Home / Kannada

Browsing Tag: Kannada

ಚುಟುಕಗಳೆಂದರೆ, ಕಾವ್ಯ ರಸಾನುಭವದ ಗುಟುಕುಗಳು, ಕಾವ್ಯಲಯದ ಸಣ್ಣ ಸಣ್ಣ ಕಿಟಿಕಿಗಳು, ಮುಳ್ಳುಬೇಲಿಯ ಮೇಲೆ ಹಬ್ಬಿರುವ ಕಾಡುಬಳ್ಳಿಗಳಲ್ಲಿ ಕ್ಷಣದಲ್ಲರಳಿ ಮರುಕ್ಷಣದಲ್ಲಿಲ್ಲವಾಗುವ ಬಣ್ಣ ಬಣ್ಣದ ಹೂವುಗಳು ಕಾವ್ಯರಾಶಿಯನ್ನಳೆವ ಸೇರು, ಪಾವು, ಚಟಾಕುಗಳ...

ಮುಂದೆ ಇಡುವ ಅಡಿಯು ಜಾರಿ ಓಡಿ ಬರುವ ಗಾಡಿ ಹಾರಿ ತುಂಬಿತೇನೋ ಕೆಂಪು ರಂಗು ದಾರಿ ಹಾ ಬಿದ್ದ ಜೀವ ಉಸಿರ ಕಾರಿ ! ಬಾಳಿಗೆಲಿವ ಧ್ಯೇಯ ಬಲಿ ಆಯ್ತು ನಲಿವ ಹೊಸ ದೀಪ ನಂದಿ ಹೋಯ್ತು ಎಲುಬು ಮಾಂಸ ಸಿಡಿದು ಹೋಳಾಯ್ತು ತುಂಬಿ ಬೆಳೆದ ದೇಹ ತುಂಡಾಯ್ತು ! ಹರ...

ಸ್ವಾಗತಿಸಿದೆ ಋತುರಾಜನನು ರಾಗನಿರತ ಲೋಕ ಕೋಗಿಲೆಗಳ ಸವಿಗೊರಲಿನಲಿ ರಾಗಿಣಿಯರ ನಗೆ ಹೊರಳಿನಲಿ ತೂಗಿ ತಲೆಯೊಲೆವ ತೆನೆಯಲಿ-ಹಕ್ಕಿಯ ಮೋದಭರಿತ ಸವಿಗಾನದಲಿ ದೂರದ ಇನಿಯಳ ಕನವರಿಸಿ ಮಾತು ಮಾತಿಗೂ ಪರಿತಪಿಸಿ ಕೊರಗುವ ವಿರಹಿಯ ತಾಪದಲಿ ಪ್ರೀತಿಗೆ ಎತ್ತಿದ...

ನಿನ್ನೆ ಮೊನ್ನೆಯೇ ಮದುವೆಯಾದಂತಿದೆ ಆಕೆಯ ಕೈಮೇಲಿನ ಮೆಹೆಂದಿ, ಹಸಿರುಬಳೆ ಕಾಲುಂಗುರ ಗರಿಗರಿಯಾದ ಸೀರೆ- ಆತನ ಮುಂಗೈ ರೇಶ್ಮೆದಾರ ಮದುವೆಯ ಥ್ರೀ ಪೀಸ್ ಸೂಟು. ಹನಿಮೂನಿಗೆ ಸಮಯವೇ ಇಲ್ಲವೆಂದಾಗಿದ್ದರೆ ಇಲ್ಲಾದರೂ ಒಂದಿಷ್ಟು ಪ್ರೀತಿ ಮಾತು ಮುತ್ತು ನ...

ಮನಸೇ ಹಸಿರಾಗಿರು ನೀನು ಈ ಉಸಿರು ತಾನಾಗಿ ನಿಲ್ಲುವ ತನಕ ಉಸಿರೇ ಹೆಸರಾಗಿರು ನೀನು ಈ ಬಸಿರ ಖಿಣವು ತಾ ತೀರುವ ತನಕ ||ಪ|| ಚೆಲುವೊ-ನಲಿವೋ ಹೃನ್ಮನದ ಒಲವೊ ಗೆಲುವ ಛಲದ ಬಲವೊಽ ಹೂವೊ ಹಣ್ಣೊ ತಂಬೆಲರ ಸೊಗಸೊ ನವನವದ ನವ್ಯ ನಂದನವೊಽ ಮನ ಮನದಿ ಮಥನ ಸೌಗ...

ಯುದ್ಧಗಳ ಹಿಂಸೆ ಗದ್ದಲದಲಿ ರಣರಂಗ ರಕ್ತ ಚೆಲ್ಲಿದೆ ಮತ್ತೆ ಗಾಯಾಳುಗಳು ಚೀರುತ್ತಿದ್ದಾರೆ ಸಾವಿನಲ್ಲಿ ನೋವು ಹರಡಿಕೊಂಡಿದೆ ಅಲ್ಲಿ ಖಾಲಿ ಆವರಿಸಿಕೊಂಡಿದೆ. ಘಟಿಸುವ ಘಟನೆಗಳನ್ನು ದಾಖಲೆಗಳ ಲೆಕ್ಕಕ್ಕೆ ಇಟ್ಟವರ್‍ಯಾರು ಇತಿಹಾಸದಲಿ ಹಸಿದ ಕರಳು ಮರೆತ...

ಹೃದಯ ಒಲವಿಗೆ ಅಲ್ಲದಿನ್ನೇತಕೆ? ಬಾನಿನಲಿ ತಾರೆಗಳ ಮಾಲೆಯೇಕೆ? ಆ ಮೂರು ಮೋಡಗಳ ನಡುವೆ ಚೆಂಡಿನಹಾಗೆ ಕೇಸರಿಯ ಕಿರಣಗಳ ಮಂಜಮೇಲೆ ಹರಹುತ್ತ ಏರುತಿಹ ಚಂದಿರನ ಬೆಳ್ಳಿಯಲಿ ನೀ ಬಾರದಿರೆ ನನ್ನ ಹಾಡಿದೇಕೆ? ಓ ನನ್ನ ಉಷೆ, ನಿನ್ನ ‘ಓ’ ದನಿಯೆ ಕೇಳದಿದೆ, ಎ...

ಅಧ್ಯಾಯ ೧೩ ಶಾಮರಾಯರು ಟೆಂಟನ್ನು ಪ್ರವೇಶಿಸಿದಾಗ ಬಯಲಾಟದ ಯಾವುದೋ ರಸವತ್ತಾದ ಪ್ರಸಂಗ ನಡೆಯುತ್ತಿತ್ತು. ಭವ್ಯವಾದ ರಂಗಮಂಟಪ, ಡೈನಮೋ ಲೈಟು ಹಾಕಿ ಜಗಜಗಿಸುತ್ತಿತ್ತು. ಶಾಮರಾಯರು ಸುತ್ತಲೂ ನೋಡಿದರು. ಟೆಂಟು ಜನರಿಂದ ಭರ್ತಿಯಾಗಿರುವುದನ್ನು ಕಂಡು ಖ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...