ಬೆಳೆಯಗೊಡಲಿಲ್ಲವೇನಮ್ಮ?

ಯಾಕಮ್ಮ ಈ ಕೋಪ, ಈ ರೋಷ, ಇಷ್ಟೊಂದು ಆವೇಶ ಅವರ ಮೇಲೆ? ಬೆಳೆಯ ಗೊಡಲಿಲ್ಲವೇ ಅವರು ನಮ್ಮ- ನಾವಿಂದು ಇರುವ ಹಾಗೆ? ಇರಲಿಲ್ಲವೇ ಲಕ್ಷ್ಮೀಬಾಯಿ ನಮ್ಮ ನಿಮ್ಮ ಹಾಗೆ ಬೆಳೆಯಲಿಲ್ಲವೇ ಅವಳು ದೇಶಕ್ಕಾಗಿ ಜೀವತೆತ್ತು...

ಪಯಣ

ಯಾವುದೇ ಪಯಣ ಗೊತ್ತಿಲ್ಲ ಗುರಿಯಿಲ್ಲ ಆದಿಯೆಲ್ಲಿ? ಅಂತ್ಯವೆಲ್ಲಿ? ಸಾಗಿದೆ ತಿಳಿಯಲಾಗದ ಲೋಕಕೆ, ಮಾಯಾಲೋಕಕೆ ಬದುಕಿದು ಬರೀ ಬೆರಗು ಕಣ್ಣು ಕಟ್ಟು ಆಟದ ಮೆರಗು ಅರಿತವರಿಲ್ಲ ಸೃಷ್ಟಿಯ ಮೂಲ ನದೀ ಮೂಲ ಋಷಿ ಮೂಲ ಹಾಗೆಯೇ...

ಹೋಗಲೆಲ್ಲಿ ಜನ ಸಾಮಾನ್ಯರು?

ಬರುತ್ತಿದ್ದಾರೆ ಜಾಗ್ರತೆ ಹಗಲು ದರೋಡೆಕೋರರು ಜನ ಸಾಮಾನ್ಯರ ಸುಲಿಗೆ ಮಾಡೋ ಕಲಿಯುಗದ ಬಕಾಸುರರು. ಮನೆಕಟ್ಟುವಾಗ ಬರುತ್ತಾರೆ ಕಾರ್ಪೊರೇಶನ್‌ನ ಸುಲಿಗೆದಾರರು, ಕಟ್ಟಿದ ಮೇಲೆ ಬರುತ್ತಾರೆ ತೆರಿಗೆ ಹೇರುವ ಲಂಚಾವತಾರಿಗಳು. ರಸ್ತೆಗಿಳಿದರೆ ಬರುತ್ತಾರೆ ಸರಗಳ್ಳರು ವಾಹನಗಳ ನಿಯಂತ್ರಿಸುವವರು...

ಸಾವು

"ಸಾವು" ಪದವೇ ಭಯಂಕರ ಭೀಕರ ಎದೆ ನಡುಗಿಸುವ ಎರಡಕ್ಷರ ಹುಡುಕಿದರೂ ಸಿಕ್ಕದು ನೀನಿಲ್ಲದ ಜಾಗ ನಿನ್ನ ನಿರ್ನಾಮಕ್ಕೆ ಮಾಡುತಿಹರು ಮಹಾಯಾಗ ಸಾವಿಲ್ಲದ ಮನೆಯ ಸಾಸಿವೆ ತರಲು ಹೇಳಿದ ಬುದ್ಧ ಸಂಸಾರವೇ ತೊರೆದು ಎದ್ದ ಬಯಸುವವರಾರು...

ನನ್ನ ನಾಳೆ

ನನ್ನ ಮನಸ್ಸೊಂದು ಬಿಳಿಯ ಹಾಳೆ ಅದರಲಿ ನೀವು ಬರೆದಂತೆ ಇರುವುದು ನನ್ನ ನಾಳೆ! ನನಗಿಲ್ಲ ನನ್ನತನ ಹುಟ್ಟುತ್ತಾ ಬರೆದರು ನನ್ನ ಭವಿಷ್ಯ ನನ್ನ ಹೆತ್ತ ತಂದೆ. ಬೆಳೆದಂತೆ ಅಂದರು ನಿನ್ನ ಜೀವನದ ನಾಳಿನ ಲಿಪಿಕಾರ...

