ಸುಂದರ ಶಿವ

ಸುಂದರ ಶಿವ ಸತ್ಯಸದಾಶಿವ ಕಂದರ ನೀ ಕಾಪಾಡೋ ಅಭವ || ಪ || ವಿಶ್ವವೆ ನಿನ್ನಯ ಗುಡಿಯೇ ಆದರು ಹೃದಯದ ಗುಡಿಯಲಿ ಕುಳಿತಿರುವೆ ಆಗಸದನಂತ ಕಾಯನು ನೀನು ಮಣ್ಣಿನ ಕಾಯದಿ ನೆಲೆಸಿರುವೆ || ೧...

ಕಾಯೋ ತಂದೆ

ಕಾಯೋ ತಂದೆಯೆ ಕಂದನ ಸದಯ ಕನವರಿಸುತಲಿದೆ ನನ್ನೀ ಹೃದಯಾ || ಪ || ಕಾಲಿವು ಕೆಸರಲಿ ಹೂತಿವೆ ಜೀಯಾ ತಲೆಯಿದು ಮುಗಿಲಿಗೆ ನೋಡುತಿದೆ ಅರಳಿದ ಸುಮಗಳು ಅಣಕಿಪವೆನ್ನ ಹಾರುವ ಹಕ್ಕಿಯು ಕರೆಯುತಿದೆ || ೧...

ಸಗ್ಗದ ಬೆಳಕೇ

ವಿಶ್ವವ ತುಂಬಿದ ಸಗ್ಗದ ಬೆಳಕೇ ಬೆಳಗೈ ನಮ್ಮೆಲ್ಲರ ಮನವ ಬದುಕನು ಲೀಲೆಯ ರೂಪದಿ ಬಾಳಲು ಬೆಳೆಸೈ ನಮ್ಮೆಲ್ಲರ ತನುವ || ೧ || ಶಕ್ತಿಯ ಸ್ಫೂರ್ತಿ ಮುಕ್ತಿಯ ಕೀರ್ತಿ ಜ್ಞಾನ ಜ್ಯೋತಿಯ ನೀ ಬೆಳಗು...

ತುಂಬು

ಒಳಹೊರಗ ತುಂಬು ತಳ ತುದಿಯ ತುಂಬು ನನ್ನೆಲ್ಲ ಜೀವ ತುಂಬು ನನದೆಂಬುವದೆಲ್ಲ ಸಂದುಗಳ ತುಂಬು ಬಿಡಬೇಡವೆಲ್ಲು ಇಂಬು || ೧ || ನರಕದೊಳೆ ನಿಂತು ಸಗ್ಗಕ್ಕೆ ಕೈಯ ಚಾಚುವೆನು ನಿನ್ನದಯದಿ ಪಾಪವನೆ ತುಳಿದು ಪುಣ್ಯಕ್ಕೆ...

ಎದೆಯಾಳದುಲುಹು

ಋಷಿಗಳ ಮನದಾಗೆ ಓಂಕಾರ ಹರದಂಗೆ ಬೆಸಲಾಗಿ ನಡೆದಾವೆ ತುಂತುಂಬಿ ಮೋಡ ನಿಂತಂಗೆ ನಿಂತಲ್ಲಿ ಕುಂತಂಗೆ ಕುಂತಲ್ಲೆ ಚಿಂತ್ಯಾಗೆ ಮೈಮರೆತ ಹಸಿರಿನ ಕಾಡ || ೧ || ಧ್ಯಾನದಾಗ ಸ್ವರ್ಗಾನ ಕಂಡಾಗ ತುಟಿಯಾಗೆ ಎಳೆನಗೆ ಚಿಗತಂಗ...

ಎಲ್ಲಿಹನು ನನ್ನ ಪತಿ

ಓ ಗಿರಿಯೆ ಮರಗಳೇ ಓ ಜೀವ ಜೀವಗಳೆ ನನ್ನೊಡೆಯ ಎಲ್ಲಿಹನು ಬೇಗ ಪೇಳಿ ಸಾಯುತಿಹೆ ತರಹರಿಸಿ ನಿರ್ಜೀವವಾಗಿರುವೆ ಅವನಿಲ್ಲದಾನಿನ್ನು ಹೇಗೆ ಇರಲಿ || ೧ || ಬಾವಿಯಲಿ ಜಲವೆಲ್ಲ ಬತ್ತಿ ಹೋದಂತಿಹುದು ಹಣ್ಣಿನಲಿ ರಸವೆಲ್ಲ...

ನಿನ್ನದು

ಅಳುವು ನಿನ್ನದು ನಗುವು ನಿನ್ನದು ನೋವು ಸುಖಗಳು ನಿನ್ನವು ಹೊಳೆದು ಅಳಿಯುವ ಚೆಲುವು ನಿನ್ನದು ತಾಳಿ ಬಾಳುವ ಒಲುಮೆಯು || ೧ || ಲಾಭ ನಿನ್ನದೆ ನಷ್ಟ ನಿನ್ನದೆ ನನ್ನದೆನ್ನುತ ಉಬ್ಬುವೆ ಕಾಮ ನಿನ್ನದೆ...

ಮಳೆ-ಡಗೆ

ಎಂದು ಬರುವುದೋ ನಿನ್ನ ಕರುಣೆ ಮಳೆಯಾಗಿ ಧರೆಗೆ ಇಳಿದು ಎಂದಿನಂತೆ ಸುರಿದಿಹುದು ಬಿಸಿಲು ಎದೆಯ ಒಣಗಿಸಿಹುದು || ೧ || ಮಳೆಯು ಬಂದರೂ ಒಂದು ಹನಿ ನಿಲ್ಲದೇ ಹರಿಯುತ್ತಿತ್ತು ಇಳಿಯಲೊಲ್ಲದೋ ಕಾವು, ಸುಡುತಲಿದೆ ಒಳಗಿನಿಂದ...

ಬಾಗಿಲ ತೆಗೆಯಮ್ಮ

ಕಳೆಯನು ಕಳೆಯದೆ ನಾನಿನ್ನ ಕಾಣೆನು ಸರಸಮ್ಮ ನೀನೆಷ್ಟು ಕಳವಂತಿಯೆ ಹೊಲದಲ್ಲಿ ತುಂಬಿರುವ ದನಗಳನಟ್ಟದೆ ಬೆಳೆಯನ್ನು ಕಾಣೆನು ರಸವಂತಿಯೆ || ೧ || ಈ ಮಣ್ಣು ಈ ನೀರು ಗಾಳಿ ಬೆಂಕಿಗಳಿಂದ ಹೊಲದಲ್ಲಿ ಬೆಳೆಯನು ಬೆಳೆಯಬಹುದು...