೊಡಗಿದನು ಏನು...

ಮಾಯಾವಿ

ಅಫಜಲ್‌ಗಂಜಿನಲ್ಲೊಂದು ದಿನ ಅಲ್ಬುಕರ್ಕೆಂಬವನು ತನ್ನ ಆಫೀಸಿನಿಂದ ಮರಳುತ್ತಿದ್ದವನು ಮಾಯವಾದನು ಇದ್ಡಕ್ಕಿದ್ದ ಹಾಗೆ ಚಾವಣಿಯಿಂದ ಹೊಗೆ ನೆಲದಿಂದ ಧಗೆ ಎದ್ದು ಹೋದ ಹಾಗೆ (ಸಿನಿಮಾ ಕತೆಗಳ ಮಾದರಿ) ಆದರಿದು ಮಾತ್ರ ಖಾತರಿ) ಎಲ್ಲಿ ಹೋದನಲಲ್ಬುಕರ್ಕ ಪರಿಪೂರ್ಣ...

ಆಗಮನ

ವಾಯುಸಂಚಾರಿ ಒಂದು ಪಟ್ಟಣದಿಂದ ಇನ್ನೊಂದಕ್ಕೆ ಹಾರಿ ಬರುತ್ತಿದ್ದಾನೆ, ಕೆಳಗೆ ಮೋಡಗಳ ಮೇಲೆ ಮೋಡಗಳು ಬಿದ್ದು ಅವುಗಳಂಚಿನಲಿ ಸೂರ್ಯನ ರಶ್ಮಿಗಳೆದ್ದು ನಿಮಿಷಗಳು ಸರಿದರೂ ಸರಿಯುವುದಿಲ್ಲ ದಾರಿ ಹೊಸೆಯುತ್ತಾನೆ ಮನಸ್ಸಿನಲ್ಲಿ ಒಂದು ಕವಿತೆಯ ಚರಣ: ಎಲೆಲೆ ಗಗನ...

ಒಂದು ಮೋಟರ್‌ಬೈಕನ್ನೇರಿ

ತಿರುವುಗಳನ್ನು ಬಳಸುತ್ತ ಇಳಿಜಾರುಗಳನ್ನು ಇಳಿಯುತ್ತ ಇಮ್ಮಡಿಸುವ ವೇಗಕ್ಕೆ ಬಂದು ಬಡಿಯುವ ಗಾಳಿ ಸೀಳುವ ದೇಹ ಬಹಳ ಹಗುರ. ಎತ್ತರಗಳಾಚೆ ಏನಿದೆ ಏನಿಲ್ಲವೆಂದು ಗೊತ್ತಿರದ ಆತಂಕ ಹಾಗೂ ಸುಖ ಒಂದು ಮೋಟರ್‌ಬೈಕನ್ನೇರಿ ಸುಮ್ಮನೇ ಹೋಗುವ ಸಹಜ...

ಪ್ರತಿಮೆ

ಆತ ನಾಲ್ಕು ರಸ್ತೆಗಳು ಸೇರುವಲ್ಲಿ ಬಂದು ಅತ್ತ- ಅಳುತ್ತಲೇ ಇದ್ದ. ಕಾರುಗಳು, ಬಸ್ಸುಗಳು, ಟಾರ್ಪಲಿನ್‌ ಹೊದ್ದ ಭಾರವಾದ ಟ್ರಕ್ಕುಗಳು ಹಾದು ಹೋಗುತ್ತಲೇ ಇದ್ದುವು. ಎತ್ತಿನ ನಿಧಾನ ಗಾಡಿಗಳು ಸಾಗುತ್ತಲೇ ಇದ್ದುವು. ನಿದ್ರಿಸುವ ನಗರ ಎಚ್ಚರಾಗುತ್ತಿತ್ತು....

ಬಸ್ಸಿನಿಂದ ಇಳಿದವಳಿಗೆ

ನೀನಿಳಿಯುವಾಗಿನ ನಿನ್ನ ನಗ್ನಕಾಲುಗಳ ಸೊಬಗನ್ನು ಕಣ್ಣುಗಳಲ್ಲಿನ ಆಚಾನಕ ಬೆರಗನ್ನು ಭಯ ಹಾಗೂ ಲಜ್ಜೆಗಳನ್ನು ನಾನು ಕಂಡಿರುವೆನು. ನೀನು ಬಂದಿಳಿದ ಬಸ್ಸು ಮುಂದೆಲ್ಲಿಗೊ ಹೊರಟು ಹೋಯಿತು. ಎದ್ದ ಧೂಳಿನಲ್ಲಿ ಯಾರೊ ಹಿಂದಿರುಗಿ ನೋಡಿದರು. ನೀನು ಮುಖ...
ಆರೋಪ – ೧೬

ಆರೋಪ – ೧೬

[caption id="attachment_10176" align="alignleft" width="300"] ಚಿತ್ರ: ಜೆರಾರ್‍ಡ್ ಗೆಲ್ಲಿಂಗರ್‍[/caption] ಅಧ್ಯಾಯ ೩೧ ನಿರಂಜನ್ ರೇ ಗೊಳ್ಳನೆ ನಕ್ಕರು. ಅವರ ಪಕ್ಕದಲ್ಲಿದ್ದ ಪ್ರೊಫೆಸರ್ ಪದ್ಮಾವತಿಯ ಕದಪು ಕೆಂಪಾಯಿತು. ಪ್ರೊಫೆಸರ್ ಪಾಣಿಗ್ರಾಹಿ ಬಿಚ್ಚುಬಾಯಿ ಜೋಕು ಹೇಳಿದ್ದರು. ರೇ...

ಅಪ್ಪುವಿನ ರೈಲು

ಎಡೆಬಿಡದೆ ಸುತ್ತುವುದು ಅಪ್ಪುವಿನ ರೈಲು ಹೈದರಾಬಾದಿನ ಬಯಲು ಫಲಕ್‌ನುಮಾದಿಂದ ಬೋಲಾರಾಮಿಗೆ ಯಾಕೆ ಏನೆಂಬ ಗೊಡವೆಯಿಲ್ಲದೆ ಕರೆಯುವುದು ಮಂದಿಯನು ರಾತ್ರಿಹಗಲು ಮಲಕ್‌ಪೇಟೆ ಕಾಚಿಗುಡ ಸೀತಾಫಲ ಮಂಡಿ ಎಲ್ಲ ಕಡೆಗೂ ಇದೊಂದೇ ಬಂಡಿ ಬೆಳಿಗ್ಗೆ ಮಧ್ಯಾಹ್ನ ಸಂಜೆ...
ಆರೋಪ – ೧೫

ಆರೋಪ – ೧೫

[caption id="attachment_10176" align="alignleft" width="300"] ಚಿತ್ರ: ಜೆರಾರ್‍ಡ್ ಗೆಲ್ಲಿಂಗರ್‍[/caption] ಅಧ್ಯಾಯ ೨೯ ತಾನೊಂದು ಗೊಬ್ಬರದ ಹುಳವಾಗಿ ಛಾವಣಿಯಿಂದ ಕೆಳಗೆ ಬಿದ್ದ ಹಾಗೆ ಕನಸು, ಆದರೆ ನಿಜಕ್ಕೂ ಬಿದ್ದುದು ಮಂಚದಿಂದ ಬಿದ್ದ ಸದ್ದಿಗೆ ಕೇಶವುಲುಗೆ ಕೂಡ...