ಮುಪ್ಪು

ಮಾನವನ ಮೂರನೇ ಹಂತವೇ ಮುಪ್ಪು ಮುಪ್ಪು ಬಂದಾಗ ಬೆಪ್ಪು ಎನ್ನುವವರೇ ಹೆಚ್ಚು ಬಾಲ್ಯ ಕಳೆದು ಯೌವ್ವನ ಮಾಗಿದಂತೆ ಮುಪ್ಪು ಮೆಲ್ಲಗೆ ಅಡಿಯಿಡುವುದಂತೆ ಮುಪ್ಪಿನ ಕಲ್ಪನೆಯೇ ಭೀಕರ ಊರಿಗೆ ದೂರ ಸಾವಿಗೆ ಹತ್ತಿರ ರಾಜ ಮಹಾರಾಜ...

ಧರ್ಮ

ಧರ್ಮರಾಯ, ನೀನು ನಡೆದದ್ದು ಧರ್ಮದ ಹಾದಿಯಲ್ಲಿ ಎಲ್ಲ ಹೊಗಳುತ್ತಾರೆ ನಿನ್ನನ್ನು. ಆದರೆ ದ್ರೌಪದಿಗೆ ನೀನು ಮಾಡಿದ್ದು ಮೋಸ? ಅರ್ಜುನ ಜಯಸಿ ತಂದವಳ ಅವನಿಗೇ ಬಿಡದೆ ತಾಯಿ ಅರಿವಿಲ್ಲದೇ ಆಡಿದ ಮಾತಿನ ನೆವದಿಂದ ಐವರ ಪತ್ನಿಯಾಗಿಸಿದೆ-...

ಯೌವ್ವನ

ಬಂದಾಗ ಯೌವ್ವನದ ಮತ್ತು ಮುಗ್ಧತೆ ಸ್ವಾತಂತ್ರ್ಯಕ್ಕೆ ಕಲ್ಲು ಬಿತ್ತು ನೋಡುವ ನೋಟಕೆ ಆಡುವ ಮಾತಿಗೆ ಅಂಕೆ ಹೊಸ್ತಿಲು ದಾಟದಂತೆ ಸೀಮಾರೇಖೆ ಹುಡುಗಾಟಕೆ ಹೊರನೋಟಕೆ ಹಾಕಿದರು ದೊಡ್ಡ ಪರದೆ ಪ್ರಾರಂಭ ತಪ್ಪು ಒಪ್ಪುಗಳ ತಗಾದೆ ಅತ್ತ...

ಕಾವಲುಗಾರ

ಜಗದ ಕಾವಲುಗಾರ ನಿದ್ರಿಸಿದ್ದಾನೆ- ಕುಂಭಕರ್ಣನಂತೆ! ಇಲ್ಲಿಗೆ ಯಾರೂ ಬರಬಹುದು ಇಲ್ಲಿಂದ ಯಾರೂ ಹೋಗಬಹುದು ಇಲ್ಲಿ ಏನೂ ನಡೆಯಬಹುದು ಕಾವಲುಗಾರ ನಿದ್ರಿಸಿದ್ದಾನೆ- ಕುಂಭಕರ್ಣನಂತೆ! ಕನ್ನ ಹಾಕಬಹುದು, ಎಲ್ಲ ದೋಚಬಹುದು ಕೊಚ್ಚಿ ಹಾಕಬಹುದು ದಂಗೆ ಎಬ್ಬಿಸ ಬಹುದು...

ಹುಟ್ಟಿಬರಲಾರಿರಾ ಇನ್ನೊಮ್ಮೆ?

ಹುಟ್ಟಿ ಬರಲಾರಿರಾ ಇನ್ನೊಮ್ಮೆ ಪರಿಶುದ್ಧ ನೀರು ಗಾಳಿ ಬೆಳಕಿಲ್ಲದೆ ಹಬೆಯಲಿ ಕಂಗೆಟ್ಟು ಕುಳಿತ ಜನತೆಗೆ ಹೊಸಬೆಳಕಾಗಿ ಹೊಸದಾರಿ ತೋರಲು ಹುಟ್ಟಿಬರಲಾರಿರಾ ಇನ್ನೊಮ್ಮೆ? ಭೂಮಿ ಉತ್ತು ಬೀಜ ಬಿತ್ತಿ ಬೆಳೆ ಎತ್ತುತ್ತಿದ್ದವರ 'ಕೈಗಾರೀಕರಣ ಇಲ್ಲವೆ ನಾಶ'...